ನವದೆಹಲಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಗೆ ಸರ್ಕಾರ ಹತ್ತಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಜೈಲಿನಲ್ಲಿರುವ ಖೈದಿಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ 3 ಸಾವಿರ ಖೈದಿಗಳನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
3000 ಖೈದಿಗಳಲ್ಲಿ 1500 ಜನರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಹಾಗೆಯೇ ಉಳಿದ 1500 ವಿಚಾರಣಾಧೀನ ಖೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ನಾಳೆ ಮಧ್ಯರಾತ್ರಿಯಿಂದ ಎಲ್ಲ ಡೊಮೆಸ್ಟಿಕ್ ವಿಮಾನಯಾನ ಸೇವೆಯನ್ನು ರದ್ದುಗೊಳಿಸಲಾಗಿದೆ. ಈಲಗಾಗಲೇ ಕೊರೋನಾ ವೈರಸ್ಗೆ ದೇಶದಲ್ಲಿ ಒಂಭತ್ತು ಮಂದಿ ಬಲಿಯಾಗಿದ್ದು, 462ಕ್ಕೂ ಹೆಚ್ಚು ಮಂದಿ ಸೋಂಕುಪೀಡಿತರಾಗಿದ್ದಾರೆ. ವಿದೇಶದಿಂದ ಬಂದವರಲ್ಲೇ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿರುವ ಕಾರಣ ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳು ಭಾರತ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಡೊಮೆಸ್ಟಿಕ್ (ಸ್ಥಳೀಯ) ವಿಮಾನಯಾನ ಸೇವೆಯನ್ನು ರದ್ದು ಮಾಡಲಾಗಿದೆ.
ಇದನ್ನು ಓದಿ: ಕೊರೋನಾ ಭೀತಿ: ನಾಳೆ ಮಧ್ಯರಾತ್ರಿಯಿಂದ ಎಲ್ಲ ಸ್ಥಳೀಯ ವಿಮಾನಯಾನ ಸೇವೆ ರದ್ದು
ಹಾಗೆಯೇ ಹಲವು ರಾಜ್ಯಗಳನ್ನು ಲಾಕ್ಡೌನ್ ಮಾಡಲಾಗಿದ್ದು, ಸಾರಿಗೆ, ರೈಲು, ಸಂಚಾರಗಳನ್ನು ನಿರ್ಬಂಧಿಸಲಾಗಿದೆ. ಸರ್ಕಾರಿ ಕಚೇರಿ ಸೇರಿ ಖಾಸಗಿ ಕಂಪನಿಗಳು ಸಿಬ್ಬಂದಿಗೆ ರಜೆ ಅಥವಾ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ