ರಾಜ್ಯದಲ್ಲಿ ಇಂದು 36 ಪ್ರಕರಣ ದಾಖಲು; ವಿಜಯಪುರದ ಎರಡು ಕುಟುಂಬದ 17 ಮಂದಿಗೆ ಸೋಂಕು

ನೆನ್ನೆ ಸಂಜೆ 66 ವರ್ಷದ ಬೆಂಗಳೂರಿನ ವ್ಯಕ್ತಿ ಮೃತಪಟ್ಟಿದ್ದರು. ಏಪ್ರಿಲ್ 10 ರಿಂದ ಇವರು ವೆಂಟಿಲೇಟರ್​ನಲ್ಲಿದ್ದರು. ಈವರೆಗೆ ರಾಜ್ಯದಲ್ಲಿ ಒಟ್ಟು 12 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದದ 7, ಆಂಧ್ರದಿಂದ 5 ಜನರಿಗೆ ಕರ್ನಾಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ರಾಜ್ಯದಲ್ಲಿ ಮಾರಕ ಸೋಂಕು ದಿನೇದಿನೇ ವ್ಯಾಪಕವಾಗಿ ಹಬ್ಬುತ್ತಿದ್ದು, ಇಂದು ಒಂದೇ ದಿನದಲ್ಲಿ 36 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ಇವರಲ್ಲಿ ರೋಗಿ ಸಂಖ್ಯೆ 43 ಮತ್ತು 101 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಬೆಳಗಾವಿ 17, ವಿಜಯಪುರ 7, ಬೆಂಗಳೂರು 5, ಮೈಸೂರು 3, ಗದಗ 1, ಕಲ್ಬುರ್ಗಿ 3 ಪ್ರಕರಣಗಳು ಇಂದು ವರದಿಯಾಗಿವೆ. ಕೇವಲ 4 ದಿನಗಳ ಹಿಂದೆ ವಿಜಯಪುರ ಕೊರೋನಾಮುಕ್ತ ಜಿಲ್ಲೆಯಾಗಿತ್ತು. ಆದರೆ ಇದೀಗ ಆ ಜಿಲ್ಲೆಯಲ್ಲಿ 17 ಪ್ರಕರಣಗಳಾಗಿವೆ. ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಎಲ್ಲಾ 17 ಪ್ರಕರಣಗಳೂ ಕೇವಲ 2 ಕುಟುಂಬಕ್ಕೆ ಸೇರಿದ್ದವು. ಒಂದು ಕುಟುಂಬದ 7 ಹಾಗೂ ಇನ್ನೊಂದು ಕುಟುಂಬದಿಂದ 10 ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. 270 ಮಂದಿಯ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಈ ಎರಡೂ ಕುಟುಂಬದ ಸದಸ್ಯರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಎರಡೂ ಮನೆಗಳ ಸುತ್ತ ಫ್ಯೂಮಿಗೇಶನ್ ಮುಂತಾದ ಕೆಲಸ ಮಾಡಲಾಗುತ್ತಿದೆ. ಹಿರೇಬಾಗೇವಾಡಿ, ವಿಜಯಪುರ ಎರಡು ಕಡೆಯಿಂದ ಇಂದು ಅತೀ ಹೆಚ್ಚು ಪಾಸಿಟಿವ್ ಕೇಸ್​ಗಳು ಬಂದಿವೆ.

  ನೆನ್ನೆ ಸಂಜೆ 66 ವರ್ಷದ ಬೆಂಗಳೂರಿನ ವ್ಯಕ್ತಿ ಮೃತಪಟ್ಟಿದ್ದರು. ಏಪ್ರಿಲ್ 10 ರಿಂದ ಇವರು ವೆಂಟಿಲೇಟರ್​ನಲ್ಲಿದ್ದರು. ಈವರೆಗೆ ರಾಜ್ಯದಲ್ಲಿ ಒಟ್ಟು 12 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದದ 7, ಆಂಧ್ರದಿಂದ 5 ಜನರಿಗೆ ಕರ್ನಾಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ಇದನ್ನು ಓದಿ: ಕೊರೋನಾ ವೈರಸ್​​ ತಡೆಗೆ ಬಿಗಿಕ್ರಮ: ಏ.20ರಂದು ಸಂಪುಟ ಸಭೆ ಕರೆದ ಸಿಎಂ ಯಡಿಯೂರಪ್ಪ

  ಇದುವರೆಗೆ ನಂಜನಗೂಡಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈವರೆಗೆ ಕರ್ನಾಟಕದಲ್ಲಿ ಪಾಸಿಟಿವ್ ಇರುವ ಟಿಜೆ (ತಬ್ಲಿಘಿ) ಪ್ರಕರಣಗಳ ಸಂಖ್ಯೆ 46 ಮತ್ತು ಅವರ ಸಂಪರ್ಕಕ್ಕೆ ಬಂದವರ ಸಂಖ್ಯೆ 48 ಇದೆ. ಸದ್ಯ ರಾಜ್ಯದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 2816 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ.  ಹಾಗೆಯೇ ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದ 6416 ಮಂದಿ ಇದ್ದು, ಇವರ ಮೇಲೆ ನಿಗಾ ಇರಿಸಲಾಗಿದೆ.

   
  First published: