HOME » NEWS » Coronavirus-latest-news » TIME FOR CENTRAL STATE GOVERNMENTS TO WAKE UP SONIA GANDHI KVD

ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಾದ್ರೂ ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು-ಸೋನಿಯಾ ಗಾಂಧಿ ಕಿಡಿ!

ಲಾಕ್​ಡೌನ್​ನಿಂದ ಜನ ಉದ್ಯೋಗ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ದೇಶದ ಬಡ ಕುಟುಂಬಗಳಿಗೆ  6 ಸಾವಿರ ರೂ. ಹಣವನ್ನು ನೀಡಬೇಕು ಎಂದು ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.

Kavya V | news18-kannada
Updated:May 1, 2021, 3:19 PM IST
ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಾದ್ರೂ ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು-ಸೋನಿಯಾ ಗಾಂಧಿ ಕಿಡಿ!
ಸೋನಿಯಾ ಗಾಂಧಿ.
  • Share this:
ನವದೆಹಲಿ: ದೇಶದಲ್ಲಿ ಕೊರೋನಾ ವಿರಾಟರೂಪ ತಾಳಿದ್ದು, ಇಂದು ಬರೋಬ್ಬರಿ 4 ಲಕ್ಷ ಭಾರತೀಯರು ಸೋಂಕಿಗೆ ತುತ್ತಾಗಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​, ಕರ್ಫ್ಯೂ ಹೇರಲಾಗಿದ್ದರು ಸೋಂಕು ನಿಯಂತ್ರಕ್ಕೆ ಬರುತ್ತಿಲ್ಲ. ಇಂದಿನಿಂದ ವಯಸ್ಕರೆಲ್ಲರಿಗೂ ಲಸಿಕೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಎಲ್ಲಾ ರಾಜ್ಯಗಳಲ್ಲಿ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಹಿನ್ನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಹರಿಹಾಯ್ದಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ಎಚ್ಚರಿಸಿದ್ದಾರೆ.

ವಿಡಿಯೋ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಚಾಟಿ ಬೀಸಿದ್ದಾರೆ. ಕೋವಿಡ್​ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಿ ಎಂದು ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲಾಕ್​ಡೌನ್​ನಿಂದ ಜನ ಉದ್ಯೋಗ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ದೇಶದ ಬಡ ಕುಟುಂಬಗಳಿಗೆ  6 ಸಾವಿರ ರೂ. ಹಣವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ವೇಳೆ ಕಾಳಸಂತೆ ಸಕ್ರಿಯವಾಗಿದೆ. ವೈದ್ಯಕೀಯ ಉಪಕರಣಗಳು, ಔಷಧಿಗಳನ್ನು ದುಬಾರಿ ಬೆಲೆಗೆ ಮಾರುತ್ತಿರುವುದು ಹೆಚ್ಚಾಗಿದೆ. ಸರ್ಕಾರಗಳನ್ನು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಕೋವಿಡ್​ ಯುದ್ಧದಲ್ಲಿ ಕೇಂದ್ರ ಸರ್ಕಾರದ ಜೊತೆ ಕಾಂಗ್ರೆಸ್​ ಪಕ್ಷ ನಿಲ್ಲುತ್ತದೆ. ಒಟ್ಟಾಗಿ ನಾವು ಈ ಹೋರಾಟದಲ್ಲಿ ಗೆಲುವು ಸಾಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Youtube Video

ಇನ್ನು ದೇಶದಲ್ಲಿಂದು 4,01,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,99,988 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,91,64,969ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶುಕ್ರವಾರ 3,523 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,11,853ಕ್ಕೆ ಏರಿಕೆ ಆಗಿದೆ.
Published by: Kavya V
First published: May 1, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories