ಕೂಡಿಟ್ಟ ಹಣವನ್ನು ದೇಣಿಗೆ ನೀಡಿದ ಬಾಲಕನಿಗೆ ಬಂಪರ್ ಗಿಫ್ಟ್ ಕೊಟ್ಟ ತಮಿಳುನಾಡು ಸಿಎಂ!

ಕೊರೋನಾ ಕಷ್ಟ ಕಾಲದಲ್ಲಿ ಇಂಥಹ ಒಳ್ಳೆಯ ಸುದ್ದಿಗಳ ಅಗತ್ಯ ಪ್ರತಿಯೊಬ್ಬರಿಗೂ ಇದೆ. ಎಲ್ಲೆಲ್ಲೂ ಸಾವು-ನೋವೇ ಇರುವಾಗ ಮನಸ್ಸಿಗೆ ನೆಮ್ಮದಿ ಕೊಡುವ ವಿಷ್ಯ ಇದಾಗಿದೆ ಎಂದರೆ ತಪ್ಪಾಗಲಾರದು.

ಬಾಲಕ ಹರೀಶ್, ಸಿಎಂ ಎಂ.ಕೆ.ಸ್ಟಾಲಿನ್​

ಬಾಲಕ ಹರೀಶ್, ಸಿಎಂ ಎಂ.ಕೆ.ಸ್ಟಾಲಿನ್​

  • Share this:
ಚೆನ್ನೈ: ಕರುಣೆ ಇಲ್ಲದ ಕೊರೋನಾ ಜನರನ್ನು ಕಂಗಾಲಾಗಿಸಿದೆ. ಸೋಂಕಿನಿಂದ ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಸೋಂಕಿತರು ಸಕಾಲದಲ್ಲಿ ಚಿಕಿತ್ಸೆಗಾಗಿ, ಬೆಡ್​​-ಆಕ್ಸಿಜನ್​ಗಾಗಿ ಪರದಾಡುತ್ತಿದ್ದಾರೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇಂಥ ಸಂಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗಲೇಬೇಕಾದ ಅನಿವಾರ್ಯತೆ ಇದೆ. ಕಷ್ಟ ಕಾಲದಲ್ಲಿ ಸಹಾಯ ಮಾಡಲು ನೀವು ಶ್ರೀಮಂತರೇ ಆಗಿರಬೇಕಿಲ್ಲ ಅನ್ನೋದನ್ನು ತಮಿಳುನಾಡಿನ ಬಾಲಕ ತೋರಿಸಿಕೊಟ್ಟಿದ್ದಾನೆ. ಮಧುರೈನ ಎಲೆಕ್ಟ್ರೀಷನ್​​ ಒಬ್ಬರ ಪುತ್ರ ತನ್ನ ಕೆಲಸದಿಂದ ಇಡೀ ತಮಿಳುನಾಡು ಜನರ ಮನಗೆದ್ದಿದ್ದಾರೆ.

7 ವರ್ಷದ ಬಾಲಕ ಹರೀಶ್​ ವರ್ಮನ್​​ ಎಂಬಾತ ತಾನು ಕೂಡಿಟ್ಟ ಹಣವನ್ನು ಕೊರೋನಾ ನಿರ್ವಹಣಗೆ ದೇಣಿಗೆ ನೀಡಿದ್ದಾನೆ. ಸೈಕಲ್​ ಕೊಂಡುಕೊಳ್ಳುವ ಆಸೆಯಿಂದ ಕಳೆದ 2 ವರ್ಷಗಳಿಂದಲೂ ಹರೀಶ್​ ಹುಂಡಿಯಲ್ಲಿ ಹಣ ಕೂಡಿಡಿಡುತ್ತಿದ್ದ. ಬಡ ತಂದೆ ನೀಡುತ್ತಿದ್ದ ಚೆಲ್ಲರೆ ಹಣವನ್ನೇ ಹುಂಡಿಗೆ ಹಾಕಿ ಸೈಕಲ್​ ಕನಸನ್ನು ನನಸು ಮಾಡಿಕೊಳ್ಳಲು ಕಾಯುತ್ತಿದ್ದ. ಆದರೆ ಕೊರೋನಾ ಎಲ್ಲೆಲ್ಲೂ ಸೃಷ್ಟಿಸಿರುವ ದುಸ್ಥಿತಿ ಪುಟ್ಟ ಬಾಲಕನ ಮನಸ್ಸನ್ನೂ ಕದಡಿದೆ. ಟಿವಿಯಲ್ಲಿ, ಸುತ್ತಮುತ್ತ ಸೋಂಕಿನಿಂದ ಆಗುತ್ತಿರುವ ಅನಾಹುತ ಕಂಡು ಹರೀಶ್​ ಮನಸ್ಸು ಬದಲಾಗಿತ್ತು.

ಕೂಡಿಟ್ಟ ಹಣದಲ್ಲಿ ಸೈಕಲ್​ ಖರೀದಿಸುವ ಬದಲು ಆ ಹಣವನ್ನು ಸರ್ಕಾರಕ್ಕೆ ನೀಡುವುದೇ ಉತ್ತಮ ಎಂದು ಹರೀಶ್​ ಪೋಷಕರ ಬಳಿ ಹೇಳಿದ್ದಾನೆ. ತಾನು ಕೂಡಿಟ್ಟ ಅಲ್ಪ ಮೊತ್ತವನ್ನು ತಮಿಳುನಾಡು ಸಿಎಂ ರಿಲೀಫ್​ ಫಂಡ್​ಗೆ ನೀಡಿದ್ದಾನೆ. ದಯವಿಟ್ಟ ನನ್ನ ಈ ಪುಟ್ಟ ನೆರವನ್ನು ಸ್ವೀಕರಿಸಬೇಕು ಎಂದು ನೂತನ ಸಿಎಂ ಎಂ.ಕೆ.ಸ್ಟಾಲಿನ್​ ಅವರಿಗೆ ಪತ್ರ ಬರೆದಿದ್ದಾನೆ. ಪುಟ್ಟ ಬಾಲಕನ ನೆರವಿಗೆ ಬೆರಗಾದ ಮುಖ್ಯಮಂತ್ರಿ ಸ್ಟಾಲಿನ್​​ ಕೂಡಲೇ ಬಾಲಕನಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಟ್ಟ ಬಾಲಕನಾದರೂ ನಿನ್ನ ಮನಸ್ಸು, ಕೊಡುವ ಗುಣ ದೊಡ್ಡದು ಎಂದು ಪ್ರಶಂಸಿಸಿದ್ದಾರೆ.

ಇಷ್ಟೆ ಅಲ್ಲದೇ ಬಾಲಕನಿಗೆ ಸರ್ಪ್ರೈಸ್​ ಆಗಿ ಉಡುಗೊರೆಯನ್ನು ಸಿಎಂ ಸ್ಟಾಲಿನ್​ ಕಳುಹಿಸಿದ್ದಾರೆ. ತನ್ನ ಕನಸ್ಸನ್ನು ತ್ಯಾಗ ಮಾಡಿದ್ದ ಬಾಲಕನಿಗೆ ಸೈಕಲ್​​ ಕಳುಹಿಸಿದ್ದಾರೆ. ಸಿಎಂ ಕಳುಹಿದ ಸೈಕಲ್​ ನೋಡುತ್ತಿದಂತೆ ಬಾಲಕ ಅಚ್ಚರಿಗೊಂಡಿದ್ದಾನೆ. ತನ್ನ ಕನಸ್ಸನ್ನು ನನಸು ಮಾಡಿದ ಮುಖ್ಯಮಂತ್ರಿಗೆ ಹರೀಶ್​ ಧನ್ಯವಾದ ತಿಳಿಸಿದ್ದಾನೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್​ ವೈರಸ್​ ಸಹ ಆಗಿದೆ.

ತಮಿಳುನಾಡಿನಾದ್ಯಂತ ಬಾಲಕ ಹರೀಶ್​ ದೊಡ್ಡತನ ಹಾಗೂ ಸಿಎಂ ಸ್ಟಾಲಿನ್​​ ಉಡುಗೊರೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಾಲಿನ್​ ಜನರ ಮುಖ್ಯಮಂತ್ರಿ ಎಂದು ಹೊಗಳಲಾಗುತ್ತಿದೆ. ಕೊರೋನಾ ಕಷ್ಟ ಕಾಲದಲ್ಲಿ ಇಂಥಹ ಒಳ್ಳೆಯ ಸುದ್ದಿಗಳ ಅಗತ್ಯ ಪ್ರತಿಯೊಬ್ಬರಿಗೂ ಇದೆ. ಎಲ್ಲೆಲ್ಲೂ ಸಾವು-ನೋವೇ ಇರುವಾಗ ಮನಸ್ಸಿಗೆ ನೆಮ್ಮದಿ ಕೊಡುವ ವಿಷ್ಯ ಇದಾಗಿದೆ ಎಂದರೆ ತಪ್ಪಾಗಲಾರದು. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೈಲಾದಷ್ಟು ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
Published by:Kavya V
First published: