ಕೊರೋನಾ ತಡೆಯೋದಕ್ಕೆ ಈ ಊರಲ್ಲಿ ಮಾಡ್ತಾರೆ ವಿಶೇಷ ಹಬ್ಬ; ಈ ಸಂಪ್ರದಾಯದ ಹಿನ್ನೆಲೆ ಏನು ಗೊತ್ತಾ?

ಹಿಂದಿನ ಪೂರ್ವಜರು ಗ್ರಾಮಗಳಲ್ಲಿ ಪ್ಲೇಗ್ ಹಾಗೂ ಕಾಲರದಂತಹ ಮಹಾಮಾರಿ ಕಾಯಿಲೆಗಳು ಬಂದಾಗ ಊರುಗಳಲ್ಲಿ ಅಜ್ಜಿ ಹಬ್ಬವನ್ನು ಆಚರಿಸುತ್ತಿದ್ದರು ಇದರಿಂದ ಕಾಯಿಲೆ ಆ ಗ್ರಾಮದಿಂದ ಸಂಪೂರ್ಣವಾಗಿ ವಾಸಿಯಾಗುತ್ತಿತ್ತು ಎಂಬ ನಂಬಿಕೆ ಇದೆ.

news18-kannada
Updated:May 23, 2020, 8:21 PM IST
ಕೊರೋನಾ ತಡೆಯೋದಕ್ಕೆ ಈ ಊರಲ್ಲಿ ಮಾಡ್ತಾರೆ ವಿಶೇಷ ಹಬ್ಬ; ಈ ಸಂಪ್ರದಾಯದ ಹಿನ್ನೆಲೆ ಏನು ಗೊತ್ತಾ?
ಅಜ್ಜಿ ಹಬ್ಬ ಆಚರಿಸಿರುವ ತುಮಕೂರಿನ ಜವರೇಗೌಡನಪಾಳ್ಯ ಗ್ರಾಮದ ಜನ.
  • Share this:
ತುಮಕೂರು (ಮೇ 23): ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ಕರ್ನಾಟಕವನ್ನೂ ಬಿಟ್ಟಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಮಹಾಮಾರಿ ನಮ್ಮೂರಿಗೆ ಬರಬಾರದು ಅಂತ ಗ್ರಾಮಸ್ಥರೆಲ್ಲ ಸೇರಿ ಬೇವಿನ ಮರದ ಕೆಳಗೆ ಹೋಳಿಗೆ ಅರ್ಪಿಸುವ ಮೂಲಕ ವಿಶೇಷವಾಗಿ "ಅಜ್ಜಿ ಹಬ್ಬ" ಆಚರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜವರೇಗೌಡನಪಾಳ್ಯ ಗ್ರಾಮದಲ್ಲಿ ಅಜ್ಜಿ ಹಬ್ಬ ಮಾಡಿ ಗ್ರಾಮದ ಹೊರವಲಯದ ಪೂರ್ವ ದಿಕ್ಕಿನ ಬೇವಿನ ಮರದ ಸುತ್ತಲೂ ಪ್ರತಿ ಮನೆಯಿಂದ ಒಂದು ಮಣ್ಣಿನ ಕುಡಿಕೆ, ದ್ವೀಪ, ಬಳೆ, ಬಂಗಾರ, ಅರಿಶಿನ, ಕುಂಕುಮ, ಊದುಬತ್ತಿ, ಕರ್ಪೂರ ಎಲ್ಲವನ್ನೂ ಬಳಸಿ ಪೂಜೆ ಮಾಡುವ ಮೂಲಕ  ಹೋಳಿಗೆ ಮೊಸರು ಅನ್ನವನ್ನು ಎಡೆ ಹಾಕಿ ನಂತರ ಬೇವಿನ ಮರಕ್ಕೆ ವಿವಿಧ ಬಗೆಯ ಹೂವುಗಳಿಂದ ಪೂಜೆ ಸಲ್ಲಿಸಿ ಅಲ್ಲೇ ಬಿಟ್ಟು ಬರುವ ವಿಶೇಷ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಣೆ ಮಾಡಲಾಯಿತು.

ಹಿಂದಿನ ಪೂರ್ವಜರು ಗ್ರಾಮಗಳಲ್ಲಿ ಪ್ಲೇಗ್ ಹಾಗೂ ಕಾಲರದಂತಹ ಮಹಾಮಾರಿ ಕಾಯಿಲೆಗಳು ಬಂದಾಗ ಊರುಗಳಲ್ಲಿ ಅಜ್ಜಿ ಹಬ್ಬವನ್ನು ಆಚರಿಸುತ್ತಿದ್ದರು ಇದರಿಂದ ಕಾಯಿಲೆ ಆ ಗ್ರಾಮದಿಂದ ಸಂಪೂರ್ಣವಾಗಿ ವಾಸಿಯಾಗುತ್ತಿತ್ತು ಎಂಬ ನಂಬಿಕೆ ಇದೆ. ಅದೇ ರೀತಿ ಕೊರೋನಾ ಕಾಯಿಲೆ ಈ ಗ್ರಾಮಕ್ಕೆ ಬರದಂತೆ ಇರಲಿ ಎಂಬ ಹಿರಿಯರ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಿದ್ದಾರೆ ಈ ಗ್ರಾಮಸ್ಥರು.

ಈ ಗ್ರಾಮದಲ್ಲಿ ಸುಮಾರು ಮೂವತ್ತು ವರ್ಷದ ಹಿಂದೆ ಈ ಅಜ್ಜಿ ಹಬ್ಬ ಆಚರಿಸಿದ್ದರಂತೆ ಏಕೆಂದರೆ ನಮ್ಮ ಅಕ್ಕಪಕ್ಕದ ಊರುಗಳಲ್ಲಿ ಈ ಗ್ರಾಮದ ಮಕ್ಕಳಲ್ಲಿ ರಾಗಿ ಗಾತ್ರದ ಉಣ್ಣುಗಳು (ಅಮ್ಮ) ಕಾಣಿಸಿಕೊಂಡವು, ಧನ ಕರುಗಳು ಅನೇಕ ಕಾಯಿಲೆಗಳಿಂದ ಸಾಯುತ್ತಿದ್ದವು ಅದೇ ಸಮಯದಲ್ಲಿ ಜವರೇಗೌಡನಪಾಳ್ಯದ ಪಕ್ಕದ ಊರಿನಲ್ಲಿ ಒಂದು ಘಟನೆ ನಡೆದಿತ್ತಂತೆ.

ಹಣ್ಣಣ್ಣು ಅಜ್ಜಿಯೊಂದು ಕುರಿ ಕಾಯುತ್ತಿದ್ದ ಒಬ್ಬ ಮಹಿಳೆಗೆ ನನ್ನ ತಲೆ ಬಹಳ ಕಡಿಯುತ್ತಿದೇ ಏನು ಇರಬಹುದು ನೋಡು ತಾಯಿ ಅಂತ ಹೇಳಿದ್ದರಂತೆ. ಅದಕ್ಕೆ ಅ ಮಹಿಳೆ ಅಜ್ಜಿಯ ತಲೆ ಕೂದಲು ಸರಿಸಿ ನೋಡಲು ಪ್ರಾರಂಭಿಸಿದ್ದಾರೆ. ಆ ಅಜ್ಜಿಯ ತಲೆಯ ತುಂಬೆಲ್ಲ ಕಣ್ಣುಗಳು ಇದ್ದವಂತೆ. ಅದಿಕ್ಕೆ ಆ ಕುರಿ ಕಾಯುವ ಮಹಿಳೆ  ಏನಜ್ಜಿ ನಿನ್ನ ತಲೆ ತುಂಬಾ ಕಣ್ಣುಗಳಿವೆ ಏನಿದು? ಎಂದು ಕೇಳಿದಾಗ,

ಆ ಅಜ್ಜಿ ನೋಡವ್ವ ಮುಂಚೆ ಅಜ್ಜಿ ಹಬ್ಬ ಅಂತ ಮಾಡ್ತಿದ್ರು ಇವಾಗ ಮಾಡೋದು ಬಿಟ್ಟಿರೋದಕ್ಕೆ ಹೀಗೆ ಹಾಗಿದೆ ಎಂದು ಹೇಳಿ ತಕ್ಷಣ ಮಾಯವಾಗಿದ್ದರಂತೆ. ಇದನ್ನು ಕಂಡ ಕುರಿಗಾಹಿ ಮಹಿಳೆ ಅಕ್ಕಪಕ್ಕದ ಊರಿನವರಿಗೆಲ್ಲ ನಡೆದ ಘಟನೆ ತಿಳಿಸಿದ್ದಾಳೆ. ಆದ್ದರಿಂದ ಆ ನಂಬಿಕೆಯಿಂದಲೇ ಹಳ್ಳಿಯರೆಲ್ಲಾ ಸೇರಿ ಊರಿನ ಹೊರಗೆ ಇರುವ ಬೇವಿನ ಮರದ ಕೆಳಗೆ ಒಬ್ಬಟ್ಟು ಇಟ್ಟು ಪೂಜೆ ಮಾಡಿ ಹಿಂದಿರುಗಿ ನೋಡದಂತೆ ಮನೆಗೆ ಬರುವ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಿಸುತ್ತಿದ್ದಾರಂತೆ.

ನಮ್ಮ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರು ನಮ್ಮ ಹಿರಿಯರ ಆಚಾರ- ವಿಚಾರ, ರೂಢಿ- ಸಂಪ್ರದಾಯಗಳು ಗ್ರಾಮೀಣ ಜನರಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದೇ ವಿಶೇಷ.ಇದನ್ನೂ ಓದಿ : ಸರ್ಕಾರದ ಮಾರ್ಗಸೂಚಿಯಂತೆ ಈದ್ ಹಬ್ಬ ಆಚರಿಸಿ; ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಮನವಿ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading