ಲಾಕ್ ಡೌನ್ ನಿಂದ ಹೆಚ್ಚಿದ ಕೆಲಸದ ಒತ್ತಡ ; ಪೊಲೀಸರಿಗೆ ಹೆಗಲು ಕೊಡಲು ಮುಂದಾದ ಸಾವಿರಾರು ಸ್ವಯಂ ಸೇವಕರು

ಸಿಬ್ಬಂದಿ ಕೊರತೆ ಸರಿದೂಗಿಸಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ಪೊಲೀಸ್ ಇಲಾಖೆ ಸ್ವಯಂ ಸೇವಕರುಗಳ ಮೊರೆ ಹೋಗಿದೆ.

news18-kannada
Updated:July 16, 2020, 1:51 PM IST
ಲಾಕ್ ಡೌನ್ ನಿಂದ ಹೆಚ್ಚಿದ ಕೆಲಸದ ಒತ್ತಡ ; ಪೊಲೀಸರಿಗೆ ಹೆಗಲು ಕೊಡಲು ಮುಂದಾದ ಸಾವಿರಾರು ಸ್ವಯಂ ಸೇವಕರು
ಸ್ವಯಂ ಸೇವಕರು
  • Share this:
ಬೆಂಗಳೂರು(ಜುಲೈ.16): ಮಾಹಾಮಾರಿ ಕೊರೋನಾ ಸೋಂಕಿಗೆ ತುತ್ತಾಗಿ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪೊಲೀಸ್ ಇಲಾಖೆಗೆ ಹೆಗಲು ಕೊಡಲು ಸಾವಿರಾರು ನಾಗರೀಕರು ಮುಂದೆ ಬಂದಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಏಳು ದಿನ ಲಾಕ್ ಡೌನ್ ವೇಳೆ ಪೊಲೀಸರ ಜೊತೆಗೂಡಿ ಕಾರ್ಯ ನಿರ್ವಹಿಸಲು ಬೆಂಗಳೂರು ಪೊಲೀಸರು ಸ್ವಯಂ ಸೇವಕರನ್ನ ಆಹ್ವಾನಿಸಿತ್ತು. ಪೊಲೀಸರ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಸುಮಾರು 9,646 ನಾಗರೀಕರು ಸ್ವಯಂ ಸೇವಕರಾಗಿ ಕೆಲಸ ಮಾಡಲು ನೋಂದಣಿಯಾಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾಹಾಮಾರಿ ಕೊರೋನಾ ಆಟ್ಟಹಾಸ ಮೆರೆಯುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದನ್ನ ಕಡಿವಾಣ ಹಾಕಲು ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನ ಏಳು ದಿನ ಲಾಕ್ ಮಾಡಿದೆ. ಲಾಕ್ ಡೌನ್ ಯಶಸ್ವಿಯಾಗಲು ಪೊಲೀಸರ ಪರಿಶ್ರಮ ಅತಿ ಮುಖ್ಯ. ಅದರೆ ಪೊಲೀಸರಲ್ಲೂ ಕೊರೋನಾ ಸೋಂಕು ಹೆಚ್ಚಾಗಿದ್ದು, 600 ಕ್ಕು ಹೆಚ್ಚು ಸಿಬ್ಬಂದಿ ಸೋಂಕಿಗೆ ತುತ್ತಾಗಿ ಅಸ್ಪತ್ರೆ ಸೇರಿದ್ದಾರೆ. ಹಾಗೂ ಸೋಂಕಿತರ ಸಂಪರ್ಕದಿಂದ ಸುಮಾರು 800 ಪೊಲೀಸರು ಕ್ವಾರಂಟೈನ್ ಗೆ ಒಳಗಾಗಿದ್ದು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ.

Thousands of Corona Volunteers are coming front help Police in Bangalore lockdownಸಿಬ್ಬಂದಿ ಕೊರತೆ ಸರಿದೂಗಿಸಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ಪೊಲೀಸ್ ಇಲಾಖೆ ಸ್ವಯಂ ಸೇವಕರುಗಳ ಮೊರೆ ಹೋಗಿದೆ. ಬೆಂಗಳೂರು ನಗರದಲ್ಲಿ ಪೊಲೀಸರ ಜೊತೆಗೂಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಆಸಕ್ತಿ ಇರುವ ನಾಗರೀಕರು ಇಲಾಖೆ ಜೊತಗೆ ಕೈ ಜೋಡಿಸಬಹುದು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು 9,646 ಜನ ಪೊಲೀಸರಿಗೆ ಹೆಗಲು ಕೊಡಲು ಮುಂದಾಗಿದ್ದಾರೆ.

ಇದನ್ನೂ ಓದಿ :  ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಟೆಸ್ಟ್ ಕುರಿತು ಸಚಿವರಿಂದ ಸುಳ್ಳು ಮಾಹಿತಿ ; ಶಾಸಕ ಆರ್​. ನರೇಂದ್ರ ಗಂಭೀರ ಆರೋಪ

ಸ್ವಯಂ ಸೇವಕರುಗಳನ್ನ ಪೊಲೀಸರೊಂದಿಗೆ ರಸ್ತೆಗಳಲ್ಲಿ ಬಂದೋ ಬಸ್ತ್, ಬ್ಯಾರಿಕೇಡ್ ಬಳಿ ವಾಹನಗಳ ತಪಾಸಣೆ, ಸ್ಟೇಷನ್ ನಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜನೆ ಮಾಡಿಕೊಳ್ಳಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ಅವರಿಗೆ ಕ್ಯಾಪ್ ಮತ್ತು ಜಾಕೆಟ್ ನೀಡುವಂತೆ ತಿಳಿಸಿದ್ದು, ದಿನವೊಂದಕ್ಕೆ ಐದಾರು ಗಂಟೆ ಕೆಲಸ ಮಾಡಿಸಿಕೊಳ್ಳಲು ಇಲಾಖೆ ಮುಂದಾಗಿದೆ.ವಿಭಾಗವಾರು ಸ್ವಯಂ ಸೇವಕರುಗಳ ನೋಂದಣಿ ವಿವರ:

ದಕ್ಷಿಣ ವಿಭಾಗ - 1967, ಉತ್ತರ ವಿಭಾಗ -1884,  ಪಶ್ಚಿಮ ವಿಭಾಗ -1532,  ಪೂರ್ವ ವಿಭಾಗ - 1184, ಆಗ್ನೇಯ ವಿಭಾಗ -1070, ವೈಟ್‌ ಫೀಲ್ಡ್ ವಿಭಾಗ- 740, ಕೇಂದ್ರ ವಿಭಾಗ - 542 ಮತ್ತು ಈಶ್ಯಾನ ವಿಭಾಗ - 706
Published by: G Hareeshkumar
First published: July 16, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading