• Home
  • »
  • News
  • »
  • coronavirus-latest-news
  • »
  • ಟೊಮೊಟೋ ಸೀಸನ್​ ಆರಂಭ: ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಜನವೋ ಜನ

ಟೊಮೊಟೋ ಸೀಸನ್​ ಆರಂಭ: ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಜನವೋ ಜನ

ಟೊಮೆಟೊ ಮಾರುಕಟ್ಟೆ

ಟೊಮೆಟೊ ಮಾರುಕಟ್ಟೆ

ಇನ್ನು, ಪ್ರತಿವರ್ಷ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೊಟೋ ಸೀಸನ್ ಆರಂಭವಾಗುತ್ತೆ. ಅಂದರೆ, ಕೋಲಾರ ಜಿಲ್ಲೆಯ ಬಹುತೇಕ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೊಟೋ ಬೆಳೆದು ಕಟಾವು ಮಾಡಿ ಮಾರುಕಟ್ಟೆಗೆ ತರುವ ಸಮಯ ಈ ಮೂರು ತಿಂಗಳಾಗಿರುತ್ತದೆ.

  • Share this:

ಕೋಲಾರ(ಜೂ.11): ಅನಾದಿಕಾಲದಿಂದ ನೀರಿನ ಅಭಾವವನ್ನು ಎದುರಿಸುತ್ತಿರುವ ಬಯಲುಸೀಮೆ ಪ್ರದೇಶ ಕೋಲಾರ ಜಿಲ್ಲೆಯಲ್ಲಿನ ರೈತರಿಗೆ ಟೊಮೆಟೋ ಬೆಳೆಯೇ ಆದಾಯ. ಹೀಗೆ ಜಿಲ್ಲೆಯಲ್ಲಿ ಟೊಮೊಟೋ ಬೆಳೆ ಹೆಚ್ಚಿಗೆ ಬೆಳೆಯೊದರಿಂದಲೇ ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೀಗ ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಟೊಮೊಟೋ ವಹಿವಾಟು ನಡೆಸುವ ಕೇಂದ್ರವಾಗಿದೆ.


ಇನ್ನು, ಪ್ರತಿವರ್ಷ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೊಟೋ ಸೀಸನ್ ಆರಂಭವಾಗುತ್ತೆ. ಅಂದರೆ, ಕೋಲಾರ ಜಿಲ್ಲೆಯ ಬಹುತೇಕ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೊಟೋ ಬೆಳೆದು ಕಟಾವು ಮಾಡಿ ಮಾರುಕಟ್ಟೆಗೆ ತರುವ ಸಮಯ ಈ ಮೂರು ತಿಂಗಳಾಗಿರುತ್ತದೆ.


ಇಲ್ಲಿಯೇ ಟೊಮೊಟೋ ಕೊಳ್ಳಲು ಈ ಮೂರು ತಿಂಗಳ ಅವಧಿಯಲ್ಲಿ ಕೋಲ್ಕತ್ತಾ, ಒರಿಸ್ಸಾ, ನಾಸಿಕ್, ಮಹಾರಾಷ್ಟ್ರ, ರಾಜಸ್ಥಾನ ಸೇರಿ ಹಲವೆಡೆಯಿಂದ ಬರುತ್ತಾರೆ. ಹೀಗಾಗಿ ಜಿಲ್ಲೆಯ ವಿವಿಧ ಭಾಗಗಳಿಂದ 21 ಸಾವಿರ ಕ್ವಿಂಟಾಲ್​ಗೂ ಹೆಚ್ಚು ಟೊಮೊಟೋ ಬಂದು ಬೀಳುತ್ತದೆ. ಸಾಕಷ್ಟ ಜನ ಬರುವ ಕಾರಣ ಕೊರೋನಾ ಸೋಂಕಿನ ಸ್ಯಾನಿಟೈಸರ್​​​ ಬಳಸಲಾಗುತ್ತಿದೆ.


ಕೋಲಾರ ಎಪಿಎಂಸಿ ಮಾರುಕಟ್ಟೆ ಒಟ್ಟು 21 ಎಕರೆ ಪ್ರದೇಶದಲ್ಲಿ ಇದೆ. ಇಲ್ಲಿ ನೂರಕ್ಕು ಹೆಚ್ಚು ಟೊಮೆಟೋ ಮಂಡಿಗಳಿವೆ. ತರಕಾರಿ ವಹಿವಾಟು ನಡೆಸುವ ಕಾರಣ ನಿತ್ಯವು ಇಲ್ಲಿ ಟ್ರಾಪಿಕ್ ಕಿರಿಕಿರಿ ಇದ್ದೇ ಇರುತ್ತೆ. ಇದರ ಜೊತೆಗೆ ಟೊಮೆಟೋ ಸೀಸನ್ ಆರಂಭವಾದರೆ ಸಂಚಾರದಟ್ಟಣೆ ಹೆಚ್ಚಿ ನಿಯಂತ್ರಣ ಸಾಧಿಸಲು ಹರಸಾಹಸ ಪಡಬೇಕಾಗುತ್ತದೆ.ಮಾರುಕಟ್ಟೆಗೆ ಬರುವ ಟೊಮೆಟೋ ಪ್ರಮಾಣ ಹೆಚ್ಚುತ್ತಿದೆ. ವಹಿವಾಟು ಸುಲಭವಾಗಿ ನಡೆಸಲು ಹೆಚ್ಚಿನ ಸ್ಥಳಾವಕಾಶ ನೀಡುವಂತೆ ಅನುಮತಿ ಕೋರಿ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕು ಮನವಿ ನೀಡಲಾಗಿದೆ. ಕೋಲಾರ ತಾಲೂಕಿನ ಚೆಲುವನಹಳ್ಳಿ ಬಳಿಯ ಅರಣ್ಯ ಇಲಾಖೆ ವ್ಯಾಪ್ತಿಯ 30 ಎಕರೆ ಜಾಗ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಕಾರಣ ಜಾಗವನ್ನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿಲಾಗಿದೆ.


ಇದನ್ನೂ ಓದಿ: ‘ಮಕ್ಕಳ ಆನ್​ಲೈನ್​ ಶಿಕ್ಷಣ ರದ್ದು, ಆಗಸ್ಟ್​ವರೆಗೂ ಸ್ಕೂಲ್​​ ಓಪನ್​​ ಇಲ್ಲ‘ - ಸಚಿವ ಸುರೇಶ್​ ಕುಮಾರ್​

Published by:Ganesh Nachikethu
First published: