ಬೆಂಗಳೂರು (ಮೇ 19); "ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಸುವ ಹಾಗೂ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ನೀಡಿದ್ದರು. ಅವರು ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಆಕ್ಸಿಜನ್ ಸಂಗ್ರಹ ಇದ್ದು, ಕೊರತೆಯನ್ನು ನೀಗಿಸಲಾಗಿದೆ" ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆಯ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, " ಆಕ್ಸಿಜನ್ ಪುರೈಕೆಯ ಜವಾಬ್ದಾರಿಯನ್ನು ಸಿಎಂ ಕೊಟ್ಟಿದ್ದರು. ಇದೀಗ ಪ್ರತಿದಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಎಲ್ಲಾ ಜಿಲ್ಲೆಗಳಿಗೂ ಕೊರತೆಯಾಗದಂತೆ ಗಮನವಹಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಆರಂಭದಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇತ್ತು. ಆದರೆ, ಪ್ರಸ್ತುತ 1015 ಮೆ.ಟನ್ ನಮಗೆ ಅಲಾಟ್ ಆಗಿದೆ. ಕೇಂದ್ರಕ್ಕೆ ನಮ್ಮದು 1400 ಮೆ. ಟನ್ ಬೇಡಿಕೆ ಇದೆ. ಕೇಂದ್ರದ ಜೊತೆ ನಿರಂತರ ಮಾತುಕತೆ ನಡೆಸಿದ್ದೇನೆ. ನಮಗೆ 1700 ಮೆ. ಟನ್ ಪ್ರತಿದಿನ ಅವಶ್ಯಕತೆಯಿದೆ. ಇದು ಸಿಕ್ಕರೆ ನಮಗೆ ಸಂಪೂರ್ಣ ಸಮಸ್ಯೆ ಬಗೆಹರಿಯಲಿದೆ . ನಮ್ಮ ರಾಜ್ಯದಲ್ಲಿ 1100 ಟನ್ ಉತ್ಪಾದನೆಯಾಗುತ್ತಿದೆ. ಕೆಲವು ರಾಜ್ಯಗಳಿಗೆ ಇಲ್ಲಿಂದ ಸಪ್ಲೈ ಆಗ್ತಿದೆ. ಇದನ್ನ ನಮ್ಮಲ್ಲೇ ಬಳಸಿಕೊಳ್ಳಲು ಕೇಳಿದ್ದೇವೆ.
ರಿ ಅಲಾಕೇಟ್ ಮಾಡುವಂತೆ ಕೇಂದ್ರಕ್ಕೆ ತಿಳಿಸಿದ್ದೇವೆ. ತೆಲಂಗಾಣಕ್ಕೆ 145 ಮೆಟ್ರಿಕ್ ಟನ್ ಹೋಗುತ್ತಿದೆ. 40 ಮೆಟ್ರಿಕ್ ಟನ್ ಮಹಾರಾಷ್ಟ್ರಕ್ಕೆ ಹೋಗ್ತಿದೆ. ನಾವು ಬೇರೆ ಬೇರೆ ರಾಜ್ಯಗಳಿಂದ ತರಿಸುತ್ತಿದ್ದೇವೆ. ಟಾಟಾನಗರದಿಂದ ಮೇ.11 ರಂದು 120 ಮೆ. ಟನ್ ಬಂದಿದೆ. ಮೇ. 12 ರಂದು ಕಳಿಂಗದಿಂದ 120 ಮೆ. ಟನ್ ಬಂದಿದೆ. ಮೇ. 15 ರಂದು ಟಾಟಾನಗರದಿಂದ ಮತ್ತೆ 60 ಮೆ.ಟನ್ ಬಂದಿದೆ. ಮೇ.17 ರಂದು ಟಾಟಾನಗರದಿಂದ 120 ಮೆ.ಟನ್ ಬಂದಿದೆ. ಮೇ. 16 ರಂದು ಕಳಿಂಗದಿಂದ 160 ಮೆ. ಟನ್ ಹಾಗೂ 19 ರಂದು ಕಳಿಂಗದಿಂದಲೂ 120 ಮೆ.ಟನ್ ಆಕ್ಸಿಜನ್ ಬಂದಿದೆ" ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇದಲ್ಲದೆ, "ಕೆಜಿಎಫ್, ಯಾದಗಿರಿಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಕಿದ್ದೇವೆ. ಅಲ್ಲಿ 500 ಮೆ.ಟನ್ ಆಕ್ಸಿಜನ್ ಉತ್ಪಾದನೆಯಾಗಲಿದೆ. ಕಲಬುರಗಿಯಲ್ಲಿ 1000 ಎಲ್ಪಿಎಂ ಪ್ಲಾಂಡ್ ರೆಡಿಯಾಗುತ್ತಿದೆ. ವಿರಾಜಪೇಟೆಯಲ್ಲಿ ಎಲ್ಪಿಎಂ ಪ್ಲಾಂಟ್ ಸಿದ್ಧವಾಗ್ತಿದೆ. ಹೈವೇ ಅಥಾರಿಟಿಯವರು 20 ಪ್ಲಾಂಟ್ ಕೊಡ್ತಿದ್ದಾರೆ. ರಾಯಚೂರಿನಲ್ಲಿ ಆಕ್ಸಿಜನ್ ಪ್ಲಾಂಟ್ ರೆಡಿಯಾಗ್ತಿದೆ" ಹೀಗಾಗಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಶೀಘ್ರದಲ್ಲೇ ನೀಗಲಿದೆ" ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇದನ್ನೂ ಓದಿ: BS Yediyurappa: ಶ್ರಮಿಕ ವರ್ಗಕ್ಕೆ 1,250 ಕೋಟಿ ಗಾತ್ರದ ವಿಶೇಷ ಪ್ಯಾಕೇಜ್; ಸಿಎಂ ಯಡಿಯೂರಪ್ಪ ಘೋಷಣೆ
ಇದೇ ಸಂದರ್ಭದಲ್ಲಿ ಜಿಂದಾಲ್ನಲ್ಲಿ ಸಿದ್ದವಾಗುತ್ತಿರುವ 1000 ಬೆಡ್ ಕೋವಿಡ್ ಆಸ್ಪತ್ರೆ ಬಗ್ಗೆಯೂ ಮಾಹಿತಿ ನೀಡಿರುವ ಅವರು, "ಜಿಂದಾಲ್ ನಲ್ಲಿ 1000 ಬೆಡ್ ಆಸ್ಪತ್ರೆ ನಿರ್ಮಾಣವಾಗಿದೆ. ಇಂದು ಸಂಜೆ ಸಿಎಂ ಉದ್ಘಾಟನೆ ಮಾಡಲಿದ್ದಾರೆ. ನಾನೇ ಅಲ್ಲಿಗೆ ಭೇಟಿ ಕೊಟ್ಟು ನೋಡಿ ಬಂದಿದ್ದೇನೆ. 1000 ಆಕ್ಸಿಜನ್ ಬೆಡ್ ಅಲ್ಲಿ ಸಿಗಲಿದೆ. ಜಿಂದಾಲ್ ನವರೇ ಅದರ ನಿರ್ವಹಣೆ ಮಾಡುತ್ತಿದ್ದಾರೆ. ನಾವು ವೈದ್ಯರು, ಸಿಬ್ಬಂದಿಯನ್ನ ಅಲ್ಲಿ ನೇಮಿಸ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ