ಶಿವಾಜಿನಗರ, ಹೊಂಗಸಂದ್ರ, ಪಾದರಾಯನಪುರ ಬೆನ್ನಲ್ಲೇ ಕೊರೋನಾ ಹಬ್ ಆಗಲಿದ್ಯಾ ಈ ವಾರ್ಡ್?

ನಾಗವಾರ ವಾರ್ಡ್ ಹಾಟ್ ಸ್ಪಾಟ್ ಆಗಬಹುದು ಎನ್ನುವ ಮುನ್ಸೂಚನೆ ಸಿಗೊಕ್ಕೆ ಕಾರಣವೂ ಇದೆ. ಈಗಾಗಲೇ ವಾರ್ಡ್ ನಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸೋಂಕಿತನಿಂದ 3 ಪ್ರಾಥಮಿಕ-50 ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳ ಪತ್ತೆ ಕೂಡ ನಡೆದಿದೆ.

news18-kannada
Updated:May 21, 2020, 3:24 PM IST
ಶಿವಾಜಿನಗರ, ಹೊಂಗಸಂದ್ರ, ಪಾದರಾಯನಪುರ ಬೆನ್ನಲ್ಲೇ ಕೊರೋನಾ ಹಬ್ ಆಗಲಿದ್ಯಾ ಈ ವಾರ್ಡ್?
ನಾಗವಾರ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
  • Share this:
ಬೆಂಗಳೂರು(ಮೇ 21): ಕೊರೋನಾ ಬಿಕ್ಕಟ್ಟು ಉದ್ಭವಿಸಿದ ನಂತರ ಉದ್ಯಾನನಗರಿಯ ಗ್ರಹಚಾರವೇ ಸರಿ ಇಲ್ಲ ಎನ್ನುವಂತಾಗಿದೆ. ಒಂದು ಪ್ರದೇಶದಲ್ಲಿ ಕೊರೋನಾ ಹತೋಟಿಗೆ ಬಂತು ಎನ್ನುವಾಗಲೇ ಮತ್ತೊಂದು ಕಡೆ ಸೋಂಕು ವಕ್ಕರಿಸುತ್ತಲೇ ಇದೆ. ಶಿವಾಜಿನಗರವಾಯ್ತು...ಹೊಂಗಸಂದ್ರವಾಯ್ತು.. ಪಾದರಾಯನಪುರ ಆಯ್ತು ಎಂತಿರುವಾಗ ಬೆಂಗಳೂರಿನ ಮತ್ತೊಂದು ವಾರ್ಡ್ ಕರೋನಾ ಹಬ್ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗ್ತಿವೆ. ಸದ್ಯಕ್ಕೆ ಬಿಬಿಎಂಪಿಗೆ ಆತಂಕ ಸೃಷ್ಟಿಸಿರುವ ವಾರ್ಡ್ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ನಾಗವಾರ.

ನಾಗವಾರ ವಾರ್ಡ್ ಕೊರೋನಾ ಫ್ಯಾಕ್ಟರಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಆತಂಕವನ್ನು ಸ್ವತಃ ಬಿಬಿಎಂಪಿ ಕಮಿಷನರ್ ಅವರೇ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಅವರು ಪಕ್ಕದ ಕೆಜಿ ಹಳ್ಳಿಯಲ್ಲಿ ನಿನ್ನೆ ಒಂದ್ ಪಾಸಿಟಿವ್ ಕೇಸ್ ವರದಿಯಾಗುತ್ತಿದ್ದಂತೆಯೇ ತಮ್ಮ ಸಿಬ್ಬಂದಿಯನ್ನು ಕರೆದೊಯ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಷ್ಟೇ ಅಲ್ಲ, ಅಗತ್ಯ,ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲೇ ಕುಮಾರಸ್ವಾಮಿ ಮಗನ ಮುಂದಿನ ರಾಜಕೀಯ ಹೆಜ್ಜೆ? ಅಪ್ಪನ ಗರಡಿಯಲ್ಲಿ ನಿಖಿಲ್ ಕಸರತ್ತು

ನಾಗವಾರ ವಾರ್ಡ್ ಕೋವಿಡ್ ಹಾಟ್​ಸ್ಪಾಟ್ ಆಗಬಹುದು ಎಂಬ ಆತಂಕಕ್ಕೆ ಕಾರಣವೂ ಇದೆ. ಈಗಾಗಲೇ ವಾರ್ಡ್​ನಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸೋಂಕಿತನಿಂದ 3 ಪ್ರಾಥಮಿಕ, 50 ದ್ವಿತೀಯ ಸಂಪರ್ಕ ವ್ಯಕ್ತಿಗಳ ಪತ್ತೆ ಕೂಡ ನಡೆದಿದೆ.

ಬಿಬಿಎಂಪಿಯಿಂದ  ಕ್ವಾರಂಟೈನ್​ಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಆದರೂ ತುಂಬಾ ಒತ್ತೊತ್ತಾಗಿರುವ ಮನೆಗಳಲ್ಲಿ ವಾಸ ಮಾಡುವ ಜನರೇ ಹೆಚ್ಚಾಗಿರುವ ಇಂಥ ಏರಿಯಾಗಳಲ್ಲಿ ಸೋಂಕಿತನೊಂದಿಗೆ ಇನ್ನೂ ನೂರಾರು ಜನ ಸಂಪರ್ಕಕ್ಕೆ ಬಂದಿರುವ ಆತಂಕ ಇದೆ. ಆದ್ದರಿಂದ ಸ್ಯಾಂಪಲ್ಸ್ ಟೆಸ್ಟ್ ಮಾಡಲು ಎಲ್ಲಾ ರೀತಿಯ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ.

ನಾಗವಾರ ವಾರ್ಡ್​ಗೆ ಹೊಂದಿಕೊಂಡಿರುವ ಕೆಜಿ ಹಳ್ಳಿಯಲ್ಲಿ ಈಗಾಗಲೇ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಆತಂಕ ಇದೆ. ಅದು ಸತ್ಯವಾಗಿ ಇಡೀ ವಾರ್ಡ್ ಅನ್ನು ಸೀಲ್ ಡೌನ್ ಮಾಡಿ ಅಕ್ಕಪಕ್ಕದ ವಾರ್ಡ್​ನವರಿಗೂ ಆತಂಕ ಹುಟ್ಟಿಸುವುದಕ್ಕಿಂತ ಮುನ್ನವೇ ವಾರ್ಡ್​ನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೋಂಕು ಹರಡದಂತೆ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಈಗಲೇ ಮಾಡುವುದು ಸೂಕ್ತ ಎಂಬ ಚಿಂತನೆಯಲ್ಲಿ ಬಿಬಿಎಂಪಿ ಇದೆ.

ಇದನ್ನೂ ಓದಿ: Vijaypur Coronavirus: ಮಹಾರಾಷ್ಟ್ರದಿಂದ ತಪ್ಪಿಸಿಕೊಂಡು ಬಂದ ಕೊರೋನಾ ಸೋಂಕಿತನಿಗೆ ವಿಜಯಪುರದಲ್ಲಿ ಚಿಕಿತ್ಸೆಕೊರೋನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಕಮಿಷನರ್ ಭೇಟಿ ಕೊಟ್ಟು ಅಧಿಕಾರಿಗಳ ಜತೆ ಮಾತನಾಡಿ ಹೋ್ಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಸೋಂಕಿತನ ಜತೆ ನಾವೇನಾದ್ರೂ ಸಂಪರ್ಕಕ್ಕೆ ಬಂದಿದ್ವಾ ಎಂದು ಪುನರ್ಮನನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ನಡುವೆ ಕಮಿಷನರ್ ಅನಿಲ್ ಕುಮಾರ್ ಕೂಡ ಸ್ಥಳೀಯರು ಹಾಗೂ ಮುಖಂಡರನ್ನು ಈ ನಿಟ್ಟಿನಲ್ಲಿ ಮಾತನಾಡಿಸಿ ಸಮಾಧಾನ ನೀಡಿದ್ದಾರೆ. ಕೊರೋನಾದಿಂದ ಬಚಾವಾಗಲು ಬೇಕಾದ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಿದ್ದಾರೆ.

ಲಾಕ್ ಡೌನ್ ತೆರವಾದ ಬಳಿಕ ಬೆಂಗಳೂರಿನ ಸದ್ಯದ ಪರಿಸ್ಥಿತಿ ಹಾಗೂ ಜನಜೀವನ ಗಮನಿಸಿದರೆ ಆತಂಕವಾಗೋದಂತೂ ಸತ್ಯ. ಜನ ಎಲ್ಲಾ ಸುರಕ್ಷತಾ ಕ್ರಮ ಮರೆತು ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿದ್ದಾರೆ. ದುರಂತ ಎಂದರೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆನ್ನುವ ಪರಿಜ್ಞಾನವಿಲ್ಲದಂತೆ ಸಚಿವರು, ಶಾಸಕರು, ಕಾರ್ಪೊರೇಟರ್ಸ್ ಹಾಗೂ ರಾಜಕೀಯ ಮುಖಂಡರು ವರ್ತಿಸುತ್ತಿದ್ದಾರೆ. ಅವರೆಲ್ಲಾ ಕೊರೋನಾ ಯುದ್ಧವನ್ನು ನಾವು ಗೆದ್ದಾಯ್ತು ಎನ್ನುವ ಭ್ರಮೆಯಲ್ಲಿದ್ದಾರೆ. ಏಕೆಂದ್ರೆ ಇದೇ ಭ್ರಮೆ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಷ್ಟೇ..

ವರದಿ: ಥಾಮಸ್ ಪುಷ್ಪರಾಜ್

First published: May 21, 2020, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading