• Home
  • »
  • News
  • »
  • coronavirus-latest-news
  • »
  • ಕೋಲಾರದಲ್ಲಿ ತರಕಾರಿಗೆ ಚಿನ್ನದಂತ ಬೆಲೆ ಇದೆ ; ಆದರೆ ರೈತರ ಬಳಿ ಬೆಳೆಯೇ ಇಲ್ಲ

ಕೋಲಾರದಲ್ಲಿ ತರಕಾರಿಗೆ ಚಿನ್ನದಂತ ಬೆಲೆ ಇದೆ ; ಆದರೆ ರೈತರ ಬಳಿ ಬೆಳೆಯೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಷ್ಟದಿಂದ ಕಣ್ಣೀರು ತರಿಸಿದ್ದ ತರಕಾರಿಗಳೆ ಇಂದು ಭರ್ಜರಿ ಲಾಭವನ್ನು ತಂದು ಕೊಡುತ್ತಿದೆ

  • Share this:

ಕೋಲಾರ(ಜೂ.01): ಲಾಕ್ ಡೌನ್ ಮೊದಲೆರೆಡು ಹಂತದಲ್ಲಿ ದೇಶದಲ್ಲಿ ಪ್ರಮುಖವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅನ್ನದಾತರು ರಾಜ್ಯದ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಹಿನ್ನಲೆ ತೋಟದಲ್ಲಿ ತರಕಾರಿ ಬೆಳೆನಾಶ ಮಾಡುವುದು, ತಿಪ್ಪೆಗೆ ಬೆಳೆ ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ ರೈತರ ಹೊಲದಲ್ಲಿ ಬೆಳೆಯೇ ಇಲ್ಲ.

ಇದರ ಪರಿಣಾಮ ಕೆಲ ರೈತರಂತು ಕೃಷಿ ಚಟುವಟಿಕೆಯಿಂದಲೆ ದೂರ ಸರಿದಿದ್ದರು. ಲಾಕ್ ಡೌನ ವೇಳೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇರಲಿಲ್ಲ, ತರಕಾರಿಗೆ ಬೇಡಿಕೆಯು ಇರಲಿಲ್ಲ, ರಪ್ತು ಸಾಗಾಟವು ಸ್ತಗಿತ ವಾಗಿತ್ತು ಇದೆಲ್ಲಾ ಕಾರಣದಿಂದ ಬೆಳೆಗಳು ತೋಟದಲ್ಲೆ ಕೊಳೆಯುತ್ತಿತ್ತು. ಜಿಲ್ಲೆಯಲ್ಲಿ ಪ್ರಮುಖವಾಗಿ ನಷ್ಟಕ್ಕೆ ಸಿಲುಕಿದ ತರಕಾರಿ ರೈತರೆಂದರೆ ಎಲೆಕೋಸು, ಹೋಕೋಸು, ಬಜ್ಜಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಕಲರ್ ಕ್ಯಾಪ್ಸಿಕಂ, ಬಿಟಿ ಬದನೆಕಾಯಿ, ಕುಂಬಳಕಾಯಿ, ಕ್ಯಾರೆಟ್, ಬೀಟ್ರೋಟ್, ಮೂಲಂಗಿ, ಟೊಮೆಟೊ, ಹೂ ಬೆಳೆದಿದ್ದ ರೈತರಿಂದು ಸಾಲದ ಸುಳಿಯಲ್ಲಿ ಸಿಲುಕಿದ್ದರು,‌

ನಷ್ಟದಿಂದ ಕಣ್ಣೀರು ತರಿಸಿದ್ದ ತರಕಾರಿಗಳೆ ಇಂದು ಭರ್ಜರಿ ಲಾಭವನ್ನು ತಂದು ಕೊಡುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಏರಿಕೆಯಾದ ತರಕಾರಿ ಬೆಲೆಗಳು ಇಂತಿವೆ. ಕ್ಯಾಪ್ಸಿಕಂ 35 ರೂ , ಕ್ಯಾರೆಟ್ 30 ರೂ , ಬೀಟ್ರೋಟ್ 20 ರೂ , ಎಲೆಕೋಸು 6 ರೂ, ಹೂಕೋಸು ಒಂದಕ್ಕೆ 15 ರೂ , ಕಲರ್ ಕ್ಯಾಪ್ಸಿಕಂ 25 ರೂ, ಟೊಮೆಟೊ 15 ರೂ , ಬಜ್ಜಿ ಮೆಣಸಿನಕಾಯಿ 35 ರೂ ಹೀಗೆ ಬೆಲೆಗಳು ಏರಿಕೆಯಾಗಿದೆ. ಇದೇ ತರಕಾರಿಗಳು ಭಾಗಶಃ ಲಾಕ್ ಡೌನ್ ವೇಳೆ ಕೆಜಿಗೆ 10 ರೂಪಾಯಿಯನ್ನು ಮೀರಿಲ್ಲ. ಇದೀಗ ಎಂದಿನಂತೆ ತರಕಾರಿಗಳ ಬೆಲೆಯು ಹೆಚ್ಚಾಗಿ ರೈತರಿಗೆ ಎಂದಿನಂತೆ ಲಾಭ ತಂದುಕೊಡುತ್ತಿದೆ.

ಇದನ್ನೂ ಓದಿ :  ಪೊಲೀಸ್ ಮಹಾನಿರ್ದೇಶಕರ ಕಚೇರಿಗೂ ಎಂಟ್ರಿ ಕೊಟ್ಟ ಮಾಹಾಮಾರಿ ಕೊರೋನಾ

ಇದು ಮಂಡಿ ಮಾಲೀಕರು‌ ಕೊಳ್ಳುವ ಬೆಲೆಯಾಗಿದ್ದು ಚಿಲ್ಲರೆ ವ್ಯಾಪಾರದಲ್ಲಿ ಇನ್ನು 5 ರೂಪಾಯಿ ಹೆಚ್ಚಿಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ, ಮುಂದೆ ತರಕಾರಿ ಬೆಲೆ ಹೆಚ್ಚಾಗಬಹುದು ಎಂದು ತರಕಾರಿ ಮಂಡಿ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ,

ಒಟ್ಟಿನಲ್ಲಿ ಕೊರೊನಾ ಸುಳಿಯಲ್ಲಿ ಸಿಲುಕಿದ್ದ ರೈತರು ಬೆಲೆ ಸಿಗದೆ ಕಂಗಾಲಾಗಿದ್ದರು, ಇದೀಗ ತರಕಾರಿಗೆ ಉತ್ತಮ ಬೆಲೆ ಸಿಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

First published: