ನಂಜನಗೂಡಿನ ಸೋಂಕಿತರ ಜೊತೆ ಹಾಸನದ 10 ಮಂದಿ ಸಂಪರ್ಕ; ಅವರಲ್ಲಿ ಮೂವರು ನಾಪತ್ತೆ

Coronavirus News: ಈ 10 ಮಂದಿಗೂ ಪರೀಕ್ಷೆ ಮಾಡಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಹತ್ತು ಮಂದಿಯನ್ನೂ ಪರೀಕ್ಷಿಸಿ ಕೈಗೆ ಸೀಲ್ ಹಾಕಲಾಗಿತ್ತು.  ಇವರಿದ್ದಲ್ಲಿಗೆ ಕೆಲ ಕುಟುಂಬದ ಸದಸ್ಯರು ಹೋಗಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು

news18-kannada
Updated:March 30, 2020, 10:33 AM IST
ನಂಜನಗೂಡಿನ ಸೋಂಕಿತರ ಜೊತೆ ಹಾಸನದ 10 ಮಂದಿ ಸಂಪರ್ಕ; ಅವರಲ್ಲಿ ಮೂವರು ನಾಪತ್ತೆ
ಸಾಂದರ್ಭಿಕ ಚಿತ್ರ
  • Share this:
ಹಾಸನ(ಮಾ.30): ಮೈಸೂರು ಜಿಲ್ಲೆ ನಂಜನಗೂಡಿನ 5 ಕೊರೋನಾ ಸೋಂಕಿತರ ಜೊತೆ  ಹಾಸನದ 10 ಮಂದಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಈ 10 ಮಂದಿಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾದವರನ್ನು ಹಾಸನ ಜಿಲ್ಲೆಯ ಅರಕಲಗೂಡು ಮೂಲದವರು ಎಂದು ಗುರುತಿಸಲಾಗಿದೆ. ಈಗ ಆರೋಗ್ಯಾಧಿಕಾರಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ನಾಪತ್ತೆಯಾಗಿರುವ ಮೂವರನ್ನು ಹುಡುಕಿಕೊಡುವಂತೆ ಆರೋಗ್ಯಾಧಿಕಾರಿಗಳು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಶಂಕಿತರನ್ನು ಪರಿಶೀಲಿಸಿ ವರದಿ ನೀಡುವಂತೆ ಮೇಲಾಧಿಕಾರಿಗಳು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ಇಂದಿನಿಂದ ಹೋಲ್​ಸೇಲ್ ವ್ಯಾಪಾರಸ್ಥರಿಗೆ ಮಾತ್ರ ಎಪಿಎಂಸಿ ಪ್ರವೇಶ

ಹಾಸನದ 10 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕೇಸ್​ ದೃಢಪಟ್ಟಿಲ್ಲ ಎಂಬುದೊಂದೇ ನಿಟ್ಟುಸಿರು ಬಿಡುವ ವಿಷಯವಾಗಿದೆ. ಆದರೆ ನಾಪತ್ತೆಯಾದವರನ್ನು ಹುಡುಕುವುದೇ ದೊಡ್ಡ ತಲೆನೋವಾಗಿದೆ. ಹಾಸನ ಜಿಲ್ಲೆಯ ಮೂವರು ಅರಕಲಗೂಡಿನವರು, 3 ಮಂದಿ ಚನ್ನರಾಯಪಟ್ಟಣದವರು, ಓರ್ವ ಅರಸೀಕೆರೆ, ಬೇಲೂರಿನ ಇಬ್ಬರು ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ 10 ಮಂದಿಗೂ ಪರೀಕ್ಷೆ ಮಾಡಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಹತ್ತು ಮಂದಿಯನ್ನೂ ಪರೀಕ್ಷಿಸಿ ಕೈಗೆ ಸೀಲ್ ಹಾಕಲಾಗಿತ್ತು.  ಇವರಿದ್ದಲ್ಲಿಗೆ ಕೆಲ ಕುಟುಂಬದ ಸದಸ್ಯರು ಹೋಗಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇವರ 10 ಕುಟುಂಬಕ್ಕೂ 14 ದಿನ ಹೋಂ ಕ್ವಾರಂಟೈನ್ ನಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಅರಕೂಲಗೂಡು ಮೂಲದ ಮೂವರು ಕಾರ್ಮಿಕರು ಮತ್ತವರ ಕುಟುಂಬ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading