ಕೇರಳದಲ್ಲಿ ಇಂದು ಹೊಸದಾಗಿ 12 ಜನರಿಗೆ ಕೊರೋನಾ ಸೋಂಕು ಪತ್ತೆ

ರಾಜ್ಯದಲ್ಲಿ ಒಟ್ಟು ಹಾಟ್‌ಸ್ಪಾಟ್‌ಗಳ ಸಂಖ್ಯೆ 33 ಕ್ಕೆ ತಲುಪಿದೆ. ಸಾಮಾಜಿಕ ದೂರ, ಮಾಸ್ಕ್ ಬಳಕೆ ಮತ್ತು ಹ್ಯಾಂಡ್‌ವಾಶ್ ಮೂಲಕ ಬ್ರೇಕ್ ದಿ ಚೈನ್ ಮತ್ತು ಕ್ವಾರಂಟೈನ್ ಅನುಷ್ಠಾನಗೊಳಿಸುವಲ್ಲಿ ನಾವು ಬಹಳ ದೂರ ಸಾಗಿದ್ದೇವೆ ಎಂದು ಹೇಳಿದ್ದಾರೆ.

news18-kannada
Updated:May 19, 2020, 8:36 PM IST
ಕೇರಳದಲ್ಲಿ ಇಂದು ಹೊಸದಾಗಿ 12 ಜನರಿಗೆ ಕೊರೋನಾ ಸೋಂಕು ಪತ್ತೆ
ಪ್ರಾತಿನಿಧಿಕ ಚಿತ್ರ.
  • Share this:
ತಿರುವನಂತಪುರ: ಕೇರಳದಲ್ಲಿ ಇಂದು ಹೊಸದಾಗಿ 12 ಜನರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 642 ಪ್ರಕರಣಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಣ್ಣೂರು ಜಿಲ್ಲೆಯಿಂದ ಐವರಿಗೆ, ಮಲಪ್ಪುರಂ ಜಿಲ್ಲೆಯಿಂದ ಮೂವರಿಗೆ, ಪಥನಮತ್ತಿಟ್ಟ, ಆಲಪ್ಪುಳ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ಕೊರೋನಾ ಸೋಂಕು ಹರಡಿರವುದು ದೃಢಪಟ್ಟಿದೆ. ಈ ಪೈಕಿ ನಾಲ್ವರು ವಿದೇಶದಿಂದ (ಯು.ಎ.ಇ -1, ಸೌದಿ ಅರೇಬಿಯಾ -1, ಕುವೈತ್ -1, ಮಾಲಿ ದ್ವೀಪ -1) ಮತ್ತು ಎಂಟು ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ -6, ಗುಜರಾತ್ -1 ಮತ್ತು ತಮಿಳುನಾಡು -1) ಆಗಮಿಸಿದ್ದಾರೆ ಎಂದು ಮಾಹಿತಿ ಸಿಎಂ ನೀಡಿದ್ದಾರೆ.

ಮಂಗಳವಾರ ಯಾರೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿಲ್ಲ. ಈವರೆಗೆ 142 ಜನರಿಗೆ ಈ ರೋಗ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 497 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72,000 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 71,545 ಮಂದಿ ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 455 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 119 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ, 46,958 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 45,527 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 5630 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 5340 ಮಾದರಿಗಳು ನಕಾರಾತ್ಮಕವಾಗಿವೆ. ಈ ಪೈಕಿ ನಡೆಸಿದ ಪರಿಶೋಧನೆಯಲ್ಲಿ ಕೇವಲ ನಾಲ್ಕು ಜನರಿಗೆ ರೋಗನಿರ್ಣಯ ಮಾಡಲಾಗಿದೆ. ಕೋವಿಡ್ 19 ರ ಸಾಮಾಜಿಕ ಹರಡುವಿಕೆ ಸಂಭವಿಸಿಲ್ಲ ಎಂದು ಇದು ಸೂಚಿಸುತ್ತದೆ ಎಂದಿದ್ದಾರೆ.

ಇದನ್ನು ಓದಿ: SSLC Exam Time Table: ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ

ಹೊಸದಾಗಿ ನಾಲ್ಕು ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗೆ ಸೇರಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯ ಕೊರುತೋಡ್, ಕಣ್ಣೂರು ಜಿಲ್ಲೆಯ ಪಾನೂರ್ ಪುರಸಭೆ, ಚೋಕ್ಲಿ ಮತ್ತು ಮಾಯಿಲ್ ಪಂಚಾಯಿತಿಗಳು ಹೊಸ ಹಾಟ್ ಸ್ಪಾಟ್‌ಗಳು. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಹಾಟ್‌ಸ್ಪಾಟ್‌ಗಳ ಸಂಖ್ಯೆ 33 ಕ್ಕೆ ತಲುಪಿದೆ. ಸಾಮಾಜಿಕ ದೂರ, ಮಾಸ್ಕ್ ಬಳಕೆ ಮತ್ತು ಹ್ಯಾಂಡ್‌ವಾಶ್ ಮೂಲಕ ಬ್ರೇಕ್ ದಿ ಚೈನ್ ಮತ್ತು ಕ್ವಾರಂಟೈನ್ ಅನುಷ್ಠಾನಗೊಳಿಸುವಲ್ಲಿ ನಾವು ಬಹಳ ದೂರ ಸಾಗಿದ್ದೇವೆ ಎಂದು ಹೇಳಿದ್ದಾರೆ.
First published: May 19, 2020, 8:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading