HOME » NEWS » Coronavirus-latest-news » TODAY PM NARENDRA MODI VIDEO CONFERENCE WITH ALL STATE CMS OVER ON LOCKDOWN ISSUE RH

ಕೊರೋನಾ ನಿಯಂತ್ರಣ ಕ್ರಮ, ಲಾಕ್​ಡೌನ್ ಮುಂದುವರಿಕೆ ವಿಚಾರವಾಗಿ ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ

ಒಂದು ವೇಳೆ ಲಾಕ್​ಡೌನ್​ ಮುಂದುವರೆಸಿದರೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೆಲವು ವಲಯಗಳನ್ನು ನಿರ್ಬಂಧಮುಕ್ತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ, ಉಳಿದ ಎಲ್ಲ ಅಂತರರಾಜ್ಯ ಸಂಪರ್ಕ ಸೇವೆ ನಿರ್ಬಂಧ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

news18-kannada
Updated:April 11, 2020, 7:16 AM IST
ಕೊರೋನಾ ನಿಯಂತ್ರಣ ಕ್ರಮ, ಲಾಕ್​ಡೌನ್ ಮುಂದುವರಿಕೆ ವಿಚಾರವಾಗಿ ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ
ಪ್ರಧಾನಿ ನರೇಂದ್ರ ಮೋದಿ.
  • Share this:
ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಮಾರಕ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕಳೆದ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೂ ದೇಶವನ್ನು ಲಾಕ್​ಡೌನ್ ಮಾಡಲಾಗಿತ್ತು. ಆದರೆ, ಲಾಕ್​ ಡೌನ್​ ಘೋಷಿಸಿ 17 ದಿನಗಳು ಗತಿಸಿದರೂ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ದಿನಗಳ ಕಾಲ ಲಾಕ್​ಡೌನ್​ ಮುಂದುವರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ. ಕೊರೋನಾ ನಿಯಂತ್ರಣ ಸಂಬಂಧ ಆಯಾ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮ, ಹಾಗೂ ಲಾಕ್​ಡೌನ್​ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಇಲ್ಲಿ ಎಲ್ಲ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದು, ಲಾಕ್​ಡೌನ್ ಅನ್ನು ಏಪ್ರಿಲ್ 14ರಂದೇ ತೆರವುಗೊಳಿಸಬೇಕೇ ಅಥವಾ ಮುಂದುವರೆಸಬೇಕೇ ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ, ಲಾಕ್​​ಡೌನ್​ಅನ್ನು ಈ ತಿಂಗಳಾಂತ್ಯದವರೆಗೂ ಮುಂದುವರೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಈಗಾಗಲೇ ಎರಡು ದಿನದ ಹಿಂದೆಯೇ ಓರಿಸ್ಸಾ ರಾಜ್ಯ ಸರ್ಕಾರ ಏಪ್ರಿಲ್ 30ರವರೆಗೆ ಲಾಕ್​ಡೌನ್​ ವಿಸ್ತರಿಸಿದೆ. ಅಷ್ಟೇ ಅಲ್ಲದೇ, ಇಂದು ಪಂಜಾಬ್ ರಾಜ್ಯ ಸರ್ಕಾರ ಕೂಡ ಏ.30ರವರೆಗೆ ಲಾಕ್​ಡೌನ್​ ಮುಂದುವರೆಸಿದೆ. ಜೊತೆಗೆ ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ, ದೆಹಲಿ ಸರ್ಕಾರಗಳು ಲಾಕ್​ಡೌನ್ ಮುಂದುವರೆಸುವಂತೆ ಕೇಂದ್ರಕ್ಕೆ ಮನವಿ ಮಾಡಿವೆ. ಈ ನಿಟ್ಟಿನಲ್ಲಿ ಏ.30 ರವರೆಗೆ ಲಾಕ್​ಡೌನ್ ಮುಂದುವರೆಸಲು ಚಿಂತನೆ ನಡೆಸಲಾಗಿದ್ದು, ಭಾನುವಾರ ಸಂಜೆ ಈ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಲಾಕ್​ಡೌನ್​ ಮುಂದುವರೆಸಿದರೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೆಲವು ವಲಯಗಳನ್ನು ನಿರ್ಬಂಧಮುಕ್ತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ, ಉಳಿದ ಎಲ್ಲ ಅಂತರರಾಜ್ಯ ಸಂಪರ್ಕ ಸೇವೆ ನಿರ್ಬಂಧ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಓರಿಸ್ಸಾ ಬಳಿಕ ಪಂಜಾಬ್​ನಲ್ಲೂ ಮತ್ತೆ 21 ದಿನ ಲಾಕ್​ಡೌನ್ ವಿಸ್ತರಣೆ; ಕಳೆದ 24 ಗಂಟೆಯಲ್ಲಿ 896 ಪ್ರಕರಣ ದಾಖಲು

ಈವರೆಗೂ ದೇಶಾದ್ಯಂತ ಕೊರೋನಾ ಪೀಡಿತರ ಸಂಖ್ಯೆ 6,761ಕ್ಕೆ ಏರಿಕೆಯಾಗಿದ್ದು, ಕೊರೋನಾದಿಂದ ಸತ್ತವರ ಸಂಖ್ಯೆ 206ಕ್ಕೆ ಹೆಚ್ಚಳವಾಗಿದೆ. ಈವರೆಗೂ  ಕೊರೋನಾದಿಂದ 515 ಮಂದಿ ಚೇತರಿಸಿಕೊಂಡಿದ್ದಾರೆ. ಶುಕ್ರವಾರದ ಒಂದೇ ದಿನದಲ್ಲಿ  896 ಪ್ರಕರಣಗಳು ಪತ್ತೆಯಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 
First published: April 11, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories