ಕೊರೋನಾ ಬಂದ್ರೆ ಸಾಯಲ್ಲ- ಯಾರೂ ಧೈರ್ಯ ಕಳೆದುಕೊಳ್ಳಬೇಡಿ : ಸಚಿವ ಬಿ. ಶ್ರೀರಾಮುಲು

ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ 342 ಜನ ಕರ್ನಾಟಕಕ್ಕೆ ಬಂದಿದ್ದು, ಅವರಲ್ಲಿ ಈಗಾಗಲೇ 200 ಜನರನ್ನು ಗುರುತಿಸಲಾಗಿದೆ. ಇವರಲ್ಲಿ 13 ಜನರ ಕೊರೋನಾ ನೆಗೆಟಿವ್ ಬಂದಿದೆ

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

  • Share this:
ವಿಜಯಪುರ(ಏ.01) : ಕೊರೋನಾ ಬಂದ್ರೆ ಸಾಯಲ್ಲ. ಕೊರೋನಾ ಬಂದರೇ ಸಾಯುತ್ತಾರೆ ಎನ್ನುವ ಭಯವಿದೆ. ಈ ಬಗ್ಗೆ ಯಾರು ಧೈರ್ಯ ಕಳೆದುಕೊಳ್ಳಬೇಡಿ. ಜನರಲ್ಲಿ ಆತ್ಮಸ್ಥೈರ್ಯ ತುಂಬಲು ರಾಜ್ಯಾಧ್ಯಂತ ಪ್ರವಾಸ ಮಾಡುತ್ತಿದ್ದೇನೆ  ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ವಿಜಯಪುದಲ್ಲಿ ಮಾತನಾಡಿದ ಅವರು, ಭಾರತ ಲಾಕ್ ಡೌನ್ ಗೆ ಶೇ. 80 ಜನ ಮಾತ್ರ ಬೆಂಬಲವನ್ನು ಕೊಡುತ್ತಿದ್ದಾರೆ.ಕೊಡುತ್ತಿದ್ದಾರೆ. ಇನ್ನುಳಿದ ಶೇ. 20 ಜನರು ಹೊರಗಡೆ ಅಡ್ಡಾಡುತ್ತಿದ್ದಾರೆ. ಅವರು ಕೂಡಾ ಬೆಂಬಲವನ್ನು ಕೊಡಬೇಕು ಎಂದರು

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಕಷ್ಟು ಜನರು ದಾನ ಕೊಡುತ್ತಿದ್ದಾರೆ. ಬಡವರೂ ತಮ್ಮ ಕೈಲಾದಷ್ಟು ದಾನ ಮಾಡಬೇಕು. ಶ್ರೀಮಂತರು ದೊಡ್ಡದಾಗಿ ದಾನ ಮಾಡಲಿ. ಬಡವರು ಸಣ್ಣ ಪ್ರಮಾಣದಲ್ಲಿ ದಾನ ಮಾಡಲಿ ಎಂದು ಸಚಿವರು ಮನವಿ ಮಾಡಿದರು.

ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ 342 ಜನ ಕರ್ನಾಟಕಕ್ಕೆ ಬಂದಿದ್ದು, ಅವರಲ್ಲಿ ಈಗಾಗಲೇ 200 ಜನರನ್ನು ಗುರುತಿಸಲಾಗಿದೆ. ಇವರಲ್ಲಿ 13 ಜನರ ಕೊರೋನಾ ನೆಗೆಟಿವ್ ಬಂದಿದೆ. ಇಂಡೋನೇಷಿಯಾ, ಮಲೇಶಿಯಾ ಪ್ರವಾಸದಿಂದ 62 ಜನ ರಾಜ್ಯಕ್ಕೆ ಬಂದಿದ್ದಾರೆ. ಅವರಲ್ಲಿ 13 ಜನರನ್ನು ಹೋಮ್ ಕ್ವಾರಂಟೈನ್ ಇಡಲಾಗಿದೆ. ದೆಹಲಿಯಿಂದ ಬಂದವರು ಎಲ್ಲಿಲ್ಲಿ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ದೆಹಲಿಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈವರೆಗೆ 3443 ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಅವುಗಳಲ್ಲಿ 3025 ವರದಿಗಳು ಬಂದಿವೆ. ಇನ್ನೂ 133 ವರದಿಗಳು ಬರಬೇಕಿದೆ. ಅವುಗಳಲ್ಲಿ 105 ವರದಿಗಳು ಪಾಸಿಟಿವ್ ಬಂದಿವೆ. 226 ಜನರನ್ನು ಐಸೋಲೇಶನ್ ಮಾಡಲಾಗಿದೆ. ವೆಂಟಿಲೇಟರ್ ಗೆ ಬೇಡಿಕೆ ಬಂದಿದ್ದು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಇದನ್ನೂ ಓದಿ : ಕೊರೋನಾ ಕರಾಳತೆ - ಸೋಂಕಿತರ ಸೇವೆಗಾಗಿ ಮದುವೆಯನ್ನೇ ಮುಂದೂಡಿದ ದಿಟ್ಟ ವೈದ್ಯೆ

ವಿಜಯಪುರ ಜಿಲ್ಲೆಗೆ ಕೊರೊನಾ ತಪಾಸಣೆ ಲ್ಯಾಬ್ ಬೇಡಿಕೆ ಬಂದಿದೆ. ಅದನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ 200 ವೈದ್ಯರ ಕೊರತೆ ಇದೆ. ಮೂರು ತಿಂಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು. ರಾಜ್ಯದಲ್ಲಿ ಒಟ್ಟು 7 ಲ್ಯಾಬ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿ ಲ್ಯಾಬ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.

 
First published: