ಕೇಂದ್ರದ ತಲೆ ಕೆಡಿಸಿರುವ ಈ ಮಹಾ ನಗರಗಳು; ಈ 20 ನಗರಗಳಲಿದ್ದಾರೆ ಶೇ.78ರಷ್ಟು ಕೊರೋನಾ ಪೀಡಿತರು

ಭಾರತದ 20 ಮಹಾ ನಗರಗಳಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬದ್, ದೆಹಲಿ, ಚೆನ್ನೈ ನಗರಗಳಲ್ಲೇ ಹೆಚ್ಚು ಕೊರೋನಾ ಪೀಡಿತರಿದ್ದಾರೆ.

news18-kannada
Updated:May 4, 2020, 12:21 PM IST
ಕೇಂದ್ರದ ತಲೆ ಕೆಡಿಸಿರುವ ಈ ಮಹಾ ನಗರಗಳು; ಈ 20 ನಗರಗಳಲಿದ್ದಾರೆ ಶೇ.78ರಷ್ಟು ಕೊರೋನಾ ಪೀಡಿತರು
ಸಾಂದರ್ಭಿಕ ಚಿತ್ರ
  • Share this:
ನವ ದೆಹಲಿ (ಮೇ 04); ಲಾಕ್‌ಡೌನ್‌ ನಡುವೆಯೂ ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಹಾವಳಿ ಹೆಚ್ಚಾಗುತ್ತಲೇ ಇದೆ. ಆದರೆ, ನಿರ್ದಿಷ್ಟವಾಗಿ ಕೆಲವು ಮಹಾ ನಗರಗಳಲ್ಲೇ ಕೊರೋನಾ ಹಾವಳಿ ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರದ ತಲೆ ನೋವಿಗೆ ಕಾರಣವಾಗಿದೆ.

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 40,000 ಗಡಿ ದಾಟಿದೆ. ಆದರೆ, ಈ ಪೈಕಿ ಶೇ.78 ರಷ್ಟು ಕೊರೋನಾ ಪೀಡಿತರು ದೇಶ ಮಹಾನಗರಗಳಲ್ಲೇ ವಾಸಿಸುತ್ತಿದ್ದಾರೆ ಮತ್ತು ಈ ಭಾಗದಲ್ಲಿ ವೈರಸ್‌ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ.

ಭಾರತದ 20 ಮಹಾ ನಗರಗಳಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬದ್, ದೆಹಲಿ, ಚೆನ್ನೈ ನಗರಗಳಲ್ಲೇ ಹೆಚ್ಚು ಕೊರೋನಾ ಪೀಡಿತರಿದ್ದಾರೆ. ಇದಲ್ಲದೆ 8 ಜಿಲ್ಲೆಗಳಲ್ಲಿ ಕಳೆದ 10 ದಿನಕ್ಕೆ ಸೋಂಕಿನ ಪ್ರಮಾಣ ದ್ವಿಗುಣಗೊಂಡಿದೆ.

ನಗರಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದ ಕೇಂದ್ರ ಸರ್ಕಾರ ಆತಂಕಗೊಂಡಿದ್ದು ನಿನ್ನೆ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ನಗರಗಳಲ್ಲಿ ಕೊರೋನಾ ನಿಯಂತ್ರಣ ಮಾಡುವ ಬಗ್ಗೆ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಭಾರತದಲ್ಲಿ ಕಳೆದ 48 ಗಂಟೆಯಲ್ಲಿ ದಾಖಲಾಯ್ತು 5,000 ಹೊಸ ಪ್ರಕರಣ ಮತ್ತು 83 ಸಾವು; ಲಾಕ್‌ಡೌನ್‌ 3.0 ವಿಸ್ತರಣೆ
First published: May 4, 2020, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading