Covid Treatment: ರೆಮಿಡಿಸಿವರ್​ ಅಲ್ಲ, ಈ ಮೂರು ಔಷಧ ಸೋಂಕಿತರ ಚಿಕಿತ್ಸೆಗೆ ರಾಮಬಾಣವಂತೆ

ಈ ಮೂರು ಔಷಧಗಳು ಸದ್ಯ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದ್ದು, ಇವು ಪರಿಣಾಮಕಾರಿ ಎಂಬ ಮಾತು ಕೇಳಿಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಮೇ. 19):  ದೇಶ ಈಗಾಗಲೇ ಕೋವಿಡ್ 19 ಎರಡನೇ ಅಲೆಯಿಂದ ತತ್ತರಿಸಿದೆ. ಪ್ರತಿನಿತ್ಯ ಸರಿಸಮಾರು 3.5 ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ಕೋವಿಡ್​ಗೆ ಸರಿಯಾದ ಮದ್ದಿಲ್ಲದ ಪರಿಣಾಮ ಇತರೆ ಔಷಧಗಳ ಮೂಲಕ ಸೋಂಕಿತರ ಚಿಕಿತ್ಸೆಗೆ ವೈದ್ಯರು ಹರಸಾಹಸ ನಡೆಸುತ್ತಿದ್ದಾರೆ. ಪ್ರಸ್ತುತ  ಆಂಟಿ ವೈರಲ್​ ಇಂಜೆಕ್ಷನ್​ ರೆಮಿಡಿಸಿವರ್​ ಅನ್ನು ಸೋಂಕಿತರ ಚಿಕಿತ್ಸೆಗೆ ಒಳಸಿಕೊಳ್ಳಲಾಗುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಮಂಡಳಿ ಈ ರೆಮಿಡಿಸಿವರ್​ ಔಷಧ ಕೂಡ ಸಾಕಷ್ಟು ಪರಿಣಾಮಕಾರಿಯಲ್ಲ. ಈ ಹಿನ್ನಲೆ ಇದನ್ನು ಚಿಕಿತ್ಸೆಯಿಂದ ಕೈ ಬಿಡಬೇಕು ಎಂದಿದೆ. ಇದರ ಬೆನ್ನಲ್ಲೆ ಈ ಮೂರು ಔಷಧಗಳು ಸದ್ಯ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದ್ದು, ಇವು ಪರಿಣಾಮಕಾರಿ ಎಂಬ ಮಾತು ಕೇಳಿಬಂದಿದೆ. ಹಾಗಾದರೆ ಯಾವ ಮೂರು ಔಷಧಿ ಈ ಸೋಂಕಿಗೆ ರಾಮಬಾಣವಾಗಿದೆ ಎಂಬ ಮಾಹಿತಿ ಇಲ್ಲಿದೆ. 

ಇನ್ನೂ ದೇಶದಾದ್ಯಂತ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿಗೆ ಟೊಸಿಲಿಜುಮಾಬ್ ಅತ್ಯುತ್ತಮ ಡ್ರಗ್ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದಕ್ಕಾಗಿ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ. ಈಗ ಇದನ್ನು ಪೂರೈಸುವುದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಟೊಸಿಲಿಜುಮಾಬ್ ಚುಚ್ಚು ಮದ್ದಿನ ಸಂಶ್ಲೇಷಿತ ಪ್ರೊಟೀನ್ ಆಗಿದ್ದು, ದೇಹದಲ್ಲಿನ ಇಂಟರ್ಲ್ಯೂಕಿನ್ 6 ಕ್ಕೆ ಸಂಬಂಧಿಸಿದೆ. ಊರಿಯುತವನ್ನು ನಿವಾರಿಸಿ ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ ಪ್ರೊಟೀನ್ ಐಎಲ್ 6 ದೇಹದ ಸಮಸ್ಯೆಯನ್ನು ಉಲ್ಬಣ ಮಾಡುತ್ತದೆ. ಸಂಧಿವಾತದಲ್ಲಿ ಜ್ವರ, ಕೀಲು ನೋವುಗಳನ್ನು ಉಂಟು ಮಾಡಿ ಕೀಲುಗಳ ನಾಶಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಸಮಸ್ಯೆಗೂ ಟೊಸಿಲಿಜುಮಾಬ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಏನಿದು ಟೊಸಿಲಿಜುಮಾಬ್?

ಆ್ಯಂಟಿವೈರಲ್ ಚುಚ್ಚು ಮದ್ದು ಇದಾಗಿದೆ. ಐಸಿಯುನಲ್ಲಿರುವ ಕೊರೊನಾ ರೋಗಿಗಳಲ್ಲಿ ಯಾವುದೇ ಪರಿವರ್ತನೆ ಕಾಣಲಿಲ್ಲವೆಂದಾದರೆ 24 ರಿಂದ 48 ಗಂಟೆಗಳ ಒಳಗೆ ಈ ಚುಚ್ಚುಮದ್ದನ್ನು ನೀಡಬೇಕು.

ಯಾವಾಗ ಈ ಇಂಜೆಕ್ಷನ್ ಬಳಸಬಹುದು?

ಟೊಸಿಲಿಜುಮಾಬ್ ಚುಚ್ಚುಮದ್ದನ್ನು ಊರಿಯೂತದ ಸಂದರ್ಭದಲ್ಲಿ, ಫಂಗಲ್ ಇನ್ಫೆಕ್ಷನ್, ಕ್ಷಯ ಮತ್ತು ಬ್ಯಾಕ್ಟೀರಿಯಾ ಸಮಸ್ಯೆ ಇರುವವರಿಗೆ ನೀಡಲಾಗುತ್ತದೆ.

ಎಷ್ಟು ಡೋಸ್ ನೀಡಲಾಗುತ್ತದೆ?

100 ಮಿಲಿ ಎನ್ಎಸ್​ನಲ್ಲಿ 4 ರಿಂದ 6 ಎಮ್ಜಿ/ಕೆಜಿ (60 ಕೆಜಿ ವಯಸ್ಕರಿಗೆ 400 ಮಿಗ್ರಾಂ) ಒಂದು ಗಂಟೆಯ ಲೆಕ್ಕಾಚಾರವಿರುತ್ತದೆ.

ಟೊಸಿಲಿಜುಮಾಬ್ ಹೇಗೆ ಕೆಲಸ ನಿರ್ವಹಿಸುತ್ತದೆ?

ಈ ಡ್ರಗ್ ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಇದರ ಬೆಲೆ ಎಷ್ಟು?

ಟೊಸಿಲಿಜುಮಾಬ್ ಚುಚ್ಚುಮದ್ದಿನ ಬೆಲೆ 40,600 ರೂ

ಇದನ್ನು ಓದಿ: ಕೋವಿಡ್​ ಚಿಕಿತ್ಸೆಯಲ್ಲಿ ರೆಮಿಡಿಸಿವರ್​ ಔಷಧ ಪರಿಣಾಮಕಾರಿಯಲ್ಲ

ಟೊಸಿಲಿಜುಮಾಬ್​ಗೆ ಪರ್ಯಾಯ ಚುಚ್ಚುಮದ್ದು ಇದೆಯೇ?

ಹೌದು. ಟೊಸಿಲಿಜುಮಾಬ್ ಚುಚ್ಚು ಮದ್ದಿಗೆ ಪರ್ಯಾಯವಾಗಿ ಇನ್ನಿತರ ಡ್ರಗ್​ಗಳನ್ನು ಬಳಸಬಹುದು. ಅದು ಹೀಗಿದೆ.

ಡೆಕ್ಸಮೆಥಾಸೊನ್

ತೀರಾ ಸಂಕಷ್ಟದಲ್ಲಿರುವ ಕೊರೊನಾ ರೋಗಿಗಳಿಗೆ ಡೆಕ್ಸಮೆಥಾಸೊನ್ ಡ್ರಗ್ ಬಳಸಲಾಗುತ್ತದೆ. ಡಬ್ಲ್ಯೂ ಎಚ್ ಒ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರ ಪ್ರಕಾರ ಇದು ಜೀವವನ್ನು ಉಳಿಸುವ ಡ್ರಗ್ ಆಗಿದೆ.

ರೆಮ್ ಡಿಸಿವರ್

ಕೊರೋನಾ ಎರಡನೇ ಅಲೆಯಲ್ಲಿ ಭಾರೀ ಡಿಮ್ಯಾಂಡ್ನಲ್ಲಿರುವ ರೆಮ್ ಡಿಸಿವಿಯರ್ ತುರ್ತು ಸಂಕಟದಲ್ಲಿರುವ ಕೋವಿಡ್ ರೋಗಿಗಳಿಗೆ ನೆರವಾಗುತ್ತದೆ.

ಸರಿಲುಮಾಬ್

ಈ ಡ್ರಗ್ ಆರ್ಥರೈಟೀಸ್ ಡ್ರಗ್ ಆಗಿದ್ದು ಇದನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದು ಪ್ರೊಟೀನ್ IL-6 ವಿರುದ್ಧ ವರ್ತಿಸುತ್ತದೆ. ಇದರಿಂದ ಕೊರೊನಾ ವೈರಸ್ ಗೆಲ್ಲಬಹುದು. ತೀವ್ರವಾದ ಕೊರೊನಾ ವೈರಸ್ ರೋಗಿಗಳ ದೇಹದಲ್ಲಿ ಸೈಟೊಕಿನ್ ಅಳವಡಿಸುವುದನ್ನು ನಿಲ್ಲಿಸುವ ಮೂಲಕ ಈ ಡ್ರಗ್ ಕೆಲಸ ನಿರ್ವಹಿಸುತ್ತದೆ.
ಈ ನಿಟ್ಟಿನಲ್ಲಿ ಪರ್ಯಾಯ ಔಷಧಿಗಳು ಇಂದು ಕೊರೊನಾವನ್ನು ಮಣಿಸುವಲ್ಲಿ ಅದ್ವಿತೀಯಾ ಪಾತ್ರವಹಿಸುತ್ತಿರುವುದು ಸುಳ್ಳಲ್ಲ.
First published: