ಕೊರೋನಾ ನಿಯಂತ್ರಣ ಸಂಬಂಧ ಇಂದು ಶಾಸಕರು-ಸಚಿವರೊಂದಿಗೆ ಸಿಎಂ ಬಿಎಸ್​ವೈ ಮಹತ್ವದ ಸಭೆ

ಈ ನಿಟ್ಟಿನಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಮುಂದೆ ಕೈಗೊಳ್ಳಬಹುದಾದ ನಿರ್ಧಾರದ ಬಗ್ಗೆ ಇಂದು ನಡೆಯುವ ಸಭೆ ಮಹತ್ವದ್ದಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

 • Share this:
  ಬೆಂಗಳೂರು: ಕೊರೋನಾ ವೈರಸ್ ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರ ಸಕಲ ರೀತಿಯ ಸರ್ಕಸ್​ಗಳನ್ನು ನಡೆಸುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಿಗಳಿಂದ ಹಿಡಿದು, ಎಲ್ಲ ಮುಖಂಡರೊಂದಿಗೆ ನಿರಂತರ ಸಭೆ ನಡೆಸುತ್ತಿದ್ದು, ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡುತ್ತಿದ್ದಾರೆ. ಇಂದು ಸಹ ಸಿಎಂ ಬಿಎಸ್​ವೈ ಅವರು ಶಾಸಕರು ಹಾಗೂ ಸಚಿವರೊಂದಿಗೆ ಸಭೆಯನ್ನು ನಡೆಸಲಿದ್ದಾರೆ.

  ರಾಜ್ಯದ ಈವರೆಗೂ ಒಟ್ಟು 128 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಕಂಡುಬಂದಿರುವ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನವೇ ಆಗಿವೆ.  ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಎಲ್ಲಾ ಶಾಸಕರು, ಸಚಿವರೊಂದಿಗೆ ಮಹತ್ವದ ಸಭೆ ಕರೆದಿದ್ದಾರೆ.

  ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಸಿಎಂ ಬಿಎಸ್​ವೈ ಅವರು ಶುಕ್ರವಾರ ಸಹ ನಿರಂತರ ಸಭೆಗಳನ್ನು ನಡೆಸಿದ್ದರು. ಮುಸ್ಲಿಂ ಧಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಬೆಂಗಳೂರು ನಗರ ಸಚಿವರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು.

  ಶುಕ್ರವಾರ ನಡೆದ ಸಭೆಯಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯಿಂದ ಈಗಾಗಲೇ 15 ಲಕ್ಷ  ಕಟ್ಟಡ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂಪಾಯಿ ವಿತರಣೆ ಮಾಡಲಾಗಿದೆ. ಇದರೊಂದಿಗೆ ಅವರಿಗೆ ಇನ್ನೂ ಒಂದೂವರೆ ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಸಿಎಂ ಆದೇಶ ಮಾಡಿದ್ದರು. ಈ ಉದ್ದೇಶಕ್ಕಾಗಿ ಈಗಾಗಲೇ 150 ಕೋಟಿ ರೂಪಾಯಿ ಹಣ ವೆಚ್ಚವಾಗಲಿದೆ. ಹೆಚ್ಚುವರಿ ಒಂದೂವರೆ ಸಾವಿರ ರೂಪಾಯಿಯನ್ನು ಇಂದು ವಿತರಣೆ ಮಾಡಲಾಗುವುದು. ಕಟ್ಟಡ ಕಾರ್ಮಿಕರು ಇರುವ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

  ಸಿಎಂ ಪರಿಹಾರ ನಿಧಿಗೆ ಶುಕ್ರವಾರ ಒಂದೇ ದಿನದಲ್ಲಿ 62.89 ಕೋಟಿ ರೂಪಾಯಿ ಹಣ ಸಂದಾಯವಾಗಿದೆ. ಇದುವರೆಗೆ 87 ಕೋಟಿ ರೂಪಾಯಿ ಸಿಎಂ ಪರಿಹಾರ ನಿಧಿಗೆ ಬಂದಿದೆ.  ಅನೇಕ ದಾನಿಗಳು ಆಹಾರ ಸಾಮಗ್ರಿ ದಾನ ಮಾಡಲು ಮುಂದೆ ಬಂದಿದ್ದಾರೆ. ರಾಜ್ಯದಲ್ಲಿ ‌ಆಹಾರ ಧಾನ್ಯಗಳ ಅಭಾವವಿಲ್ಲ, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಕ್ಕಿ 26,23,116 ಕ್ವಿಂಟಾಲ್, ಗೋಧಿ 1,32,539 ಕ್ವಿಂಟಾಲ್, ರಾಗಿ, ಜೋಳ ಮುಂತಾದ ಎಲ್ಲವೂ ಅಗತ್ಯ ಸಂಗ್ರಹ ರಾಜ್ಯದಲ್ಲಿ ಇದೆ. ಜನರು ಭಯ ಪಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಬಿಎಸ್​ವೈ ಭರವಸೆ ನೀಡಿದ್ದಾರೆ.

  ಇದನ್ನು ಓದಿ: ಕೊರೋನಾ ವಿಷಯವಾಗಿ ಅಧಿಕಾರಿಗಳು, ಬೆಂಗಳೂರು ನಗರ ಸಚಿವರೊಂದಿಗೆ ಸಿಎಂ ನಡೆಸಿದ ಸಭೆಯ ಮುಖ್ಯಾಂಶಗಳು

  ಈ ನಿಟ್ಟಿನಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಮುಂದೆ ಕೈಗೊಳ್ಳಬಹುದಾದ ನಿರ್ಧಾರದ ಬಗ್ಗೆ ಇಂದು ನಡೆಯುವ ಸಭೆ ಮಹತ್ವದ್ದಾಗಿದೆ.

  ರಾಜ್ಯದಲ್ಲಿ 128 ಪ್ರಕರಣ ಪತ್ತೆ

  • ಬೆಂಗಳೂರು - 51 ಪ್ರಕರಣ

  • ಮೈಸೂರು - 21 ಪ್ರಕರಣ

  • ಬೀದರ್ - 10 ಪ್ರಕರಣ

  • ಚಿಕ್ಕಬಳ್ಳಾಪುರ - 7 ಪ್ರಕರಣ

  • ದಕ್ಷಿಣ ಕನ್ನಡ - 9 ಪ್ರಕರಣ

  • ಉತ್ತರ ಕನ್ನಡ - 8 ಪ್ರಕರಣ

  • ಕಲಬುರಗಿ - 5 ಪ್ರಕರಣ

  • ದಾವಣಗೆರೆ - 3 ಪ್ರಕರಣ

  • ಉಡುಪಿ - 3 ಪ್ರಕರಣ

  • ಬಳ್ಳಾರಿ - 4 ಪ್ರಕರಣ

  • ಕೊಡಗು - 1 ಪ್ರಕರಣ

  • ಧಾರವಾಡ - 1 ಪ್ರಕರಣ

  • ತುಮಕೂರು - 1 ಪ್ರಕರಣ

  • ಬೆಳಗಾವಿ - 3 ಪ್ರಕರಣ

  • ಬಾಗಲಕೋಟೆ - 1 ಪ್ರಕರಣ   
  First published: