ಕೊರೋನಾ‌ ಸಂಕಷ್ಟ; ಈ ವರ್ಷ ಕೊಟ್ಟಷ್ಟು ಫೀಸು ಪಡೆಯಲು ಬೆಂಗಳೂರಿನ ಈ ಖಾಸಗಿ ಶಾಲೆ ನಿರ್ಧಾರ

ಪೋಷಕರು ಕನಿಷ್ಠ ನೂರು ರೂಪಾಯಿ ಕೊಟ್ಟರೂ ಮಕ್ಕಳನ್ನು ಶಾಲೆಗೆ ದಾಖಲು  ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇಷ್ಟು ಮಾತ್ರವಲ್ಲ ಕೊರೋನಾ ವಾರಿಯರ್ಸ್ ಮಕ್ಕಳಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಶಾಲೆಯ ಸಿಬ್ಬಂದಿಗಳ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

news18-kannada
Updated:August 11, 2020, 9:20 PM IST
ಕೊರೋನಾ‌ ಸಂಕಷ್ಟ; ಈ ವರ್ಷ ಕೊಟ್ಟಷ್ಟು ಫೀಸು ಪಡೆಯಲು ಬೆಂಗಳೂರಿನ ಈ ಖಾಸಗಿ ಶಾಲೆ ನಿರ್ಧಾರ
ಬೆಂಗಳೂರಿನ ಫ್ರೀ ಥಿಂಕಿಂಗ್ ಖಾಸಗಿ ಶಾಲೆ.
  • Share this:
ಬೆಂಗಳೂರು; ಕೊರೋನಾ ಸಂಕಷ್ಟದಲ್ಲೂ ಖಾಸಗಿ ಶಾಲೆಗಳ ಶುಲ್ಕ ವಸೂಲಿ ನಿಂತಿಲ್ಲ. ಆನ್‌ಲೈನ್ ಕ್ಲಾಸ್ ಹೆಸರಿನಲ್ಲಿ ಪೋಷಕರಿಂದ ಖಾಸಗಿ ಶಾಲಾ ಆಡಳಿತ ಮಂಡಳಿ ಫೀಸ್ ಕೀಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಅಪವಾದ ಎಂಬಂತಿದೆ ಬೆಂಗಳೂರಿನ ಈ ಖಾಸಗಿ ಶಾಲೆ. ಈ ವರ್ಷ ಪೋಷಕರು ಕೊಟ್ಟಷ್ಟು ಫೀಸು ಪಡೆಯಲು ನಿರ್ಧರಿಸಿದೆ.

ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫೀಸು ಕೇಳದ ಖಾಸಗಿ ಶಾಲೆಯೊಂದು ಇದೆ. 'ನಿಮಗೆ ಅನುಕೂಲವಾದಷ್ಟು ಫೀಸು ಕೊಡಿ, ಈ ವರ್ಷ ಫೀಸು ಕೊಡದೇ ಹೋದರೂ ಚಿಂತೆಯಿಲ್ಲ, ಆದರೆ ಮಕ್ಕಳಿಗೆ ಶಿಕ್ಷಣ ಮಾತ್ರ ಮಿಸ್‌ ಮಾಡದೇ ಕೊಡಿಸಿ. ಮುಂದಿನ ವರ್ಷವಾದರೂ ನಿಮಗಾದಷ್ಟು ಫೀಸು ಕೊಡಿ' ಎಂದು ಪೋಷಕರಿಗೆ ಬೆಂಗಳೂರಿನ ಫ್ರೀ ಥಿಂಕಿಂಗ್ ಸ್ಕೂಲ್ ಹೇಳಿದೆ.

ಕೊರೋನಾ‌ದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇದುವರೆಗೂ ಶಾಲಾ- ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಆದರೆ ಆನ್ ಲೈನ್ ಹಾಗೂ ಆಫ್ ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಸೂಚಿಸಿದೆ. ಇಂಥ ಸಂದಿಗ್ಧ ಪರಿಸ್ಥಿತಿ ಅರಿತು ಬೆಂಗಳೂರಿನ ಕೋರಮಂಗಲದಲ್ಲಿರುವ ಫ್ರಿ ಥಿಂಕಿಂಗ್ ಸ್ಕೂಲ್ (free thinking school) ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ. ಬೆಂಗಳೂರಿನ ಕೋರಮಂಗಲ, ಕೂಡ್ಲು ಹಾಗೂ ಕೇರಳದಲ್ಲಿಯೂ ಇದರ ಶಾಲಾ ಕೇಂದ್ರಗಳಿವೆ. ಮಾಂಟಿಸರಿ ಮಾದರಿ ಶಿಕ್ಷಣ ನೀಡುತ್ತಿರುವ ಫ್ರಿ ಥಿಂಕಿಂಗ್ ಶಾಲೆಯ ಪ್ರಿ ಸ್ಕೂಲ್‌ಮಕ್ಕಳಿಗೆ ವಾರಕ್ಕೆ ಒಂದು ಬಾರಿ ಮಾತ್ರ ಮಕ್ಕಳಿಗೆ ಆನ್‌ಲೈನ್ ಪಾಠ ನೀಡುತ್ತಿದೆ. ಮುಂದೆ ಶಾಲೆ‌ ಸಂಪೂರ್ಣ ತೆರೆದರೂ ಶಾಲಾ ಶುಲ್ಕು ಕೊಡಲು ಕಷ್ಟವಾದವರಿಂದ ಶುಲ್ಕ ಪಡೆಯದೆ ಇರಲು ಶಾಲೆಯ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.

ಪೋಷಕರು ಕನಿಷ್ಠ ನೂರು ರೂಪಾಯಿ ಕೊಟ್ಟರೂ ಮಕ್ಕಳನ್ನು ಶಾಲೆಗೆ ದಾಖಲು  ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇಷ್ಟು ಮಾತ್ರವಲ್ಲ ಕೊರೋನಾ ವಾರಿಯರ್ಸ್ ಮಕ್ಕಳಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಶಾಲೆಯ ಸಿಬ್ಬಂದಿಗಳ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ‌ಈ ವರ್ಷ ಆಡಳಿತ ಮಂಡಳಿಗೆ ಸಂಕಷ್ಟವಾದರೂ ಚಿಂತೆಯಿಲ್ಲ. ತಮ್ಮ ಕೈಲಾದ ಸಹಾಯ ಮಾಡಲು ಶಾಲೆ ನಿರ್ಧಾರ ಮಾಡಿದೆ.

ಕೊರೋನಾ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಸಹಾಯಕರಾದ‌ ಮಕ್ಕಳು ಶಿಕ್ಷಣ ಪಡೆಯಬೇಕೆಂಬುದೇ ಇವರ ಉದ್ದೇಶ ಎಂದು ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕಿ ಸ್ಯಾಂಡಿ ಫಿಲಿಪ್ ಹೇಳುತ್ತಾರೆ. ಇನ್ನು ಈ ಶಾಲೆಯಲ್ಲಿ‌ ಕೆಲಸ‌ ಮಾಡುವ ಶಿಕ್ಷಕರು, ಆಯಾ, ಚಾಲಕರು ಹಾಗೂ ಮತ್ತಿತರೆ ಸಿಬ್ಬಂದಿಗಳಿಗೆ ಕೊರೋನಾ‌ ಸಂಕಷ್ಟವಿದ್ದರೂ ವೇತನ ಕಡಿಮೆ ಮಾಡದೇ ಶಾಲಾ ಆಡಳಿತ ಮಂಡಳಿ ನೀಡಿದೆ ಎಂದು ಶಾಲೆಯ ಶಿಕ್ಷಕಿ ನಿಖಿತಾ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Coronavirus Vaccine: ಕೊರೋನಾಗೆ ಔಷಧ ಕಂಡುಹಿಡಿದ ರಷ್ಯಾ; ಲಸಿಕೆಗಾಗಿ 20 ದೇಶಗಳಿಂದ ಈಗಾಗಲೇ ಬೇಡಿಕೆ
ಬೆಂಗಳೂರಿನಲ್ಲಿ ಧನದಾಹಿ ಖಾಸಗಿ ಶಾಲೆಗಳೇ ಹೆಚ್ಚು. ಫೀಸು ಕೊಡದೇ ಹೋದರೆ ಬುಕ್ ಕೊಡಲ್ಲ, ಆನ್ ಲೈನ್‌ಕ್ಲಾಸ್ ಕೂರಿಸುವುದಿಲ್ಲ ಎಂದು ರಂಪಾಟ ಮಾಡುವ ಘಟನೆಗಳು ಹೆಚ್ಚಾಗಿ ಜರುಗಿದೆ. ಆದರೆ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಖಾಸಗಿ ಶಾಲೆಯ ನಿರ್ಧಾರ ಪೋಷಕರಿಗೆ ಸಾಕಷ್ಟು ಸಮಾಧಾನ ತಂದಿದೆ.
Published by: HR Ramesh
First published: August 11, 2020, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading