ಇಂದು ಒಂದೇ ದಿನ 48 ಪ್ರಕರಣಗಳು ದಾಖಲು; ರಾಜ್ಯದಲ್ಲಿ 753ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ

ನಾಳೆಯ ವೇಳೆಗೆ ರಾಜ್ಯದಲ್ಲಿ 1 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ಪೂರ್ಣಗೊಳಿಸುವುದಾಗಿ ಬಿಎಂಆರ್​ಸಿ ಅಂದಾಜಿಸಿದೆ.  ಇದುವರೆಗೆ ಕೊರೋನಾ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರ 4,74, 48,390 ರೂ. ವೆಚ್ಚ ಮಾಡಿದೆ. ಪ್ರತೀ ರೋಗಿಗೆ 3,48,885 ರೂ. ವೆಚ್ಚ ತಗುಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ರಾಜ್ಯದಲ್ಲಿ ನೆನ್ನೆಯಿಂದ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ದಾಖಲಾಗುತ್ತಿದ್ದು, ಇಂದು ಒಂದೇ ದಿನದಲ್ಲಿ 48 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ.

  ದಾವಣಗೆರೆಯಲ್ಲಿ 14, ಬೆಳಗಾವಿಯಲ್ಲಿ 11, ಉತ್ತರಕನ್ನಡದಲ್ಲಿ 12, ಬೆಂಗಳೂರಿನಲ್ಲಿ 7,  ಚಿತ್ರದುರ್ಗದಲ್ಲಿ 3, ಹಾಗೂ ಬಳ್ಳಾರಿಯಲ್ಲಿ 1 ಪ್ರಕರಣ ಸೇರಿ ಒಟ್ಟು 48 ಪ್ರಕರಣಗಳು ಇಂದು ವರದಿಯಾಗಿವೆ.  P-556 ಮತ್ತು 553 ನಿಂದ ದಾವಣಗೆರೆಯ 14 ಜನರಿಗೆ ಸೋಂಕು ತಗುಲಿದೆ. ಉತ್ತರ ಕನ್ನಡದಲ್ಲಿ 10 ಪಾಸಿಟಿವ್ ಕೇಸ್​ಗಳು ಒಂದೇ ಕುಟುಂಬಕ್ಕೆ ಸೇರಿದ್ದಾಗಿವೆ. ಬೆಂಗಳೂರಿನ 7 ಪ್ರಕರಣಗಳೂ ಕಂಟೈನ್ಮೆಂಟ್ ಜೋನ್​ನಲ್ಲಿ ಕಾಣಿಸಿಕೊಂಡಿದೆ.

  ನಾಳೆಯ ವೇಳೆಗೆ ರಾಜ್ಯದಲ್ಲಿ 1 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ಪೂರ್ಣಗೊಳಿಸುವುದಾಗಿ ಬಿಎಂಆರ್​ಸಿ ಅಂದಾಜಿಸಿದೆ.  ಇದುವರೆಗೆ ಕೊರೋನಾ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರ 4,74, 48,390 ರೂ. ವೆಚ್ಚ ಮಾಡಿದೆ. ಪ್ರತೀ ರೋಗಿಗೆ 3,48,885 ರೂ. ವೆಚ್ಚ ತಗುಲಿದೆ.  ಖಾಸಗಿ ಲ್ಯಾಬ್​ಗಳಲ್ಲಿ ಕೊರೋನಾ ಟೆಸ್ಟ್ ವೆಚ್ಚವನ್ನು ರೋಗಿಯ ಬದಲು ಸರ್ಕಾರವೇ ಭರಿಸಲು ಎಂಒಯು ಮಾಡಿಕೊಳ್ಳಲಾಗುತ್ತಿದೆ.

  ಇದನ್ನು ಓದಿ: Liquor Sales - ಮೇ 9ರಿಂದ ಬಾರ್, ಲಾಡ್ಜ್, ಕ್ಲಬ್​ಗಳಲ್ಲೂ ಮದ್ಯ ಮಾರಾಟ: ಸಚಿವ ಹೆಚ್. ನಾಗೇಶ್
  First published: