ರಾಜ್ಯದಲ್ಲಿ ಮುಂದುವರೆದ ಕೊರೋನಾ ರಣಕೇಕೆ; ಒಂದೇ ದಿನ 4,537 ಪ್ರಕರಣ ದಾಖಲು, 93 ಸಾವು

ರಾಜ್ಯದಲ್ಲಿ ಒಟ್ಟು 36,631 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 22,498 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ ಶೇ.2.08ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ.2.13ರಷ್ಟಿದೆ.

news18-kannada
Updated:July 18, 2020, 6:53 PM IST
ರಾಜ್ಯದಲ್ಲಿ ಮುಂದುವರೆದ ಕೊರೋನಾ ರಣಕೇಕೆ; ಒಂದೇ ದಿನ 4,537 ಪ್ರಕರಣ ದಾಖಲು, 93 ಸಾವು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 4,537 ದಾಖಲೆ ಪ್ರಮಾಣದ ಪ್ರಕರಣಗಳು ವರದಿಯಾಗಿವೆ. ಮಾರಕ ಸೋಂಕಿಗೆ ಒಂದೇ ದಿನದಲ್ಲಿ 93 ಮಂದಿ ಬಲಿಯಾಗಿದ್ದಾರೆ.

ಸಚಿವ ಕೆ.ಸುಧಾಕರ್ ಈ ದಿನದ ಅಂಕಿ-ಸಂಖ್ಯೆಗಳ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿ, ರಾಜಧಾನಿ ಬೆಂಗಳೂರಿನಲ್ಲಿ 2125 ಪ್ರಕರಣಗಳು ದಾಖಲಾಗಿದ್ದು, 49 ಮಂದಿ ಮೃತಪಟ್ಟಿದ್ದಾರೆ. 1018 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಧಾರವಾಡದಲ್ಲಿ 186 ಪ್ರಕರಣಗಳು, ಬಳ್ಳಾರಿಯಲ್ಲಿ 155 ಪ್ರಕರಣಗಳು, ಬೆಳಗಾಂ- 137 ಕೇಸ್, ದಕ್ಷಿಣ ಕನ್ನಡ 509 ಪ್ರಕರಣಗಳು, ವಿಜಯಪುರ 175 ಕೇಸ್, ದಕ್ಷಿಣ ಕನ್ನಡ 509 ಹಾಗೂ ಯಾದಗಿರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 36,631 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 22,498 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ ಶೇ.2.08ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ.2.13ರಷ್ಟಿದೆ.

ಇದನ್ನು ಓದಿ: Karnataka Coronavirus: ಕರ್ನಾಟಕದಲ್ಲಿ ಇಂದು 3,693 ಕೊರೋನಾ ಸೋಂಕು ಪತ್ತೆ, 115 ಸಾವು; ಬೆಂಗಳೂರಿನಲ್ಲಿ 2,208 ಕೇಸ್

ನೆನ್ನೆ (ಶುಕ್ರವಾರ) 3,693 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರೊಂದರಲ್ಲೇ 2,208 ಕೊರೋನಾ ಕೇಸ್​ಗಳು ಪತ್ತೆಯಾಗಿದ್ದವು. ಬೆಂಗಳೂರಿನಲ್ಲಿ ಲಾಕ್​ಡೌನ್ ಘೋಷಿಸಿದ ಬಳಿಕ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Published by: HR Ramesh
First published: July 18, 2020, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading