Google Doodle: ಕೊರೋನಾ ನಡುವೆಯೂ ಮನೆಯಿಂದ ಹೊರ ಬಂದು ಸೇವೆ ಸಲ್ಲಿಸುತ್ತಿರುವವರಿಗೆ ಗೂಗಲ್​ ಡೂಡಲ್​ ಧನ್ಯವಾದ

Google Doodle: ಕೊರೋನಾ ತಡೆಯುವ ಉದ್ದೇಶದಿಂದ ವರ್ಕ್​ ಫ್ರಮ್​ ಹೋಮ್​ ಮಾಡುತ್ತಿರುವವರಿಗೆ ಮತ್ತು ವಿಡಿಯೋ ಕಾಲ್​ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕರಿಗೂ ಡೂಡಲ್​ನಲ್ಲಿ ಧನ್ಯವಾದ ಹೇಳಿದೆ.

ಗೂಗಲ್​ ಡೂಡಲ್​

ಗೂಗಲ್​ ಡೂಡಲ್​

  • Share this:
    ಮಾಹಾಮಾರಿ ಕೊರೋನಾ ವೈರಸ್ ದಾಳಿಗೆ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಡೀ ವಿಶ್ವದಲ್ಲಿ 23 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 1.60 ಲಕ್ಷ ಮಂದಿ ಅಸುನೀಗಿದ್ದಾರೆ. ಕೊರೋನಾ ವೈರಸ್​ ನಡುವೆಯೇ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಕಳೆದ ಒಂದು ವಾರದಿಂದ ಇವರೆಲ್ಲರಿಗೂ ವಿಭಿನ್ನ ಡೂಡಲ್​ ಮೂಲಕ ಗೂಗಲ್​ ಧನ್ಯವಾದ ಅರ್ಪಿಸುತ್ತಾ ಬಂದಿದೆ. ಇಂದು ಎಲ್ಲರಿಗೂ ಒಂದೇ ಬಾರಿ ಗೂಗಲ್​ ಧನ್ಯವಾದ ಹೇಳಿದೆ.

    ಕೊರೋನಾ ವೈರಸ್​ ಅಟ್ಟಹಾಸದ ನಡುವೆಯೂ ವೈದ್ಯರು, ರೈತರು, ಆಹಾರ ಸಾಗಣೆ ಮಾಡುವ ಜನರು, ಪೊಲೀಸರು, ಅಗ್ನಿಶಾಮಕ ದಳ, ಪೌರ ಕಾರ್ಮಿಕರು, ಪ್ಯಾಕಿಂಗ್​ ಹಾಗೂ ಶಿಪ್ಪಿಂಗ್​ ಕೆಲಸ ಮಾಡುವವರು ಮನೆ ಬಿಟ್ಟು ಹೊರ ಬಂದಿದ್ದಾರೆ. ಇವರೆಲ್ಲರಿಗೂ ಧನ್ಯವಾದ ಹೇಳಲಾಗಿದೆ.

    ಇನ್ನು, ಕೊರೋನಾ ತಡೆಯುವ ಉದ್ದೇಶದಿಂದ ವರ್ಕ್​ ಫ್ರಮ್​ ಹೋಮ್​ ಮಾಡುತ್ತಿರುವವರಿಗೆ ಮತ್ತು ವಿಡಿಯೋ ಕಾಲ್​ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕರಿಗೂ ಡೂಡಲ್​ನಲ್ಲಿ ಧನ್ಯವಾದ ಹೇಳಿದೆ.

    ಇದನ್ನೂ ಓದಿ: ವಿಶ್ವಾದ್ಯಂತ 23 ಲಕ್ಷ ಜನರಿಗೆ ಕೊರೋನಾ; ಅಮೆರಿಕದಲ್ಲಿ 40 ಸಾವಿರದ ಗಡಿ ಸಮೀಪಿಸಿದ ಸಾವಿನ ಸಂಖ್ಯೆ

    ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 15 ಸಾವಿರದ ಗಡಿ ತಲುಪಿದೆ. 488 ಜನರು ಮೃತಪಟ್ಟಿದ್ದಾರೆ. 14,792 ಮಂದಿಗೆ ಸೋಂಕು ತಗುಲಿದೆ. ಈ ನಡುವೆಯೂ ಅನೇಕರು ಮನೆಯಿಂದ ಹೊರ ಬಂದು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
    First published: