Covid-19: ನೀವು ಮನೆಯಿಂದ ಹೊರ ಹೋದ್ರೆ ಕೋವಿಡ್ ಸೋಂಕಿನ ಅಪಾಯದ ಬಗ್ಗೆ ಎಚ್ಚರವಿರಲಿ..!

ಯಾರು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೋ ಅವರಲ್ಲಿ ಸೋಂಕಿನ ಅಪಾಯ ಹೆಚ್ಚಾಗಿ ಕಂಡು ಬಂದಿದೆ ಎಂದು ಅಧ್ಯಯನವು ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ನಮ್ಮ ದೇಶದಲ್ಲಿ ಕೋವಿಡ್-19 (Covid-19) ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಭಾರಿ ಹೆಚ್ಚಳವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೆಚ್ಚಾಗಿ ಹೊಸ ಓಮೈಕ್ರಾನ್ ರೂಪಾಂತರದಿಂದ (Omicron mutation) ಈ ಕೋವಿಡ್ ಸೋಂಕಿನ ಪ್ರಕರಣಗಳು ಇನ್ನಷ್ಟು ಜಾಸ್ತಿ ಆಗುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮನೆಯಿಂದ ಅನಗತ್ಯವಾಗಿ (Unnecessarily) ಹೊರಗೆ ಸುತ್ತಾಡಲು ಹೋಗಬೇಡಿ, ಮಾಸ್ಕ್ ಹಾಕಿಕೊಳ್ಳಿ ಮತ್ತು ತುಂಬಾ ಜನರು ಸೇರಿರುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಹೋಗಬೇಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ (Public places) ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿರಿ.. ಹೀಗೆ ಎಚ್ಚರಿಕೆಯ ಕ್ರಮಗಳ ಬಗ್ಗೆ ಮೊದಲಿನಿಂದಲೂ ಕೇಳುತ್ತಿದ್ದೇವೆ. ಆದರೂ ಮಾಸ್ಕ್ ಹಾಕಿಕೊಳ್ಳದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ಓಡಾಡುವವರ ಸಂಖ್ಯೆ ಏನು ಇನ್ನೂ ಕಡಿಮೆಯಾಗಿಲ್ಲ.

ಅಪಾಯ ಹೆಚ್ಚು
ಆದರೆ ಈಗ ಈ ರೀತಿಯ ಅಸಡ್ಡೆ ಮನೋಭಾವನೆ ನಿಮ್ಮನ್ನು ಮತ್ತು ನಿಮ್ಮ ಜೊತೆಯಿರುವವರನ್ನು ಕೋವಿಡ್ ಅಪಾಯಕ್ಕೆ ಗುರಿ ಮಾಡಬಹುದು. ಹೌದು, ಈಗ ನೀವು ಮನೆಯಿಂದ ಹೊರಗೆ ಹೋಗಿ ಯಾವುದೆಲ್ಲವನ್ನೂ ಮಾಡಿದರೆ ನಿಮಗೆ ಕೋವಿಡ್ ಸೋಂಕು ತಗಲುವ ಅಪಾಯ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ಒಂದು ಅಧ್ಯಯನವೇ ಮಾಡಿದ್ದಾರೆ.

ನೀವು ಮನೆಯಿಂದ ಹೊರಕ್ಕೆ ಹೋದಾಗ ಕೋವಿಡ್ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯಕ್ಕೆ ಸಿಲುಕಿಸುವ ಚಟುವಟಿಕೆಗಳ ಬಗ್ಗೆ ಸಹ ನೀವು ಚೆನ್ನಾಗಿ ತಿಳಿದಿರುವುದು ತುಂಬಾನೇ ಮುಖ್ಯವಾಗುತ್ತದೆ. ಇವುಗಳನ್ನು ತಿಳಿದುಕೊಂಡು ಸ್ವಲ್ಪ ಎಚ್ಚರದಿಂದ ನಡೆದುಕೊಂಡರೆ ಸಾಕು ಈ ಕೋವಿಡ್ ಅಪಾಯದಿಂದ ನೀವು ಸುರಕ್ಷಿತರಾಗಬಹುದು.

ವೈರಸ್ ವಾಚ್ ಅಧ್ಯಯನ
ಇತ್ತೀಚೆಗೆ ನಡೆದಂತಹ ವೈರಸ್ ವಾಚ್ ಅಧ್ಯಯನದಲ್ಲಿ ನಡೆಸಲಾದ ಸಂಶೋಧನೆಯು ನಿಮ್ಮನ್ನು ಕೋವಿಡ್ ಸೋಂಕಿನ ಅಪಾಯಕ್ಕೆ ಒಡ್ಡುವ ಹೊರಾಂಗಣ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಿದೆ.

ಅವುಗಳಲ್ಲಿ ಮುಖ್ಯವಾಗಿ ನೀವು ಶಾಪಿಂಗ್ ಹೋಗುವುದು, ಕೆಲಸಕ್ಕೆಂದು ಕಚೇರಿಗೆ ಹೋಗುವುದು ಮತ್ತು ಸಾರ್ವಜನಿಕ ಸಾರಿಗೆ ಬಳಸುವುದರಿಂದ ಕೋವಿಡ್-19 ಪ್ರಸರಣಕ್ಕೆ ಹೆಚ್ಚು ಅವಕಾಶ ನೀಡಿದಂತೆ ಆಗುತ್ತದೆ ಎಂದು ಜನವರಿ 7 ರಂದು ಪ್ರಕಟವಾದ "ವೈರಸ್ ವಾಚ್ ಅಧ್ಯಯನ: ಮನೆಯೇತರ ಚಟುವಟಿಕೆಗಳಿಂದ ಕೋವಿಡ್ ಅಪಾಯ, 20 ಡಿಸೆಂಬರ್ 2021" ಎಂಬ ಶೀರ್ಷಿಕೆಯ ಅಧ್ಯಯನವು ಹೇಳಿದೆ.

ಇದನ್ನೂ ಓದಿ: Omicron ಆತಂಕದ ನಡುವೆ ಹೊಸ ಕೋವಿಡ್ ಸ್ಟ್ರೈನ್ ಪತ್ತೆ

ಶಾಪಿಂಗ್, ಹೊರ ಚಟಿವಟಿಕೆ
ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ, ಅನೇಕ ನಿರ್ಬಂಧಗಳು ಇದ್ದಾಗ ಜನರ ಕುಟುಂಬ ಚಟುವಟಿಕೆಗಳು ಮತ್ತು ಕಳೆದ ವರ್ಷದ ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಯಾವುದೇ ನಿರ್ಬಂಧಗಳಿಲ್ಲದ ಸಮಯದಲ್ಲಿ ಇವರ ಕುಟುಂಬ ಚಟುವಟಿಕೆಗಳು ಯಾವ ರೀತಿಯದ್ದಾಗಿದ್ದವು ಎಂಬ ವಿವರಗಳನ್ನು ಈ ಅಧ್ಯಯನವು ಗಣನೆಗೆ ತೆಗೆದುಕೊಂಡಿದೆ.

ಈ ಅಧ್ಯಯನದ ಪ್ರಕಾರ, ನಿರ್ಬಂಧದ ಹಂತ ಮತ್ತು ನಿರ್ಬಂಧರಹಿತ ಹಂತದಲ್ಲಿ, ಶಾಪಿಂಗ್ ಹೋಗುವುದರಿಂದ ಹೆಚ್ಚಿನ ಪ್ರಮಾಣದ ಸೋಂಕುಗಳಿಗೆ ಕಾರಣವಾಗಿದೆ ಮತ್ತು ಇದರ ನಂತರ ಸಾರ್ವಜನಿಕ ಸಾರಿಗೆಯ ಬಳಕೆ ಮತ್ತು ಕೆಲಸಕ್ಕೆಂದು ಕಚೇರಿಗೆ ಹೋದಾಗ ಕೋವಿಡ್ ಸೋಂಕು ಹರಡುವಿಕೆ ಇನ್ನೂ ಜಾಸ್ತಿಯಾಗಿದೆ ಎಂದು ಕಂಡುಕೊಂಡಿದೆ.

ಕ್ರೀಡಾ ಚಟುವಟಿಕೆ
ಅದರಲ್ಲೂ ಯಾರು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೋ ಅವರಲ್ಲಿ ಸೋಂಕಿನ ಅಪಾಯ ಹೆಚ್ಚಾಗಿ ಕಂಡು ಬಂದಿದೆ ಎಂದು ಅಧ್ಯಯನವು ಹೇಳಿದೆ.

ಅಧ್ಯಯನದ ಪ್ರಕಾರ ವಾರಕ್ಕೆ ಎರಡು ಬಾರಿ ಶಾಪಿಂಗ್ ಮಾಡಲು ತಮ್ಮ ಮನೆಗಳಿಂದ ಹೊರಗೆ ಹೋದ ಜನರು ಇತರರಿಗಿಂತ ಕೋವಿಡ್ ವೈರಸ್ ಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಹೇಳಿದೆ.

ಇದನ್ನೂ ಓದಿ: Omicron ನಂತರವೂ ಕೋವಿಡ್ ಇರಲಿದೆ, ಎಚ್ಚರಿಕೆ : ಡಾ. ರಾಜೀವ್ ಜಯದೇವನ್

ಮೇಲೆ ಉಲ್ಲೇಖಿಸಿದ ಚಟುವಟಿಕೆಗಳಿಗಿಂತ ಕಡಿಮೆ ಅಪಾಯವನ್ನು ಒಡ್ಡುವ ಚಟುವಟಿಕೆಗಳನ್ನು ಇಲ್ಲಿ ತಿಳಿಸಲಾಗಿದೆ. ಆದರೂ ಇವುಗಳ ಬಗ್ಗೆ ನೀವು ಎಚ್ಚರದಿಂದಿರುವುದು ಒಳ್ಳೆಯದು ಎಂದು ಅಧ್ಯಯನ ಹೇಳುತ್ತದೆ.

ರೆಸ್ಟೋರೆಂಟ್ ಗಳು ಅಥವಾ ಕೆಫೆಗಳಲ್ಲಿ ತಿನ್ನುವುದು, ಒಂದೇ ಕಾರಿನಲ್ಲಿ ತುಂಬಾ ಜನರು ಕುಳಿತುಕೊಂಡು ಪ್ರಯಾಣಿಸುವುದು, ಪಾರ್ಟಿಗಳಿಗೆ ಹೋಗುವುದು ಇವೆಲ್ಲವೂ ಸಹ ಕೋವಿಡ್ ಸೋಂಕಿನ ಅಪಾಯ ಹೆಚ್ಚು ಮಾಡಬಹುದು ಎಂದೂ ಅಧ್ಯಯನ ಹೇಳಿದೆ.
Published by:vanithasanjevani vanithasanjevani
First published: