ಜಪಾನ್​ನಲ್ಲಿ ನಿಲ್ಲದ ಕೊರೋನಾ ವೈರಸ್ ದಾಳಿ: ಟೋಕಿಯೋ ಒಲಿಂಪಿಕ್ಸ್​ 2020 ಮುಂದೂಡಿಕೆ?

ನಿಗದಿಯಂತೆ ಜುಲೈ 4ರಿಂದ ಆಗಸ್ಟ್​ 9ರವರೆಗೆ ಜಪಾನ್​ನ ಟೋಕಿಯೋದಲ್ಲಿ ಒಲಿಂಪಿಕ್ಸ್​-2020 ಕ್ರೀಡಾಕೂಟ ನಡೆಯಬೇಕಾಗಿತ್ತು. ಈ ಕ್ರೀಡಾಕೂಟದಲ್ಲಿ 11,091 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿತ್ತು.

ಒಲಿಂಪಿಕ್ಸ್​ 2020

ಒಲಿಂಪಿಕ್ಸ್​ 2020

 • Share this:
  ಈ ಬಾರಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಜಪಾನ್​ ಆತಿಥ್ಯ ವಹಿಸಬೇಕಾಗಿತ್ತು. ಆದರೆ, ಜಪಾನ್, ಇರಾನ್, ಇಟಲಿ ಮುಂತಾದ ದೇಶಗಳಲ್ಲಿ ಕೊರೋನಾ ವೈರಸ್ ದಾಳಿ ಹೆಚ್ಚಾಗಿರುವುದರಿಂದ ಟೋಕಿಯೋದಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಮುಂದೂಡುವ ಸಾಧ್ಯತೆಯಿದೆ.

  ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಈ ವರ್ಷ ಜಪಾನ್ ಆತಿಥ್ಯ ವಹಿಸಲು ಒಪ್ಪಿಗೆ ನೀಡಿತ್ತು. ಈ ಬಗ್ಗೆ ಇಂಟರ್​ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಓಸಿ) ಜೊತೆಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೋನಾ ಭೀತಿ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಒಲಿಂಪಿಕ್ಸ್​ ಕ್ರೀಡಾಕೂಟದ ದಿನಾಂಕವನ್ನು ಮುಂದೂಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ.

  ನಿಗದಿಯಂತೆ ಜುಲೈ 4ರಿಂದ ಆಗಸ್ಟ್​ 9ರವರೆಗೆ ಜಪಾನ್​ನ ಟೋಕಿಯೋದಲ್ಲಿ ಒಲಿಂಪಿಕ್ಸ್​-2020 ಕ್ರೀಡಾಕೂಟ ನಡೆಯಬೇಕಾಗಿತ್ತು. ಈ ಕ್ರೀಡಾಕೂಟದಲ್ಲಿ 11,091 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿತ್ತು. 206 ದೇಶಗಳ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವವರಿದ್ದರು. ಆದರೆ, ಜಗತ್ತಿನಾದ್ಯಂತ 3,000 ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್​ ಅಟ್ಟಹಾಸ ಕಡಿಮೆಯಾಗುವವರೆಗೂ ಒಲಿಂಪಿಕ್ಸ್​ ಮುಂದೂಡುವ ಬಗ್ಗೆ ಚರ್ಚಿಸಲಾಗುತ್ತಿದೆ.

  ಇದನ್ನೂ ಓದಿ: ಕೊರೊನಾ ವೈರಸ್​; ಜಪಾನ್​ನಿಂದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರು ತಾಯ್ನಾಡಿಗೆ ವಾಪಾಸ್​

  2020ರೊಳಗೆ ನಡೆಸಬೇಕಾಗಿದ್ದ ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಪೂರ್ವ ನಿಗದಿಯಂತೆ ಜುಲೈ 24ರಂದು ನಡೆಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಅದೇ ದಿನ ಒಲಿಂಪಿಕ್ಸ್​ ಕ್ರೀಡಾಕೂಟ ನಡೆಸಲಿದ್ದೇವೆ ಎಂದು ಜಪಾನ್ ಸರ್ಕಾರ ತಿಳಿಸಿದೆ. ಈ ವರ್ಷ ನಡೆಯುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ 12.51 ಬಿಲಿಯನ್ ಡಾಲರ್ ಬಜೆಟ್ ನಿಗದಿ ಮಾಡಲಾಗಿದೆ. ಜಪಾನ್​ ಸರ್ಕಾರ 120 ಬಿಲಿಯನ್ ಯೆನ್ ನೀಡಲಿದೆ.

  ಇದನ್ನೂ ಓದಿ: ಕೊರೋನಾ ಭೀತಿ; ಚೀನಾ, ಮಲೇಷಿಯಾ, ಇರಾನ್​, ಜಪಾನ್​, ಥಾಯ್ಲೆಂಡ್​ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶವಿಲ್ಲ

  ಇತ್ತೀಚೆಗಷ್ಟೆ ಜಪಾನ್​ನ ಡೈಮಂಡ್​ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು. ಈ ಹಡಗಿನಲ್ಲಿ ಭಾರತೀಯರು ಸೇರಿದಂತೆ 3,700ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ 138 ಭಾರತೀಯರು ಕೂಡ ಸೇರಿದ್ದರು. ಅವರಲ್ಲಿ 119 ಭಾರತೀಯರಿಗೆ ಕೊರೋನಾ ಸೋಂಕು ತಗುಲದ ಕಾರಣ ಅವರನ್ನು ಭಾರತಕ್ಕೆ ಕಳುಹಿಸಲಾಗಿತ್ತು.
  First published: