ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ಹರಡುವವರ ವಿರುದ್ಧ ಭಯೋತ್ಪಾದಕ ಪ್ರಕರಣ ದಾಖಲು

ವೈರಸ್ ವಿರುದ್ಧದ ಹೋರಾಟಕ್ಕೆ ತುರ್ತಾಗಿ ಅಗತ್ಯವಿರುವ ಸರಬರಾಜಿಗೆ ಸಂಬಂಧಿಸಿದ ಹೋರ್ಡಿಂಗ್ ಮತ್ತು ಬೆಲೆ ಏರಿಕೆ ಪರಿಹರಿಸಲು ನ್ಯಾಯಾಂಗ ಇಲಾಖೆಯು ಕಾರ್ಯಪಡೆ (ಟಾಸ್ಕ್ ಫೋರ್ಸ್) ಸ್ಥಾಪಿಸಿದೆ.

news18-kannada
Updated:March 25, 2020, 6:24 PM IST
ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ಹರಡುವವರ ವಿರುದ್ಧ ಭಯೋತ್ಪಾದಕ ಪ್ರಕರಣ ದಾಖಲು
ಅಮೆರಿಕ ನ್ಯಾಯಾಂಗ ಇಲಾಖೆ.
  • Share this:
ನ್ಯೂಯಾರ್ಕ್: ಉದ್ದೇಶಪೂರ್ವಕವಾಗಿ ಯಾರೂ ಕೊರೋನಾ ವೈರಸ್​ ಹಬ್ಬಿಸುತ್ತಾರೆ ಅವರು ಭಯೋತ್ಪಾದನಾ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಂಗ ಇಲಾಖೆಯ ಉನ್ನತ ನಾಯಕರು, ಕಾನೂನು ಜಾರಿ ಸಂಸ್ಥೆ ಮುಖ್ಯಸ್ಥರು ಮತ್ತು ಅಮೆರಿಕದ ಎಲ್ಲ ಅಟಾರ್ನಿಗಳಿಗೆ ನೀಡಿದ ಜ್ಞಾಪಕದಲ್ಲಿ, ಡೆಪ್ಯೂಟಿ ಅಟಾರ್ನಿ ಜನರಲ್ ಜೆಫ್ರಿ ರೋಸೆನ್, ಉದ್ದೇಶಪೂರ್ವಕವಾಗಿ ಕೋವಿಡ್-19 ಸೋಂಕು ಹರಡಿದರೆ ಭಯೋತ್ಪಾದಕರೆಂದು ಅವರನ್ನು ಪರಿಗಣಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಜೈವಿಕ ದಾಳಿಯಂತೆ ಕಂಡು ಬರುತ್ತಿದೆಯಾದ್ದರಿಂದ… ಇಂತಹ ಕೃತ್ಯಗಳು ರಾಷ್ಟ್ರದ ಭಯೋತ್ಪಾದನೆಗೆ ಸಂಬಂಧಿಸಿದವು ಎಂಬುದನ್ನು ಸೂಚಿಸುತ್ತವೆ. ಕೋವಿಡ್-19 ಅನ್ನು ಅಮೆರಿಕನ್ನರ ವಿರುದ್ಧ ಅಸ್ತ್ರವಾಗಿ ಬಳಸುವ ಬೆದರಿಕೆಗಳು ಅಥವಾ ಪ್ರಯತ್ನಗಳನ್ನು ನಾವು ಸಹಿಸಲಾಗುವುದಿಲ್ಲ ಎಂದು ಎಂದು ರೋಸೆನ್ ಬರೆದಿದ್ದಾರೆ.

ಆದರೆ, ಅಂತಹ ಯಾವುದೇ ಬೆದರಿಕೆಗಳು ಅಥವಾ ಉದ್ದೇಶಪೂರ್ವಕ ಘಟನೆಗಳು ನಡೆದ ವರದಿಯಾದ ಬಗ್ಗೆಯಾಗಲಿ ಅಥವಾ ಇದು ಮುನ್ನೆಚ್ಚರಿಕೆ ಕ್ರಮ ಎಂಬುದರ ಬಗ್ಗೆ ರೋಸೆನ್​ ಹೇಳಲಿಲ್ಲ. 

ಇದನ್ನು ಓದಿ: ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್; ಒಂದೇ ದಿನದಲ್ಲಿ 738 ಸಾವು, 3,434ಕ್ಕೆ ಏರಿದ ಸಾವಿನ ಸಂಖ್ಯೆ


ಕೃಪೆ: ಪೊಲಿಟಿಕೊ.ಕಾಂ

First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading