• ಹೋಂ
 • »
 • ನ್ಯೂಸ್
 • »
 • Corona
 • »
 • ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಟೊಮ್ಯಾಟೊ ಜ್ಯೂಸ್ ಕುಡಿಯಿರಿ..!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಟೊಮ್ಯಾಟೊ ಜ್ಯೂಸ್ ಕುಡಿಯಿರಿ..!

tomato juice

tomato juice

Coronavirus: ಕಚ್ಚಾ ಟೊಮ್ಯಾಟೊ ಅಥವಾ ಅದರ ರಸವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಈ ಪಾನೀಯಗಳನ್ನು ಹೇಗೆ ತಯಾರಿಸಬೇಕೆಂದು ಇಲ್ಲಿ ತಿಳಿಸಲಾಗಿದೆ.

 • Share this:

  ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿಯ ಅವಶ್ಯಕತೆಯಿದೆ ಎಂದು ಈಗಾಗಲೇ ವೈದ್ಯಕೀಯ ಲೋಕ ಸ್ಪಷ್ಟಪಡಿಸಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾದಂತೆ ಕಾಯಿಲೆಗಳು ಕೂಡ ದೂರವಾಗುತ್ತವೆ. ಆಗಾಗ್ಗೆ ಕಾಣಿಸಿಕೊಳ್ಳುವ ಶೀತ, ಕೆಮ್ಮು ಮತ್ತು ಶೀತ ಇತ್ಯಾದಿ ಸಮಸ್ಯೆಗಳು ರೋಗನಿರೋಧಕ ಶಕ್ತಿ ದುರ್ಬಲವಾಗಿದೆ ಎಂಬುದರ ಸೂಚಕ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯಕರ ಆಹಾರಗಳ ಸೇವನೆ ಬಹಳ ಮುಖ್ಯ.


  ಕೆಲವು ಆಯುರ್ವೇದ ಮಸಾಲೆ ಪದಾರ್ಥ ಮತ್ತು ಪಾನೀಯಗಳು ಮೂಲಕ ಕೂಡ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು. ಹೀಗೆ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸುವ ಜ್ಯೂಸ್​ಗಳಲ್ಲಿ ಟೊಮ್ಯಾಟೊ ಡ್ರಿಂಕ್ಸ್ ಕೂಡ ಒಂದು. ಟೊಮ್ಯಾಟೊದಲ್ಲಿ ವಿಟಮಿನ್ ಸಿ ಇದ್ದು, ಇದು ದೇಹದಲ್ಲಿ ಆ್ಯಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಇದು ಸಕ್ರಿಯವಾಗಿ ನಿರತವಾಗಿರುತ್ತದೆ. ಹಾಗೆಯೇ ಕಚ್ಚಾ ಟೊಮ್ಯಾಟೊ ಅಥವಾ ಅದರ ರಸವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಈ ಪಾನೀಯಗಳನ್ನು ಹೇಗೆ ತಯಾರಿಸಬೇಕೆಂದು ಇಲ್ಲಿ ತಿಳಿಸಲಾಗಿದೆ.


  ಬೇಕಾಗುವ ಪದಾರ್ಥಗಳು:
  1 ಕಪ್ ನೀರು
  ಸ್ವಲ್ಪ ಉಪ್ಪು
  2 ಟೊಮ್ಯಾಟೊ


  ತಯಾರಿಸುವ ವಿಧಾನ:

  ಮೊದಲನೆಯದಾಗಿ, ಟೊಮ್ಯಾಟೊವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಜ್ಯೂಸರ್ ಜಾರ್​ನಲ್ಲಿ ಹಾಕಿ. ಅದಕ್ಕೆ ಒಂದು ಕಪ್ ನೀರನ್ನು ಸೇರಿಸಿ, ಮಿಕ್ಸಿಯನ್ನು 4-5 ನಿಮಿಷಗಳ ಕಾಲ ಆನ್ ಮಾಡಿ. ಚೆನ್ನಾಗಿ ಜ್ಯೂಸ್ ಆಗಿದೆ ಎಂದು ಕಂಡು ಬಂದಾಗ ಅದನ್ನು ಗ್ಲಾಸ್​ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಹೀಗೆ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತದೆ.

  Published by:zahir
  First published: