HOME » NEWS » Coronavirus-latest-news » TODAY FOUR CASES CAME LIGHT TOTAL 55 CASES IN KARNATAKA RH

ರಾಜ್ಯದಲ್ಲಿ 55ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ; ಇಂದು 4 ಹೊಸ ಪ್ರಕರಣಗಳು ಪತ್ತೆ

ನೆನ್ನೆಗೆ ಒಟ್ಟು 52 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ಇದೀಗ ಮತ್ತೆ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

news18-kannada
Updated:March 26, 2020, 2:42 PM IST
ರಾಜ್ಯದಲ್ಲಿ 55ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ; ಇಂದು 4 ಹೊಸ ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಮಾರಕ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ನೆನ್ನೆಗೆ ಒಟ್ಟು 52 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ಇದೀಗ ಮತ್ತೆ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಯಾವುದು ನಾಲ್ಕು ಪ್ರಕರಣಗಳು

ರೋಗಿ 52: ಮೈಸೂರು ಮೂಲದ 35 ವರ್ಷದ ಪುರುಷ. ಈತ ಯಾವ ದೇಶದಿಂದಲೂ ಪ್ರಯಾಣಿಸಿಲ್ಲ. ಯಾವುದೇ ವಿದೇಶಿ ಪ್ರಯಾಣಿಕರ ಸಂಪರ್ಕಕ್ಕೂ ಬಂದಿಲ್ಲ. ಔಷಧ ತಯಾರಿಕಾ ಸಂಸ್ಥೆಯ ಗುಣಮಟ್ಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಆರೋಗ್ಯ ಇಲಾಖೆಯ ಮತ್ತು ವೈದ್ಯಕೀಯ ಕ್ಷೇತ್ರದ ಅನೇಕರೊಂದಿಗೆ ಸಂಪರ್ಕದಲ್ಲಿದ್ದ. ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 7 ಪ್ರೈಮರಿ ಕಾಂಟ್ಯಾಕ್ಟ್

ರೋಗಿ 53: ಮೆಕ್ಕಾದಿಂದ ಆಗಮಿಸಿದ್ದ 70 ವರ್ಷದ ಮಹಿಳೆ 14 ಮಾರ್ಚ್ ರಂದು ಬೆಂಗಳೂರಿಗೆ ಬಂದಿದ್ದರು. 24 ರಂದು ಆಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.‌ ಸರ್ಕಾರದ ನಿಯಮದಂತೆ ಅಂತ್ಯಸಂಸ್ಕಾರ ನಡೆಸಲಾಗಿದೆ.

ರೋಗಿ 54: 64 ವರ್ಷದ ಆಂಧ್ರಪ್ರದೇಶದ ಅನಂತಪುರ ಮೂಲದ ಪುರುಷ. ಫ್ರಾನ್ಸ್ ಪ್ರವಾಸ ಮುಗಿಸಿ ಮಾರ್ಚ್ 1ರಂದು ಭಾರತಕ್ಕೆ ಮರಳಿದ್ದರು. ಹಿಮಾಚಲ ಪ್ರದೇಶ, ಪುಟ್ಟಪರ್ತಿ ಪ್ರವಾಸ ಮುಗಿಸಿ 21ಮಾರ್ಚ್ ಬೆಂಗಳೂರಿಗೆ ಮರಳಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: Coronavirus: ಭಾರತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆ; 649 ಮಂದಿಗೆ ಕೊರೋನಾ ದೃಢರೋಗಿ 55: 45 ವರ್ಷದ ಬೆಂಗಳೂರಿನ ವ್ಯಕ್ತಿ. ರೋಗಿ 25ರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿ.‌ P25 ಮನೆಯ ಸೆಕ್ಯುರಿಟಿ ಗಾರ್ಡ್‌ ಆಗಿದ್ದ‌ ವ್ಯಕ್ತಿ. ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
First published: March 26, 2020, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories