ಮುಸ್ಲಿಮರಿಂದ ಕೊರೋನಾ ಬಂತು ಅನ್ನೋದು ತಪ್ಪು; ನಮಗೂ ತಬ್ಲಿಘಿ ಜಮಾತ್​​ಗೂ ಸಂಬಂಧವೇ ಇಲ್ಲ - ಮೊಹಮ್ಮದ್​ ಯೂಸುಫ್​​

ಒಂದು ತಿಂಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ನ ಮಸೀದಿಯಲ್ಲಿ ನಡೆದ ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಏ.16): ದೇಶದಲ್ಲಿ ಮುಸ್ಲಿಮರಿಂದಲೇ ಕೊರೋನಾ ವೈರಸ್​ ಸೋಂಕು ಬಂತು ಅನ್ನೋದು ತಪ್ಪು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೊರೋನಾ ಸೋಂಕು ಬಂದವರ ಪೈಕಿ ಹಿಂದೂ, ಮುಸ್ಲಿಂ, ಕ್ರೈಸ್ತರು ಇದ್ದಾರೆ. ಹಾಗಾಗಿ ಕೇವಲ ಮುಸ್ಲಿಮರತ್ತ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದಿದ್ದಾರೆ.

    ದೆಹಲಿಯ ನಿಜಾಮುದ್ದೀನ್​​​​ನಲ್ಲಿ ನಡೆದ ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ. 2015ರಲ್ಲೇ ತಬ್ಲಿಘಿ ಜಮಾತ್​​ ಮತ್ತು ಸುಲ್ತಾನ್​​ ಷಾ ಬೇರೆಯಾಗಿದೆ. ಹಾಗಾಗಿ ನಮಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನೀವು ಎಲ್ಲದಕ್ಕೂ ಅಲ್ಪಸಂಖ್ಯಾತರೇ ಕಾರಣ ಎಂದು ಹೇಳುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ ಮೊಹಮ್ಮದ್​​ ಯೂಸುಫ್​​.

    ಕರ್ನಾಟಕದಲ್ಲಿ ದೆಹಲಿಯ ನಿಜಾಮುದ್ದೀನ್​​​​ ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಗೆ ಹೋದವರು ಕೇವಲ 10ರಿಂದ 12 ಮಂದಿ ಮಾತ್ರ. ಈ ಕಾರ್ಯಕ್ರಮಕ್ಕೆ ಎಲ್ಲಾ ಮುಸ್ಲಿಮರು ಹೋಗಿರಲಿಲ್ಲ. ಕೇವಲ ಬಾಗಲಕೋಟೆ, ಚಿಕ್ಕಬಳ್ಳಾಪುರ, ಬಿಜಾಪುರ ಕೆಲವು ಕಡೆಗಳಿಂದ ಹೋಗಿದ್ದರು ಎಂದರು. ಸರ್ಕಾರ 698 ಜನ ಹೋಗಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಯೂಸುಫ್​​​ ಈ ಅಂಕಿ ಅಂಶವೇ ತಪ್ಪು ಎಂದು ಹೇಳಿದರು.

    ಇದನ್ನೂ ಓದಿ: ಭಾರತದಲ್ಲಿ ಒಂದೇ ದಿನ 1,118 ಹೊಸ ಕೊರೋನಾ ಪ್ರಕರಣ; 12 ಸಾವಿರದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

    ದಕ್ಷಿಣ ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ಮಾ. 13ರಿಂದ 15ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಮೊದಲಿಗೆ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ  ಸಾವನ್ನಪ್ಪಿದ್ದರು. ಆದರೀಗ ಮತ್ತಷ್ಟು ಜನ ಈ ಧಾರ್ಮಿಕ ಸಭೆಗೆ ಹೋದವರು ಸಾವನ್ನಪ್ಪುತ್ತಿರುವ ಪರಿಣಾಮ ದೇಶದಲ್ಲಿ ಕೊರೋನಾ ಭೀತಿ ಇನ್ನಷ್ಟು ಹೆಚ್ಚಾಗಿದೆ.

    ಒಂದು ತಿಂಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ನ ಮಸೀದಿಯಲ್ಲಿ ನಡೆದ ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
    First published: