Thyroid Problem: ಕೊರೊನಾದಿಂದ ಗುಣಮುಖರಾದವರಿಗೆ ಕಾಡುತ್ತಿದೆ ಥೈರಾಯ್ಡ್ ಸಮಸ್ಯೆ.. ಇದನ್ನು ತಪ್ಪಿಸಲು ಏನ್ಮಾಡ್ಬೇಕು?

ಕೊರೊನಾ ಸೋಂಕು ತಗುಲಿ ಗುಣಮುಖರಾಗಿ ಮನೆಗೆ ತೆರಳಿದವರಲ್ಲಿ ಇದ್ದಕ್ಕಿದ್ದಂತೆ ಗಂಟಲು ನೋವು ಕಾಣಿಸಿಕೊಳ್ಳ ತೊಡಗಿದೆ. ತಪಾಸಣೆ ಮಾಡಿದಾಗ ಅವರಲ್ಲಿ ಥೈರಾಯ್ಡ್ ಸಮಸ್ಯೆ ಕಂಡು ಬಂದಿದ್ದು ದೃಢಪಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೊನಾ ವೈರಸ್ (Corona Virus) ಸಮಾಜದಲ್ಲಿ ಸಾಕಷ್ಟು ರೋಗಿಗಳನ್ನು (Patients) ಹುಟ್ಟು ಹಾಕಿದೆ. ಕೊರೊನಾ ವೈರಸ್ ನಿಂದ ಸಾಕಷ್ಟು ಜನರು ಜೀವನ್ಮರಣ ದವಡೆಗೆ ಸಿಲುಕಿ ಒದ್ದಾಡಿದ್ದಾರೆ. ಕೊರೊನಾ ನಂತರ ದೇಹಕ್ಕೆ ಮತ್ತು ಮನಸ್ಸಿಗೆ ಹೆಚ್ಚು ತೊಂದರೆ ಉಂಟಾಗಿದೆ ಎಂಬುದು ಬಹುಜನರ ಮಾತು. ಈಗ ಕೊರೊನಾ ಬಂದು ಹೋದವರಲ್ಲಿ ಅನಾರೋಗ್ಯ (Unhealthy) ಕಾಡುವ ಆತಂಕ ಮನೆ ಮಾಡಿದೆ. ಈ ಮಧ್ಯೆ ಈಗ ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರಲ್ಲಿ (Recovered) ಹೊಸ ತಲೆ ನೋವು ಶುರುವಾಗಿದೆ. ಯಾಕಂದ್ರೆ ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರಿಗೆ ಇದೀಗ ಇದ್ದಕ್ಕಿಂದ್ದಂತೆ ಥೈರಾಯ್ಡ್ ಸಮಸ್ಯೆ ಕಾಡಲಾರಂಭಿಸಿದೆ. ಈ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರಿಗೆ ಸಕ್ಕರೆ ಕಾಯಿಲೆ, ಹೃದಯಸಂಬಂಧಿ ರೋಗ ಲಕ್ಷಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುವ ಸಂಗತಿ ಸಾಮಾನ್ಯವಾಗಿತ್ತು. ಈಗ ಥೈರಾಯ್ಡ್ (Thyroid) ಸಮಸ್ಯೆ (Problem) ಕೂಡ ಸೇರಿಕೊಂಡಿದೆ.

    ಥೈರಾಯ್ಡ್ ಸಮಸ್ಯೆ ಕೊರೊನಾ ಸೋಂಕಿತರಿಗೆ ತಲೆನೋವು

    ಕೊರೊನಾ ವೈರಸ್ ಸೋಂಕು ತಗುಲಿ, ಗುಣಮುಖರಾದ ನಂತರ ಸಕ್ಕರೆ ಕಾಯಿಲೆ ಇಲ್ಲದವರಿಗೂ ಸಹ ಸಕ್ಕರೆ ಅಂಶ ಹೆಚ್ಚಾಗಿರುವುದು ಕಂಡು ಬಂದಿತ್ತು. ಇದೀಗ ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್ ಸಮಸ್ಯೆ ಜತೆಗೆ ಥೈರಾಯ್ಡ್ ಸಮಸ್ಯೆ ಕೂಡ ಸೇರಿಕೊಂಡಿದ್ದು, ಸೋಂಕಿತರ ತಲೆಬಿಸಿಗೆ ಕಾರಣವಾಗಿದೆ.

    ಸೋಂಕಿನಿಂದ ಗುಣಮುಖ ಆದವರಲ್ಲಿ ಥೈರಾಯ್ಡ್

    ಕೆಲ ದಿನಗಳಿಂದ ಕೊರೊನಾ ಸೋಂಕು ತಗುಲಿ ಗುಣಮುಖರಾಗಿ ಮನೆಗೆ ತೆರಳಿದವರಲ್ಲಿ ಇದ್ದಕ್ಕಿದ್ದಂತೆ ಗಂಟಲು ನೋವು ಕಾಣಿಸಿಕೊಳ್ಳ ತೊಡಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪದೇ ಪದೆ ಆಸ್ಪತ್ರೆಗೆ ಓಡಾಡುವುದು ತಪ್ಪುತ್ತಿಲ್ಲ. ಗಂಟಲು ನೋವು, ಕುತ್ತಿಗೆ ಭಾಗದಲ್ಲಿ ಊತ, ಉಗಳು ನುಂಗಲು ಕಷ್ಟ ಆಗುವ ಸಮಸ್ಯೆಯಿಂದ ಆಸ್ಪತ್ರೆಗೆ ಬಂದವರನ್ನು ತಪಾಸಣೆ ಮಾಡಿದಾಗ ಅವರಲ್ಲಿ ಥೈರಾಯ್ಡ್ ಸಮಸ್ಯೆ ಕಂಡು ಬಂದಿದ್ದು ದೃಢಪಟ್ಟಿದೆ.

    ಇದನ್ನೂ ಓದಿ: ಸಕ್ಕರೆ ಬದಲಿಗೆ ಈ ವಸ್ತುಗಳನ್ನು ಬಳಸಿದ್ರೆ ಯಾವ್ದೇ ಆರೋಗ್ಯ ಸಮಸ್ಯೆ ಬರಲ್ವಂತೆ

    ಅತಿಯಾದ ಆಂಟಿಬಯೋಟೆಕ್ ಸೇವನೆ

    ವೈದ್ಯರ ಪ್ರಕಾರ, ಸೋಂಕು ಕಾಣಿಸಿಕೊಂಡಾಗ ರೋಗಿಗೆ ನೀಡಲಾಗುವ ಅತಿಯಾದ ಆಂಟಿಬಯೋಟೆಕ್ ಸೇವನೆಯಿಂದ ಹಾರ್ಮೋನ್‍ ಗಳಲ್ಲಿ ಬದಲಾವಣೆ ಉಂಟಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

    ವೈದ್ಯರ ಸಲಹೆ

    ಸೋಂಕಿನಿಂದ ಗುಣಮುಖರಾದವರಿಗೆ ಕಾಡುತ್ತಿರುವ ಥೈರಾಯ್ಡ್ ಸಮಸ್ಯೆಯಿಂದ ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಸೋಂಕಿನಿಂದ ಗುಣಮುಖರಾದವರಿಗೆ ನಾಲ್ಕು ವಾರಗಳ ನಂತರ ಥೈರಾಯ್ಡ್ ಸಮಸ್ಯೆ ದೂರವಾಗಲಿದೆ. ಆದರೆ, ಗುಣಮುಖರಾದವರು ಗಂಟಲು ನೋವು ಕಾಣಿಸಿಕೊಂಡ ಕೂಡಲೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಹಾರ್ಮೋನ್ ಗಳ ವ್ಯತ್ಯಾಸ

    ಇನ್ನು ನಮ್ಮ ಅನಿಯಮಿತ ಜೀವನ ಶೈಲಿಯಿಂದಾಗಿ ಎಲ್ಲರಲ್ಲೂ ಸಾಮಾನ್ಯ.ವಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದ ಗ್ರಂಥಿಯಿರುತ್ತದೆ. ಈ ಗ್ರಂಥಿಯಿಂದಾಗಿ ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಕೆಲವು ಆರೋಗ್ಯ ಸಮಸ್ಯೆ ಉಂಟಾಗುತ್ತವೆ.

    ದೇಹದಲ್ಲಿರುವ ಪ್ರತಿಯೊಂದು ಗ್ರಂಥಿ ಹಾಗೂ ಅಂಗಾಂಗಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಥೈರಾಯ್ಡ್ ಗ್ರಂಥಿಗಳು ಹಾರ್ಮೊನನ್ನು ಬಿಡುಗಡೆ ಮಾಡುವುದರಿಂದ ಚಯಾಪಚಾಯ, ದೇಹದ ಉಷ್ಣತೆ ಮತ್ತು ನಾಡಿಬಡಿತ ಕ್ರಿಯೆಯು ನಿಯಂತ್ರಣದಲ್ಲಿರುತ್ತದೆ. ಈ ಮೂರರಲ್ಲಿ ಯಾವುದೇ ರೀತಿಯ ಏರುಪೇರು ಆದರೂ ಅದರಿಂದ ಯಕೃತ್, ಕರುಳು, ಕಿಡ್ನಿ ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ.

    ಇದನ್ನೂ ಓದಿ: ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದಂತೆ, ಯಾವಾಗ ಎಷ್ಟು ಚಾಕೊಲೇಟ್ ತಿನ್ಬೇಕು ಅಂತ ತಿಳ್ಕೊಳಿ

    ಚರ್ಮ ಮತ್ತು ಕೂದಲಿನ ಮೇಲೆ ಥೈರಾಯ್ಡ್ ಹೆಚ್ಚು ಪರಿಣಾಮ ಬೀರುತ್ತದೆ., ಥೈರಾಯ್ಡ್ ಇರುವವರಿಗೆ ಅಂಗೈ ಬೆವರುತ್ತದೆ ಹಾಗೂ ಯಾವುದೇ ಗಾಯವಾದರೇ ಅದು ಬೇಗ ಗುಣವಾಗುವುದಿಲ್ಲ. ಒಣ ಹಾಗೂ ತುರಿಕೆ ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ಥೈರಾಯ್ಡ್ ನಿಂದ ಮುಖ ವಯಸ್ಸಾದಂತೆ ಕಾಣುತ್ತದೆ.
    Published by:renukadariyannavar
    First published: