ಇಂದು ರಾಜ್ಯದಲ್ಲಿ 141 ಹೊಸ ಪ್ರಕರಣಗಳು ಪತ್ತೆ; ಬೆಂಗಳೂರಿನಲ್ಲಿ ಅಧಿಕ

15 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 33 ಪ್ರಕರಣಗಳು, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಶಿವಮೊಗ್ಗ 6 ಪ್ರಕರಣಗಳು ದಾಖಲಾಗಿವೆ.

news18-kannada
Updated:May 30, 2020, 5:42 PM IST
ಇಂದು ರಾಜ್ಯದಲ್ಲಿ 141 ಹೊಸ ಪ್ರಕರಣಗಳು ಪತ್ತೆ; ಬೆಂಗಳೂರಿನಲ್ಲಿ ಅಧಿಕ
ಕೊರೋನಾ ವೈರಸ್ ಸ್ಯಾಂಪಲ್
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಂದು ರಾಜ್ಯದಲ್ಲಿ 141 ಹೊಸ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 90 ಜನ ಬೇರೆ ರಾಜ್ಯಗಳ ಪ್ರಯಾಣಿಕರಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

ಶನಿವಾರದ ಕೊರೋನಾ ಅಂಕಿ-ಸಂಖ್ಯೆಯ ಮಾಹಿತಿಯನ್ನು ಸಂಜೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಇಂದು‌ 103 ಜನ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಒಟ್ಟು 997 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

15 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 33 ಪ್ರಕರಣಗಳು, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಶಿವಮೊಗ್ಗ 6 ಪ್ರಕರಣಗಳು ದಾಖಲಾಗಿವೆ.

ಕಲ್ಬುರ್ಗಿಯಿಂದ 43 ಜನ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ‌ 21, ದಾವಣಗೆರೆ 20, ಕೋಲಾರ 5, ಬಾಗಲಕೋಟೆ 3, ಬೀದರ್ 3 ಡಿಸ್ಚಾರ್ಜ್ ಆಗಿದ್ದಾರೆ. 4290 ಜನ ಸರ್ಕಾರಿ ಕ್ವಾರಂಟೈನ್ ಸೆಂಟರ್ ಗಳಲ್ಲಿ ಇದ್ದಾರೆ. 1,12,165 ಜನ ಇದುವರಗೆ ಕ್ವಾರಂಟೈನ್ ನಲ್ಲಿ ಇದ್ದರು ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಕಳಪೆ ಬಿತ್ತನೆ ಬೀಜ ವಿತರಣೆ; ಜಮೀನಿನಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ; 110 ಎಕರೆ ಬೆಳೆ ಸಂಪೂರ್ಣ ನಾಶ
First published: May 30, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading