HOME » NEWS » Coronavirus-latest-news » THREE REPORT WAS CAME ABOUT CORONAVIRUS AFTER DAYS SAYS MINISTER K SUDHAKAR RH

ಭವಿಷ್ಯದಲ್ಲಿ ಸೋಂಕಿನ ಬಗ್ಗೆ 3 ವರದಿಗಳು ಬಂದಿವೆ, ಅದರ ಬಗ್ಗೆ ಹೇಳಿ ಜನರನ್ನು ಗಾಬರಿಗೊಳಿಸಲ್ಲ; ಸಚಿವ ಕೆ.ಸುಧಾಕರ್

ಮುಂದಿನ ದಿನಗಳಲ್ಲಿ ಸೋಂಕು ಯಾವ ಸ್ಥಿತಿಯಲ್ಲಿ ಇರುತ್ತೆ ಅನ್ನೋದರ ಬಗ್ಗೆ ಮೂರು ವರದಿಗಳು ಬಂದಿವೆ.  ಅದರ ಅಂಕಿ ಸಂಖ್ಯೆ ಹೇಳಿ ಜನರ ಆತಂಕವನ್ನು ದ್ವಿಗುಣ ಮಾಡಲು ಹೋಗೋದಿಲ್ಲ. ತೀರಾ ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಧೈರ್ಯ ಹೇಳಿದರು.

news18-kannada
Updated:May 15, 2020, 2:43 PM IST
ಭವಿಷ್ಯದಲ್ಲಿ ಸೋಂಕಿನ ಬಗ್ಗೆ 3 ವರದಿಗಳು ಬಂದಿವೆ, ಅದರ ಬಗ್ಗೆ ಹೇಳಿ ಜನರನ್ನು ಗಾಬರಿಗೊಳಿಸಲ್ಲ; ಸಚಿವ ಕೆ.ಸುಧಾಕರ್
ಸಚಿವ ಡಾ| ಕೆ. ಸುಧಾಕರ್
  • Share this:
ಬೆಂಗಳೂರು: ಲಾಕ್​ಡೌನ್ ನಾಲ್ಕನೇ ಹಂತಕ್ಕೆ ಬಂದಿದ್ದೇವೆ. ಹೊರ ದೇಶ ಮತ್ತು ಹೊರ ರಾಜ್ಯದಿಂದ ಜನ ಬರುತ್ತಿದ್ದಾರೆ. ಅದರಿಂದಾಗೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ನಮ್ಮ ರಾಜ್ಯದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ವೈರಾಣು ಜೊತೆ ಜೊತೆಗೇ ನಾವು ಇರಬೇಕಾಗುತ್ತದೆ. ಶುಚಿತ್ವದಿಂದ ಎಚ್ಚರಿಕೆಯಿಂದ ಇರಬೇಕಾಗಿದೆ. ಒಂದು ಲಕ್ಷ ಹಾಸಿಗೆ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾಡಿಕೊಳ್ಳಲಾಗಿದೆ. ಜನವರಿಯಿಂದ ಆರಂಭವಾದ ಕೊರೋನಾ ಮೇ ವರೆಗೆ ರಾಜ್ಯದಲ್ಲಿ ಸಾವಿರಕ್ಕೆ ಬಂದಿದ್ದೇವೆ. ಬೇರೆ ರಾಷ್ಟ್ರ ರಾಜ್ಯಕ್ಕೆ ಹೋಲಿಸಿದರೆ, ಇದು ಕಡಿಮೆ ಪ್ರಮಾಣ ಎಂದರು.

ಕೇರಳ ರಾಜ್ಯದವರ ಜೊತೆ ಅನೇಕ ವಿಚಾರಗಳ ಬಗ್ಗೆ ವಿನಮಯ ಮಾಡಿಕೊಂಡಿದ್ದೇವೆ.  ಅವರು ಹೊರ ದೇಶದಿಂದ‌ ಬಂದರೆ ಏನ್ ಮಾಡೊದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.  ಕೇರಳ ಎರಡು ಬಾರಿ ಪ್ರಕೃತಿ ವಿಕೋಪ ನಿಭಾಯಿಸಿದ್ದು, ಇದೀಗ ಕೊರೋನಾ ಪರಿಸ್ಥಿತಿ ಎದುರಿಸಲು ಸಿದ್ದರಾಗಿದ್ದಾರೆ. ಇದುವರೆಗೂ ಅವರು 30 ಸಾವಿರ ಟೆಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಇದಕ್ಕಿಂತಲೂ ಹೆಚ್ಚಿನ ಮಂದಿಗೆ ಪರೀಕ್ಷೆ ಮಾಡಲಾಗಿದೆ. ನಾವು ಇದುವರೆಗೂ 1.20 ಲಕ್ಷ ಮಂದಿಗೆ ತಪಾಸಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಸೋಂಕು ಯಾವ ಸ್ಥಿತಿಯಲ್ಲಿ ಇರುತ್ತೆ ಅನ್ನೋದರ ಬಗ್ಗೆ ಮೂರು ವರದಿಗಳು ಬಂದಿವೆ.  ಅದರ ಅಂಕಿ ಸಂಖ್ಯೆ ಹೇಳಿ ಜನರ ಆತಂಕವನ್ನು ದ್ವಿಗುಣ ಮಾಡಲು ಹೋಗೋದಿಲ್ಲ. ತೀರಾ ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಧೈರ್ಯ ಹೇಳಿದರು.

ಇದನ್ನು ಓದಿ: BS Yeddyurappa: 500 ಕೋಟಿ ಮೌಲ್ಯದ ಎರಡನೇ ಪ್ಯಾಕೇಜ್‌ ಘೋಷಣೆ ಮಾಡಿದ ಬಿ.ಎಸ್.‌ ಯಡಿಯೂರಪ್ಪ; ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ

4.0 ಲಾಕ್​ಡೌನ್​ನಲ್ಲಿ ಇನ್ನು ಹೆಚ್ಚಿನ ರಿಲೀಫ್ ಸಿಗುವ ಸಾಧ್ಯತೆ ಇದೆ. ವಿದೇಶಗಳಿಂದ, ಹೊರ ರಾಜ್ಯಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಬರಬಹುದು. ಕ್ವಾರಂಟೈನ್ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ. ರಾಜ್ಯಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.
First published: May 15, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories