ನಗರದಲ್ಲಿ ಇಂದು ಮತ್ತೆ ನಾಲ್ಕು ಪೊಲೀಸ್ ಠಾಣೆಗಳು ಸೀಲ್‌ಡೌನ್; ಪೊಲೀಸರಲ್ಲಿ ಹೆಚ್ಚಿದ ಆತಂಕ

ಸಂಜಯನಗರ ಹಾಗೂ ಜೆಸಿ ನಗರ ಪೊಲೀಸ್ ಠಾಣೆಯ ಒಬ್ಬೋಬ್ಬ ಪೊಲೀಸ್ ಪೇದೆಗೂ ಪಾಸಿಟಿವ್ ಆಗಿದೆ. ಹೀಗಾಗಿ ನಾಲ್ಕು ಠಾಣೆಗಳನ್ನೂ ಸ್ಯಾನಿಟೈಸ್ ಮಾಡಿ  ಸೀಲ್ ಡೌನ್ ಮಾಡಲಾಗಿದೆ. ಸುಮಾರು 40ಕ್ಕೂ ಅಧಿಕ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಲಾಗಿದೆ.

news18-kannada
Updated:July 3, 2020, 5:13 PM IST
ನಗರದಲ್ಲಿ ಇಂದು ಮತ್ತೆ ನಾಲ್ಕು ಪೊಲೀಸ್ ಠಾಣೆಗಳು ಸೀಲ್‌ಡೌನ್; ಪೊಲೀಸರಲ್ಲಿ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜುಲೈ 03); ಕೊರೋನಾ ಕಾರಣದಿಂದಾಗಿ ನಗರದಲ್ಲಿ ಇಂದು ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ನಾರ್ತ್ ಈಸ್ಟ್ ಡಿವಿಷನ್ ನ‌ ಬಾಗಲೂರು, ಯಲಹಂಕ ನ್ಯೂ ಟೌನ್, ಉತ್ತರ ವಿಭಾಗದ ಜೆ.ಸಿ. ‌ನಗರ ಹಾಗೂ ಸಂಜಯನಗರ ಪೊಲೀಸ್ ಠಾಣೆಗಳನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಯಲಹಂಕ ನ್ಯೂ ಟೌನ್‌ನಲ್ಲಿ ಕೆಲಸ ಮಾಡುತಿದ್ದ ಓರ್ವ ಪೊಲೀಸ್ ಪೇದೆಗೆ ಪಾಸಿಟಿವ್ ಆಗಿದ್ದು, ಅವರ ಸಂಪರ್ಕದಲ್ಲಿದ್ದ 10ಕ್ಕೂ ಅಧಿಕ ಪೊಲೀಸರನ್ನು ಪ್ರಾಥಮಿಕ‌ ಸಂಪರ್ಕ ಎಂದು ಗುರುತಿಸಿ ಕ್ವಾರೆಂಟೈನ್ ಮಾಡಲಾಗಿದೆ. ಬಾಗಲೂರು ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಓರ್ವ ಪೊಲೀಸ್ ಪೇದೆಗೆ ಕೋವಿಡ್ ಸೋಂಕು ತಗುಲಿದ್ದು, ಆ ಪೇದೆಯ ಸಂಪರ್ಕದಲ್ಲಿದ್ದ ಪೊಲೀಸರನ್ನು ಸಹ ಕ್ವಾರೆಂಟೈನ್ ಮಾಡಲಾಗಿದೆ.

ಅಷ್ಟೇ ಅಲ್ಲದೆ ಸಂಜಯನಗರ ಹಾಗೂ ಜೆಸಿ ನಗರ ಪೊಲೀಸ್ ಠಾಣೆಯ ಒಬ್ಬೋಬ್ಬ ಪೊಲೀಸ್ ಪೇದೆಗೂ ಪಾಸಿಟಿವ್ ಆಗಿದೆ. ಹೀಗಾಗಿ ನಾಲ್ಕು ಠಾಣೆಗಳನ್ನೂ ಸ್ಯಾನಿಟೈಸ್ ಮಾಡಿ  ಸೀಲ್ ಡೌನ್ ಮಾಡಲಾಗಿದೆ. ಸುಮಾರು 40ಕ್ಕೂ ಅಧಿಕ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಲಾಗಿದೆ. ಈವರೆಗೆ ನಗರದ ಸುಮಾರು 50ಕ್ಕೂ ಅಧಿಕ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಆಗಿದ್ದು, ಸುಮಾರು 150ಕ್ಕೂ ಅಧಿಕ ಪೊಲೀಸರಿಗೆ ಪಾಸಿಟವ್ ಆಗಿದೆ.

ಇದನ್ನೂ ಓದಿ: ವಿಸ್ತರಣಾಕಾರರು ತಮ್ಮ ಮಾರ್ಗವನ್ನು ಬದಲಿಸಿಕೊಳ್ಳಬೇಕು, ಇಲ್ಲವೇ ನಾಶವಾಗಬೇಕು: ಚೀನಾಗೆ ಮೋದಿ ಎಚ್ಚರಿಕೆ!


ಒಟ್ಬಲ್ಲಿ ನಗರದಲ್ಲಿ ಕೊರೋನಾ ಅಟ್ಟಹಾಸ ಅಧಿಕವಾಗುತ್ತಿದ್ದು, ಇಷ್ಟು ದಿನ ಧೈರ್ಯವಾಗಿ ಕೆಲಸ ಮಾಡುತಿದ್ದ ಪೊಲೀಸರು ಈಗ ಆತಂಕದಲ್ಲಿ ಕೆಲಸ ಮಾಡುವಂತಾಗಿರುವುದು ಮಾತ್ರ ವಿಪರ್ಯಾಸ.
First published: July 3, 2020, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading