HOME » NEWS » Coronavirus-latest-news » TODAY 2313 CORONAVIRUS POSITIVE CASES FOUND IN KARNATAKA RH

ಮುಂದುವರೆದ ಕೊರೋನಾ ಆರ್ಭಟ; ರಾಜ್ಯದಲ್ಲಿ ಇಂದು 2313 ಪ್ರಕರಣ, 57 ಮಂದಿ ಸಾವು

ರಾಜ್ಯದಲ್ಲಿ ಒಟ್ಟಾರೆ 33418 ಕೊರೋನಾ ಪ್ರಕರಣಗಳು ಈವರೆಗೆ ದಾಖಲಾಗಿದ್ದು, ಇವರಲ್ಲಿ 13836 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 19035 ಸಕ್ರಿಯ ಪ್ರಕರಣಗಳಿವೆ.

news18-kannada
Updated:July 10, 2020, 8:07 PM IST
ಮುಂದುವರೆದ ಕೊರೋನಾ ಆರ್ಭಟ; ರಾಜ್ಯದಲ್ಲಿ ಇಂದು 2313 ಪ್ರಕರಣ, 57 ಮಂದಿ ಸಾವು
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು; ಮಾರಕ ಕೊರೋನಾ ವೈರಸ್ ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವಂತೆ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಇಂದು 2313 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಐಸಿಯುನಲ್ಲಿ 472 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಸು ಸಮಾಧಾನದ ಸಂಗತಿ ಎಂದರೆ ಇಂದು 1003 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ ಪ್ರಕಾರ, 2313 ಕೊರೋನಾ ಹೊಸ ಪ್ರಕರಣಗಳು ದಾಖಲಾಗಿದ್ದಾರೆ. ಮಾರಕ ಸೋಂಕಿನಿಂದ 57 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 543ಕ್ಕೆ ಏರಿಕೆಯಾದಂತಾಗಿದೆ.

ರಾಜಧಾನಿ ಬೆಂಗಳೂರಿನ ಇಂದು 1447 ಪ್ರಕರಣಗಳು ದಾಖಲಾಗಿದ್ದು, 29 ಸಾವಿನ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಮೃತಪಟ್ಟವರಲ್ಲಿ 3 ಏಸಿಂಪ್ಟ್ ಮ್ಯಾಟಿಕ್ ಹಾಗೂ ಐಎಲ್ಐ ಮತ್ತು ಎಸ್​ಎಆರ್​ಐ ಹಿನ್ನೆಲೆಯುಳ್ಳ 26 ರೋಗಿಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಐಎಲ್​ಐ ಮತ್ತು ಎಸ್​ಎಆರ್​ಐ ಆರ್ಭಟ ಮುಂದುವರೆದಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಇಂದು 139 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಂತರ ಅತಿಹೆಚ್ಚು ಸೋಂಕು ಕಾಣಿಸಿಕೊಂಡ ಜಿಲ್ಲೆಯಾಗಿದೆ.

ರಾಜ್ಯದಲ್ಲಿ ಒಟ್ಟಾರೆ 33418 ಕೊರೋನಾ ಪ್ರಕರಣಗಳು ಈವರೆಗೆ ದಾಖಲಾಗಿದ್ದು, ಇವರಲ್ಲಿ 13836 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 19035 ಸಕ್ರಿಯ ಪ್ರಕರಣಗಳಿವೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಪರಿಸ್ಥಿತಿ; ಜುಲೈ 13 ರಿಂದ 23ರ ವರೆಗೆ ಪುಣೆ ಸಂಪೂರ್ಣ ಲಾಕ್‌ಡೌನ್

ನೆನ್ನೆ ಕೂಡ ರಾಜ್ಯದಲ್ಲಿ 2,228 ಪ್ರಕರಣಗಳು ದಾಖಲಾಗಿದ್ದವು.  17 ಮಂದಿ ಸಾವನ್ನಪ್ಪಿದ್ದರು. ಕೊರೋನಾ ಹಾಟ್​​ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ನೆನ್ನೆ 1,373 ಪ್ರಕರಣಗಳು ದಾಖಲಾಗಿದ್ದವು.
Published by: HR Ramesh
First published: July 10, 2020, 8:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories