ಕೊರೋನಾ ಶವಗಳಿಗೆ ಶುರುವಾಯ್ತು ಹೊಸ ಸಂಕಟ : ಶವಗಳನ್ನಿಡಲು ಶವಾಗಾರದಲ್ಲಿ ಸ್ಥಳಾವಕಾಶವೇ ಇಲ್ಲ ..!

ಬೆಂಗಳೂರಿನಲ್ಲಿ ಕೊರೋನಾ ಶವಗಳಿಗೆ ಶವಾಗಾರದ ಸಮಸ್ಯೆ ಎದುರಾಗಿದೆ. ಇದು ಕೊವಿಡ್ ಆಸ್ಪತ್ರೆಗಳ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ

news18-kannada
Updated:July 13, 2020, 3:20 PM IST
ಕೊರೋನಾ ಶವಗಳಿಗೆ ಶುರುವಾಯ್ತು ಹೊಸ ಸಂಕಟ : ಶವಗಳನ್ನಿಡಲು ಶವಾಗಾರದಲ್ಲಿ ಸ್ಥಳಾವಕಾಶವೇ ಇಲ್ಲ ..!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ.13): ಬೆಂಗಳೂರಿನ ಕೋವಿಡ್ ಆಸ್ಪತ್ರೆಗಳಿಗೆ ಹೊಸದೊಂದು ಸಮಸ್ಯೆ ಶುರುವಾಗಿದೆ. ಕೊರೋನಾದಿಂದ ಸಾವನ್ನಪ್ಪುತ್ತಿರುವ ಶವಗಳನ್ನು ಶವಾಗಾರದಲ್ಲಿಡಲು ಸ್ಥಳದ ಅಭಾವ ಸೃಷ್ಟಿಯಾಗಿದೆ. ಬೇರೆ ಸಮಸ್ಯೆಗಳಿಂದ ಸಾವನ್ನಪ್ಪಿದ ಶವಗಳನ್ನು ಇಡುವ ಚಿತಾಗಾರ ಗಳಲ್ಲಿಯೇ ಕೊರೋನಾದ ಶವಗಳನ್ನು ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಮಸ್ಯೆ ಮತ್ತಷ್ಟು ಉದ್ಬವವಾಗಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಶವಗಳಿಗೆ ಶವಾಗಾರದ ಸಮಸ್ಯೆ ಎದುರಾಗಿದೆ. ಇದಕ್ಕೆ ಕಾರಣ ಪ್ರತಿ ದಿನ ಹೆಚ್ಚುತ್ತಿರುವ ಸಾವಿನ ಸಂಖ್ಯೆ. ದಿನೇ ದಿನೆ ಕೊರೋನಾ ಸೋಂಕಿತರ ಸಾವುಗಳು ಹೆಚ್ಚುತ್ತಿರುವುದರಿಂದ ಅವುಗಳನ್ನು ಸ್ಟೋರೇಜ್ ಮಾಡಿಡಲು ಶವಾಗಾರದಲ್ಲಿ ಸ್ಥಳಾವಕಾಶ ಇಲ್ಲವಾಗಿದೆ. ಇದು ಕೊವಿಡ್ ಆಸ್ಪತ್ರೆಗಳ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಅನ್ಯ ಕಾರಣಗಳಿಂದ ಸಾವನ್ನಪ್ಪುವವರ ಸಂಖ್ಯೆ  ದಿನಕ್ಕೆ ನೂರರಷ್ಟಿದೆ.

ಆದರೆ ಕೊರೋನಾದಿಂದ ಸಾವನ್ನಪ್ಪುತ್ತಿರುವ ಶವಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದರಿಂದ ಕೊರೋನೇತರ ಶವಗಳಿಗೆ ಮೀಸಲಿಟ್ಟಂಥ ಶವಾಗಾರಗಳಲ್ಲಿಯೇ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡು ಇಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀವು ನಂಬಲಿಕ್ಕಿಲ್ಲ ಇದನ್ನು ಕೇಳಿ ಆಶ್ಚರ್ಯದ ಜೊತೆಗೆ ಬೇಸರವೂ ಆಗಬಹುದು.

ಇಂದು ಕೊರೋನಾ ಶವಗಳನ್ನು ಕೊಂಡೊಯ್ಯಲು ವಾರಸುದಾರರೇ ಬರುತ್ತಿಲ್ಲ. ಹಾಗಾಗಿ  ಬಹುತೇಕ ಶವಗಳು ಅನಾಥ ಶವಗಳಾಗಿ ಆಸ್ಪತ್ರೆಗಳಲ್ಲಿ ಕೊಳೆಯುವ ಪರಿಸ್ಥಿತಿಯಲ್ಲಿವೆ. ಇದಕ್ಕಿಂತ ಆತಂಕಕಾರಿಯಾದ ಮತ್ತೊಂದು ಸಂಗತಿ ಎಂದ್ರೆ, ಅಂತಹ ಶವಗಳನ್ನು ಇಡಲು ಪ್ರತ್ಯೇಕ ಶವಾಗಾರ ವ್ಯವಸ್ಥೆಯನ್ನು ಕೂಡ ನಮ್ಮ ಸರ್ಕಾರಗಳು ಮಾಡಿಲ್ಲ. ಹಾಗಾಗಿ ಆಸ್ಪತ್ರೆಗಳಲ್ಲಿ ಹಾಲಿ ಚಾಲ್ತಿಯಲ್ಲಿರುವಂಥ ಶವಾಗಾರಗಳಲ್ಲಿಯೇ ಕೊರೋನಾದಿಂದ  ಸಾವನ್ನಪ್ಪಿದ ಸೋಂಕಿತರ ಶವಗಳನ್ನು ಕೂಡ ಇರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆ ಗಂಭೀರವಾಗುತ್ತಿದ್ದರೂ ಇದರ ಬಗ್ಗೆ ಸರ್ಕಾರವಾಗಲಿ ,ಬಿಬಿಎಂಪಿಯಾಗಲಿ ತಲೆಕೆಡಿಸಿಕೊಂಡಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಶವಗಳನ್ನು ಸ್ಟೋರ್ ಮಾಡಿ ಇಡುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಈಗಿರುವ ಶವಾಗಾರಗಳಲ್ಲಿ ಬೇರೆ ಕಾರಣಗಳಿಗೆ ಸತ್ತವರ ಶವ ಇರಿಸಿಕೊಳ್ಳಲು ಜಾಗ ಇಲ್ಲ. ಅದರ ನಡುವೆ ಕೊರೋನಾ ಶವಗಳನ್ನು ಇರಿಸಿಕೊಳ್ಳುವಂತೆ ಒತ್ತಡ ಕೇಳಿ ಬರುತ್ತಿರುವುದು ಆಸ್ಪತ್ರೆಗಳನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಕೊರೋನಾ ಶವಗಳಿಗೆ ಆದ್ಯತೆ ಕೊಟ್ಟರೆ ಉಳಿದ ಶವಗಳನ್ನು ಏನ್ ಮಾಡೋದು ಎಂದು ಆಸ್ಪತ್ರೆಗಳು ಪ್ರಶ್ನಿಸಲಾರಂಭಿಸಿವೆ .

ಕೋವಿಡ್ ಆಸ್ಪತ್ರೆಗಳಲ್ಲಿ ಕೊರೋನಾದಿಂದ ಸತ್ತರೆ ಶವಗಳನ್ನು ಇಡಲು ಜಾಗವೇ ಇಲ್ಲವಂತೆ. ಕೊರೋನಾದಿಂದ ಸತ್ತ ಶವಗಳನ್ನು ಕೊಂಡೊಯ್ಯಲು ವಾರಸುದಾರರೇ ಹಿಂದೇಟು ಹಾಕುತ್ತಿರುವುದು ಇದಕ್ಕೆ ಮೂಲ ಕಾರಣ. ಹಾಗೆಯೇ ದಿನ ನಿತ್ಯ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ :  ಲಾಕ್ ಡೌನ್ ಗೆ ಮುಂಚೆಯೇ ಶರಣಬಸವೇಶ್ವರ ದೇವಸ್ಥಾನ ಬಂದ್ ; ಅಫಜಲಪುರ ಠಾಣೆ ಸೀಲ್ ಡೌನ್ಇನ್ನು ವಾರಸುದಾರರಿಲ್ಲದ ಅನಾಥ ಶವಗಳನ್ನು ಇಟ್ಟುಕೊಳ್ಳಲಾಗದೆ  ಆಸ್ಪತ್ರೆಗಳು ಒದ್ದಾಡುಂತಾಗಿದೆ. ರಾಜ್ಯದ 17 ಮೆಡಿಕಲ್ ಕಾಲೇಜ್​ಗಳು, 2 ಇಎಸ್ ಐ ಆಸ್ಪತ್ರೆಗಳಲ್ಲಿ ಇರುವುದು 150 ಶವಾಗಾರ ಚೇಂಬರ್ಸ್, ವಿಕ್ಟೋರಿಯಾ ಒಂದರಲ್ಲೇ 48 ಶವಾಗಾರ ಚೇಂಬರ್ಸ್ ಇದೆ. ಕೋವಿಡ್ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಷ್ಟು ಶವಾಗಾರಗಳಿಲ್ಲ. ಹಾಗೆಯೇ ಬೌರಿಂಗ್ ಆಸ್ಪತ್ರೆಯಲ್ಲಿ 165 ಕೋವಿಡ್ ಬೆಡ್ ಗಳಿದ್ರೆ, ಲಭ್ಯ ಇರುವುದು 6 ಶವಗಳನ್ನು ಇರಿಸಬಲ್ಲಷ್ಟು ಸಾಮರ್ಥ್ಯ ಮಾತ್ರ.

ಇನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ 110 ಕೊವಿಡ್ ಬೆಡ್ ಗಳಿದ್ರೆ ಇರುವ ಶವ ಸಂಗ್ರಹ ಸಾಮರ್ಥ್ಯ 4 ಮಾತ್ರ. ಇಂಥಾ ಪರಿಸ್ಥಿತಿಯಲ್ಲಿ ಶವಾಗಾರಗಳ ನಿರ್ಮಾಣಕ್ಕೆ ಒತ್ತು-ಆಧ್ಯತೆ ಕೊಡಬೇಕಿದ್ದ ಸರ್ಕಾರ ಯಾಕೋ ನಿಷ್ಕಾಳಜಿ ತೋರುತ್ತಿದೆ. ಸದ್ಯದ ಅವ್ಯವಸ್ಥೆಯನ್ನು ಸರಿಪಡಿಸದೇ ಹೋದಲ್ಲಿ ಕೊರೋನಾ ಶವಗಳ ಸ್ಥಿತಿ ತೀವ್ರ‌ ಶೋಚನೀಯ, ಚಿಂತಾಜನಕವಾಗುವದಂತು ಸತ್ಯ.
Published by: G Hareeshkumar
First published: July 13, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading