ಮೈಸೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ: ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ

ಮತ್ತೊಬ್ಬ ಬೆಂಗಳೂರಿನ 33 ವರ್ಷದ ವ್ಯಕ್ತಿ, 103ನೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ. ಹೀಗಾಗಿ ಆತನಿಗೂ ಕೊರೊನಾ ವೈರಸ್ ಸೋಂಕು ದೃಢವಾಗಿದ್ದು, ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

news18-kannada
Updated:April 1, 2020, 3:39 PM IST
ಮೈಸೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ: ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
  • Share this:
ಮೈಸೂರು(ಏ.01): ಲಾಕ್​ಡೌನ್​ ನಡುವೆಯೂ ಮೈಸೂರಿನಲ್ಲಿ ಕೊರೋನಾ ಸೋಂಕಿತರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮೂವರಿಗೆ ಕೊರೋನಾ ವೈರಸ್​ ಕಾಣಿಸಿಕೊಂಡಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಮೂವರಲ್ಲಿ ಇಬ್ಬರು ನಂಜನಗೂಡಿನ ಜುಬಿಲಿಯಂಟ್​ ಕಾರ್ಖಾನೆಯ ಕಾರ್ಮಿಕರಾಗಿದ್ದು, ಒಬ್ಬರು ಬೆಂಗಳೂರು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ನಂಜನಗೂಡಿನ ಈವರೆಗೆ ಜುಬಿಲಿಯಂಟ್ ಕಾರ್ಖಾನೆಯ 14 ಜನರಿಗೆ ಕೊರೋನಾ ಸೋಂಕು ಹರಡಿದೆ. ಮತ್ತಷ್ಟು ಕಾರ್ಮಿಕರಿಗೆ ಕೊರೋನಾ ವೈರಸ್​ ಹರಡುವ ಭೀತಿ ಇದೆ. 

ನಂಜನಗೂಡಿನಲ್ಲಿ ಪತ್ತೆಯಾದ ಮೂರನೇ ಕೊರೋನಾ ಪಾಸಿಟಿವ್​ ಪ್ರಕರಣದಿಂದ 14 ಜನರಿಗೆ ಸೋಂಕು ಹರಡಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ 37 ವರ್ಷದ ವ್ಯಕ್ತಿಗೆ (ಪಿ-103) 52ನೇ ಕೊರೊನಾ ಸೋಂಕು ಪೀಡಿತ ವ್ಯಕ್ತಿಯಿಂದ ಸೋಂಕು ತಗುಲಿರುವುದು ದೃಢವಾಗಿದೆ. ಮತ್ತೊಬ್ಬ ಪಿ-104ನೇ ವ್ಯಕ್ತಿ ಮೈಸೂರು ಜಿಲ್ಲೆಯ ನಂಜನಗೂಡಿನ 27 ವರ್ಷದ ಯುವಕನಿಗೂ 52ನೇ ಸೋಂಕಿತ ವ್ಯಕ್ತಿಯಿಂದಲೇ ಮಾಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೋನಾ ರೋಗಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ; ಸಿದ್ದರಾಮಯ್ಯ ಮನವಿ

ಮತ್ತೊಬ್ಬ ಬೆಂಗಳೂರಿನ 33 ವರ್ಷದ ವ್ಯಕ್ತಿ, 103ನೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ. ಹೀಗಾಗಿ ಆತನಿಗೂ ಕೊರೊನಾ ವೈರಸ್ ಸೋಂಕು ದೃಢವಾಗಿದ್ದು, ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೂ ರಾಜ್ಯದಲ್ಲಿ 104 ಪ್ರಕರಣಗಳ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು- 45, ಮೈಸೂರು- 17, ಚಿಕ್ಕಬಳ್ಳಾಪುರ- 9,  ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ‌ ಡಿಸ್ಚಾರ್ಜ್ ಆಗಿದ್ದಾರೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading