HOME » NEWS » Coronavirus-latest-news » TIRUPATI OXYGEN TRAGEDY 11 COVID 19 PATIENTS DIE IN ANDHRA PRADESH TIRUPATI HOSPITAL AS OXYGEN SUPPLY DISRUPTED SCT

Tirupati Oxygen Tragedy: ತಿರುಪತಿಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ; 11 ಕೊರೋನಾ ರೋಗಿಗಳು ಸಾವು

Andhra Pradesh Oxygen Crisis: ಆಂಧ್ರ ಪ್ರದೇಶದ ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ 11 ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ಉಂಟಾಗಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಟ್ಯಾಂಕರ್ ಆಗಮಿಸುವುದು ತಡವಾಗಿದ್ದರಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.

Sushma Chakre | news18-kannada
Updated:May 11, 2021, 9:22 AM IST
Tirupati Oxygen Tragedy: ತಿರುಪತಿಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ; 11 ಕೊರೋನಾ ರೋಗಿಗಳು ಸಾವು
ಚಿತ್ತೂರು ಡಿಸಿ ಹರಿನಾರಾಯಣ
  • Share this:
ತಿರುಪತಿ (ಮೇ 11): ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿ 24 ರೋಗಿಗಳು ಸಾವನ್ನಪ್ಪಿದ್ದು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದ ತಿರುಪತಿಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಆಕ್ಸಿಜನ್ ಟ್ಯಾಂಕರ್ ಬರುವುದು ತಡವಾಗಿದ್ದರಿಂದ 11 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಈ ದುರಂತ ನಡೆದಿದ್ದು, ಆಂಧ್ರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.

ಆಂಧ್ರ ಪ್ರದೇಶ ಸರ್ಕಾರದ ಅಧೀನದಲ್ಲಿರುವ ರೂಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ನಿನ್ನೆ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಂಡುಬಂದಿದ್ದರಿಂದ ಬೇರೆಡೆಯಿಂದ ಆಕ್ಸಿಜನ್ ತರಿಸಲು ವ್ಯವಸ್ಥೆ ಮಾಡಲಾಯಿತು. ಆದರೆ, ಆಕ್ಸಿಜನ್ ಟ್ಯಾಂಕರ್ ಆಸ್ಪತ್ರೆಗೆ ಆಗಮಿಸಿ, ಆಕ್ಸಿಜನ್ ನೀಡಲು 5 ನಿಮಿಷ ತಡವಾಗಿದ್ದರಿಂದ ಐಸಿಯುನಲ್ಲಿದ್ದ 11 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ.
ಆಕ್ಸಿಜನ್ ಅನ್ನು ಟ್ಯಾಂಕರ್​ನಿಂದ ಆಕ್ಸಿಜನ್ ಅನ್ನು ರೀಲೋಡ್ ಮಾಡಲು 5 ನಿಮಿಷ ತಡವಾಗಿದ್ದರಿಂದ 11 ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಆಕ್ಸಿಜನ್ ಪೂರೈಕೆಯಿಲ್ಲದೆ ರೋಗಿಗಳು ಒದ್ದಾಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ. ಹರಿ ನಾರಾಯಣ ತಿಳಿಸಿದ್ದಾರೆ.ತುರ್ತಾಗಿ ಆಕ್ಸಿಜನ್ ಟ್ಯಾಂಕರ್ ಅನ್ನು ತರಿಸಿ, ಆಕ್ಸಿಜನ್ ಪೂರೈಕೆ ಮಾಡಿದ್ದರಿಂದ ಇನ್ನುಳಿದ ರೋಗಿಗಳ ಜೀವ ಉಳಿದಿದೆ. ದುರಾದೃಷ್ಟವಶಾತ್ 11 ರೋಗಿಗಳು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಈ ಕೋವಿಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 1000 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆದೇಶಿಸಿದ್ದಾರೆ.
Youtube Video

ಕೆಲವು ದಿನಗಳ ಹಿಂದಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಕೂಡ ಇದೇ ರೀತಿಯ ಆಕ್ಸಿಜನ್ ದುರಂತ ಸಂಭವಿಸಿತ್ತು. ಈ ವೇಳೆ 24 ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಹಾಗೇ, ಏಪ್ರಿಲ್ 24ರಂದು ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 20ಕ್ಕೂ ಹೆಚ್ಚು ರೋಗಿಗಳು ಕೊನೆಯುಸಿರೆಳೆದಿದ್ದರು. 2 ದಿನಗಳ ಹಿಂದಷ್ಟೇ ದೆಹಲಿಯ ಸಿರ್ ಗಂಗಾ ರಾಮ್ ಆಸ್ಪತ್ರೆಯ 25 ಕೊರೋನಾ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದರು.
Published by: Sushma Chakre
First published: May 11, 2021, 9:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories