ಕರಗಿದ ಕನ್ನಡಿಗರ ಕಷ್ಟ: ನಾಳೆ ಇಂಗ್ಲೆಂಡ್​ನಿಂದ ಬೆಂಗಳೂರಿಗೆ, ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮನ

ಮೊದಲ ಹಂತದ ವಂದೇ ಭಾರತ್ ಮಿಷನ್ ಮೇ 13ಕ್ಕೆ ಮುಕ್ತಾಯವಾಗಲಿದ್ದು, ಮೇ 15ರಿಂದ ಎರಡನೇ ಹಂತದ ವಂದೇ ಭಾರತ್ ಮಿಷನ್ ಆರಂಭವಾಗಲಿದೆ. ಮೊದಲ ಹಂತದ ರೀತಿಯಲ್ಲೇ ಎರಡನೇ ಹಂತದಲ್ಲೂ ಸುಮಾರು 15 ಸಾವಿರ ಜನರನ್ನು ಕರೆತರಲಾಗುವುದು.

news18-kannada
Updated:May 9, 2020, 7:09 PM IST
ಕರಗಿದ ಕನ್ನಡಿಗರ ಕಷ್ಟ: ನಾಳೆ ಇಂಗ್ಲೆಂಡ್​ನಿಂದ ಬೆಂಗಳೂರಿಗೆ, ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮನ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಲಾಕ್​ಡೌನ್​ನಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಹಮ್ಮಿಕೊಳ್ಳಲಾಗಿದ್ದು. ಮೇ 7ರಿಂದ ಆರಂಭವಾಗಿರುವ ಮೊದಲ ಹಂತದ ವಂದೇ ಭಾರತ್ ಮಿಷನ್ ಅಡಿ ನಾಳೆ ಇಂಗ್ಲೆಂಡ್​ನಲ್ಲಿ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳುತ್ತಿದ್ದಾರೆ.

ನಾಳೆ ಬೆಳಗ್ಗೆ 9:45ಕ್ಕೆ ಲಂಡನ್ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಶೇಷ ವಿಮಾನವು ನಾಳೆ ರಾತ್ರಿ ಬೆಂಗಳೂರಿನ‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯು ತಿಳಿಸಿದೆ. ಈ ವಿಶೇಷ ವಿಮಾನದ ಮೂಲಕ 250 ಮಂದಿ ಇಂಗ್ಲೆಂಡಿನಿಂದ ಕರುನಾಡಿಗೆ ವಾಪಸ್ ಆಗಲಿದ್ದಾರೆ.

ಮೊದಲ ಹಂತದಲ್ಲಿ ವಂದೇ ಭಾರತ್ ಮಿಷನ್ ‌ಮತ್ತು ಸಮುದ್ರ ಸೇತು ಯೋಜನೆಯಡಿ 12 ದೇಶಗಳಲ್ಲಿ ಸಿಲುಕಿರುವ ಅಂದಾಜು 15 ಸಾವಿರ ಜನ ಭಾರತೀಯರನ್ನು 64 ವಿಶೇಷ ವಿಮಾನಗಳು ಮತ್ತು 11 ಹಡಗುಗಳ ಮೂಲಕ ಕರೆತರಲಾಗುತ್ತಿದೆ. ಅದರ ಭಾಗವಾಗಿ ಮೇ 12ರಂದು ಸಿಂಗಾಪುರದಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ವಿಮಾನ‌ ಆಗಮಿಸಲಿದೆ. ಮೇ 12 ಸಂಜೆ 6‌.15ಕ್ಕೆ ಸಿಂಗಾಪುರ್ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಆ ವಿಶೇಷ ವಿಮಾನವು ಸುಮಾರು 250 ಜನರನ್ನು ಬೆಂಗಳೂರಿಗೆ ಕರೆತರಲಿದೆ.

ಇದಲ್ಲದೆ ಕರ್ನಾಟಕದವರೇ ಆದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಗಳ ಸಚಿವ ಡಿ.ವಿ. ಸದಾನಂದಗೌಡರು ಇನ್ನೊಂದು ಸಿಹಿ ಸುದ್ದಿ ನೀಡಿದ್ದಾರೆ. ಮೇ 14ರಂದು ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ವಿಶೇಷ ವಿಮಾನವು ಮೇ 14ರ ಬದಲು 12ರಂದೇ ಬರಲಿದೆ. ಮೇ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಸಂಸ್ಥೆ ಒಪ್ಪಿಗೆ ನೀಡಿದೆ. 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿರುವ ಏರ್ ಇಂಡಿಯಾ ಸಂಸ್ಥೆಯ IX 0384 ವಿಶೇಷ ವಿಮಾನವು ಮೇ 12ರಂದು ಸಂಜೆ 4.10ಕ್ಕೆ ದುಬೈನಿಂದ ಹೊರಡಲಿದೆ. ಅಂದು ರಾತ್ರಿ 9.10ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

ಮೊದಲಿಗೆ ಈ ವಿಮಾನವು ಮೇ 12ಕ್ಕೇ ಹೊರಡಲು ನಿಗದಿಯಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ವಿದೇಶಾಂಗ ಇಲಾಖೆಯು ವಿಮಾನದ ವೇಳಾಪಟ್ಟಿಯನ್ನು ಬದಲಿಸಿ ಹೊರಡುವ ದಿನವನ್ನು ಮೇ 14ಕ್ಕೆ ಎಂದು ನಿಗದಿಪಡಿಸಿತು. ಇದರಿಂದ ಸಹಜವಾಗಿ ಪ್ರಯಾಣಿಕರು‌ ಮತ್ತು ಅವರ ಕುಟುಂಬ ವರ್ಗದವರು ಗೊಂದಲಕ್ಕೀಡಾದರು. ಆತಂಕಕ್ಕೀಡಾದರು. ಸಮಸ್ಯೆ ಗೊತ್ತಾಗುತ್ತಿದ್ದಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಚರ್ಚೆ ನಡೆಸಿದ ರಾಜ್ಯದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮೊದಲು ನಿಗದಿಯಾಗಿದ್ದಂತೆ ಮೇ 12ಕ್ಕೆ ದುಬೈನಿಂದ ವಿಮಾನ ಹೊರಡುವಂತೆ ಕೇಳಿಕೊಂಡರು. ಸದಾನಂದಗೌಡ ಮನವಿಗೆ ಸ್ಪಂದಿಸಿರುವ ವಿದೇಶಾಂಗ ಇಲಾಖೆಯು ವಿಮಾನದ ದಿನಾಂಕ ಬದಲು ಮಾಡಿ ಮೊದಲು ನಿಗದಿಯಾಗಿದ್ದಂತೆ ಮೇ 12ಕ್ಕೆ ದುಬೈನಿಂದ ವಿಮಾನ ಹೊರಡುವುದನ್ನು ಖಚಿತ ಪಡಿಸಿದೆ.

ಇದನ್ನು ಓದಿ: ನನಗೆ ಯಾವುದೇ ಕಾಯಿಲೆಯಿಲ್ಲ, ಆರೋಗ್ಯವಾಗಿದ್ದೇನೆ; ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದ ಅಮಿತ್ ಶಾ

ವಿಮಾನ ಬದಲಾವಣೆ ಆಗಿ ಮೊದಲು ನಿಗದಿಯಾಗಿದ್ದಂತೆ ಮೇ 12ರಂದೇ ದುಬೈನಿಂದ ಹೊರಡುತ್ತಿರುವ ಬಗ್ಗೆ ಸಚಿವ ಡಿ.ವಿ. ಸದಾನಂದಗೌಡ ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ಹಾರಾಟದ ಸಮಯ ಬದಲಾವಣೆಗೆ ಶ್ರಮಿಸಿದವರಿಗೆ ಸದಾನಂದಗೌಡ ಧನ್ಯವಾದವನ್ನೂ‌ ಹೇಳಿದ್ದಾರೆ.ಮೊದಲ ಹಂತದ ವಂದೇ ಭಾರತ್ ಮಿಷನ್ ಮೇ 13ಕ್ಕೆ ಮುಕ್ತಾಯವಾಗಲಿದ್ದು, ಮೇ 15ರಿಂದ ಎರಡನೇ ಹಂತದ ವಂದೇ ಭಾರತ್ ಮಿಷನ್ ಆರಂಭವಾಗಲಿದೆ. ಮೊದಲ ಹಂತದ ರೀತಿಯಲ್ಲೇ ಎರಡನೇ ಹಂತದಲ್ಲೂ ಸುಮಾರು 15 ಸಾವಿರ ಜನರನ್ನು ಕರೆತರಲಾಗುವುದು. ಮೊದಲ ‌ಹಂತದಲ್ಲಿ 12 ದೇಶಗಳಿಂದ ಕರೆತರಲಾಗಿತ್ತು. ಎರಡ‌ನೇ ಹಂತದಲ್ಲಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು (7 ದೇಶಗಳ) ಕರೆತರಲಾಗುತ್ತದೆ.
First published: May 9, 2020, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading