ನವದೆಹಲಿ: ಪ್ರಪಂಚದಾದ್ಯಂತ ಜನರು ಮಹಾಮಾರಿ ಕೊರೋನಾ ವೈರಸ್ನಿಂದ ತತ್ತರಿಸಿ ಹೋಗಿದ್ದರೆ, ಇಲ್ಲೊಂದು ಸಂಸ್ಥೆ, ವೈರಸ್ ಸೋಂಕಿತರಿಗೆ ಜೀವವಿಮೆ ನೀಡುವ ಯೋಜನೆ ಹಾಕಿಕೊಂಡಿದೆ.
ಇನ್ನೂ ಈ ವಿಮೆಯನ್ನು ಪಡೆಯುವಲ್ಲಿ ನೀವು ಪ್ರಯಾಣ ಮಾಡಿರುವ ದಾಖಲೆ ಅಗತ್ಯ. ಈ ಪಾಲಿಸಿಯ ಪ್ರಕಾರ ನೀವು ಚೀನಾ, ಥೈಲೆಂಡ್, ಹಾಂಕಾಂಗ್, ಮಲೇಷಿಯಾ, ಇಟಲಿ, ಸಿಂಗಾಪುರ, ತೈವಾನ್, ಜಪಾನ್, ಕುವೈತ್, ಬಹರೆನ್, ಇರಾನ್ ಸೇರಿದಂತ ಸೌತ್ ಕೊರಿಯ ದೇಶಗಳಿಗೆ ನೀವು ಹೋಗಿ ಬಂದಿದ್ದರೆ ನಿಮಗೆ ಈ ವಿಮೆ ಸಿಗುವುದಿಲ್ಲ.
ಸಾಮಾನ್ಯ ವಿಮಾ ಕಂಪನಿಯಾದ ಡಿಜಿಟ್ ಕಂಪನಿಯು ಸಧ್ಯದ ಪರಿಸ್ಥಿಗೆ ಹೊಂದುವಂತಹ ವಿಮಾ ಯೋಜನೆಯನ್ನು ಹೊರತಂದಿದೆ. ಡಿಜಿಟ್ ಹೆಲ್ತ್ ಕೇರ್ ಪ್ಲಸ್ ವಿಮಾ ಪಾಲಿಸಿಯು ಕೊರೋನಾ ವೈರಸ್ನಿಂದ ಬಳಲುತ್ತಿರುವ ರೋಗಿಗಳ ಆಸ್ಪತ್ರೆಯ ಖರ್ಚುಗಳನ್ನು ಭರಿಸುತ್ತದೆ. ಸಧ್ಯ ಕೊರೋನಾ ರೋಗಕ್ಕೆ ವಿಮೆಯನ್ನು ಕಂಪನಿ ಕೊಡುತ್ತದೆ. ಕಂಪನಿಯ ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ವಿಮೆ ಮಾಡಿಸಬಹುದು. ಇನ್ನು ಈ ಆ್ಯಪ್ಗಳು ಐ ಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್ಗಳಲ್ಲಿ ಲಭ್ಯವಿದೆ. ವಿಮೆ ಲಭಿಸುವ ಮೊತ್ತವು 25 ಸಾವಿರದಿಂದ 2 ಲಕ್ಷದ ವರೆಗೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಭ್ಯವಿದೆ.
ವಿಮೆ ಪಡೆಯಲು ಕೆಲವು ನಿಯಮಗಳಿವೆ. ವೈರಸ್ ಸೋಂಕಿನ ಲಕ್ಷಣವಿದ್ದು 14 ದಿನಗಳ ಕಾಲ ಸರ್ಕಾರಿ ಆಸ್ಪತ್ರೆ ಅಥವಾ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿರಬೇಕು. ಜತೆಗೆ ಸರ್ಕಾರಿ ಆಸ್ಪತ್ರೆ ಅಥವಾ ಮಿಲಿಟರಿ ಆಸ್ಪತ್ರೆಯಿಂದ ಅಧಿಕೃತ ಧೃಢೀಕರಣ ಪತ್ರ ನೀಡಬೇಕು.
ವಿಮೆದಾರರು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋಂಕು ತಗುಲಿರುವ ಬಗ್ಗೆ ಧೃಢೀಕರಣ ಪತ್ರ ನೀಡಬೇಕು. ಇವೆಲ್ಲ ಆಧಾರಗಳು ಇದ್ದರೆ ತಡ ಮಾಡದೇ, ಚಿಕಿತ್ಸೆಗೂ ಮೊದಲು ವಿಮಾ ಮೊತ್ತವನ್ನು ಕಂಪನಿ ನೀಡುತ್ತದೆ.
ಇನ್ನೂ, 25 ಸಾವಿರದ ವಿಮಾ ಮೊತ್ತಕ್ಕೆ ಜನ ಕಟ್ಟಬೇಕಾಗಿದ್ದು ಕೇವಲ ರೂ. 253 ಮಾತ್ರ. ರೂ. 50 ಸಾವಿರದ ವಿಮೆಗೆ ರೂ. 507, ರೂ. 75 ಸಾವಿರಕ್ಕೆ ರೂ. 760ನ್ನು ಕಟ್ಟಬೇಕು. 1 ಲಕ್ಷ ಮೊತ್ತದ ವಿಮೆಯನ್ನು ಪಡೆಯಬೇಕೆಂದರೆ ರೂ. 1,014 ರೂ, 1 ಲಕ್ಷದ 25 ಸಾವಿರದ ವಿಮೆಗೆ ರೂ. 1,267 ರೂ, 1 ಲಕ್ಷದ 50 ಸಾವಿರದ ಕ್ಕೆ ರೂ. 1,520, 1 ಲಕ್ಷದ 75 ಸಾವಿರದ ವಿಮೆಗೆ ರೂ. 1, 774 ಮತ್ತು 2 ಲಕ್ಷದ ವಿಮೆಗೆ ರೂ. 2,027ರೂಗಳನ್ನು ಜನ ಕಟ್ಟಬೇಕು.
ಕಂಪನಿಯ ವೆಬ್ ಸೈಟ್ನಲ್ಲಿ ಲಾಗ್ ಇನ್ ಆದರೆ ವಿಮೆ ಕುರಿತಾದ ನಿಯಮ ಸೇರಿದಂತೆ ಎಲ್ಲಾ ಮಾಹಿತಿಯೂ ಲಭ್ಯವಿದೆ.
ನಿಯಮವೇನು?:
- ವಿಮೆ ಮಾಡಿಸುವವರು 60 ವರ್ಷಕ್ಕಿಂತ ಮೇಲ್ಪಟ್ಟರಬಾರದು.
- ಪುಣೆ ICMR ಅಲ್ಲದೇ ಬೇರೆ ಯಾವುದೇ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.
- ಭಾರತ ಬಿಟ್ಟು ಬೇರೆ ಯಾವುದೇ ದೇಶಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಸಹ ಈ ವಿಮೆ ಸಿಗುವುದಿಲ್ಲ.
- ಕೊರೋನಾ ವೈರಸ್ ಸಂಬಂಧಿತ ಚಿಕಿತ್ಸೆಗಳಿಗೆ ಮಾತ್ರ ವಿಮೆ ಸೀಮಿತ.
- ಇತರೆ ಆರೋಗ್ಯ ಸಂಬಂಧಿತ ಕಾಯಿಲೆಗಳನ್ನು ವಿಮೆ ಭರಿಸುವುದಿಲ್ಲ.
- ಅಲ್ಲದೇ ಕೊರೋನಾ ವೈರಸ್ ಸೋಂಕು ತಗುಲಿಲ್ಲ ಎಂದಾದರೆ ಆಗ ಸಹ ವಿಮೆ ದೊರೆಯುವುದಿಲ್ಲ.
ಇದನ್ನೂ ಓದಿ: ಕೊರೋನಾ ಪೀಡಿತ ಕಾರ್ಮಿಕರಿಗೆ 28 ದಿನ ವೇತನಸಹಿತ ರಜೆ; ಸೂತ್ತೋಲೆ ಹೊರಡಿಸಿದ ಕಾರ್ಮಿಕ ಇಲಾಖೆ
ನೀವು ಪ್ರವಾಸ ಮಾಡಿರುವ ಪುರಾವೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ನೀವು ಚೀನಾ, ಥೈಲೆಂಡ್, ಹಾಂಕಾಂಗ್, ಮಲೇಷಿಯಾ, ಇಟಲಿ, ಸಿಂಗಾಪುರ, ತೈವಾನ್, ಜಪಾನ್, ಕುವೈತ್, ಬಹರೆನ್, ಇರಾನ್ ಸೇರಿದಂತ ಸೌತ್ ಕೊರಿಯ ದೇಶಗಳಿಗೆ ನೀವು ಡಿಸೆಂಬರ 1, 2019ರ ನಂತರ ಹೋಗಿ ಬಂದಿದ್ದರೆ ನಿಮಗೆ ಈ ವಿಮೆ ಸಿಗುವುದಿಲ್ಲ. ವಿಮೆ ನೀಡುವ ಮೊದಲು ಗ್ರಾಹಕರ ಪರಿಷ್ಕರಣೆ ನಡೆಯುವುದಂತು ಸತ್ಯ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಲು ಒಲ್ಲೆ ಎಂದು ಓಡಿಹೋದ ಕೊರೋನಾ ಸೋಂಕು ಶಂಕಿತ
ಈ ವಿಮಾ ಯೋಜನೆ, IRDAI, ರೆಗ್ಯೂಲೇಟರಿ ಸ್ಯಾಂಡ್ ಬಾಕ್ಸ್ ರೆಗ್ಯೂಲೇಷನ್ 2019ರ ಅಡಿ ಆರಂಭಿಸಿದ್ದು. ಈ ಯೋಜನೆಯು ಎಲ್ಲ ಗ್ರಾಹಕರಿಗೆ ಪೂರ್ಣ ಪ್ರಮಾಣದ ಮೊತ್ತವನ್ನು ನೀಡಿದ ಬಳಿಕ ನಿಲ್ಲಿಸಲಾಗುತ್ತದೆ ಎಂದು ಡಿಜಿಟ್ ಕಂಪನಿ ಹೇಳಿದೆ.
(ವರದಿ: ಸಂಧ್ಯಾ ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ