ಸಚಿವ ಶ್ರೀರಾಮುಲು ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಮೇವಿಲ್ಲದೆ ಮೂಕ ಪ್ರಾಣಿಗಳ ನರಳಾಟ

ನೂರಾರು ವರ್ಷಗಳ ಹಿತಿಹಾಸ ಇರುವ ಬುಡಕಟ್ಟು ಸಂಸ್ಕತಿಯ ದೇವರ ಎತ್ತುಗಳ ರಕ್ಷಣೆಗೆ ಬಾರದ  ಅಧಿಕಾರಿಗಳು, ಹಾಗೂ ಜಿಲ್ಲಾಡಳಿತದ ವಿರುದ್ದ ಸ್ಥಳಿಯರು ಹಿಡಿ ಶಾಪ ಹಾಕುತ್ತಿದ್ದಾರೆ

ಹಸುಗಳು

ಹಸುಗಳು

  • Share this:
ಚಿತ್ರದುರ್ಗ(ಜೂನ್. 01): ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀ ರಾಮುಲು ಅವರ ಸ್ವಕ್ಷೇತ್ರ ಮೊಳಕಾಲ್ಮೂರು ತಾಲೂಕಿನ ರಾಯಪುರ  ಮ್ಯಾಸರಹಟ್ಟಿಯ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳಿಗೆ ಮೇವಿಲ್ಲದೆ ಜೀವ ಬಿಡುತ್ತಿವೆ. ಚಿತ್ರದುರ್ಗ ಜಿಲ್ಲೆ ಅಂದ್ರೆ ಬರೀ ಕೋಟೆ ಬೆಟ್ಟ ಗುಡ್ಡಗಳು, ಜೋಗಿಮಟ್ಟಿ, ವಾಣಿ ವಿಲಾಸ ಸಾಗರ, ಚಂದ್ರವಳ್ಳಿಯಂತ ಐತಿಹಾಸಿಕ ಪ್ರವಾಸಿ ತಾಣಗಳನ್ನ ಅಷ್ಟೇ  ಹೊಂದಿಲ್ಲ. ಮೇಲಾಗಿ ಬುಡಕಟ್ಟು ಸಂಸ್ಕೃತಿಯ ವಿಭಿನ್ನ ಆಚರಣೆಗಳನ್ನ ಆಚರಿಸುವ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಜಿಲ್ಲೆಯೂ ಹೌದು. ಜಿಲ್ಲೆಯಲ್ಲಿ ತಾತ ಮುತ್ತಾತನ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಗಳಾದ  ಮುಳ್ಳಿನ ಪವಾಡ, ಡಿಚ್ಚಿ ಹಬ್ಬ, ಹೊರ ಬೀಡುಗಳಂತ ಅನೇಕ ದೈವೀಯ ಆಚರಣೆಗಳನ್ನ ಆಚರಿಸುತ್ತಿದ್ದಾರೆ.

ಈ ಎಲ್ಲಾ ಆಚರಣೆಗಳು ಒಂದೊಂದು ಸಮುದಾಯದ ಮನೆ ದೇವರುಗಳ ವೈಶಿಷ್ಟತೆಯಿಂದ ಕೂಡಿರುತ್ತವೆ. ಹಾಗಾಗಿ ಜಿಲ್ಲೆಯಲ್ಲಿ ಇರುವ ಮ್ಯಾಸ ನಾಯಕ ಬುಡಕಟ್ಟು ಸಂಪ್ರದಾಯದಂತೆ ನೂರಾರು ವರ್ಷಗಳಿಂದ  ಶ್ರೀಶೈಲ ಮಲ್ಲಿಕಾರ್ಜುನ ಸ್ಚಾಮಿಯನ್ನ ಆರಾಧಿಸಿ ಸೇವೆಯನ್ನೂ ಮಾಡಲಾಗುತ್ತಿದೆ. ಈ ಸಮುದಾಯವೂ ಮಲ್ಲಿ ಕಾರ್ಜುನ ಸ್ವಾಮಿಯ ಹೆಸರಲ್ಲಿ ಹರಕೆ ಕಟ್ಟಿ  ಆ ಹರಕೆಯಂತೆ ಒಂದೊಂದು ಹಸು, ಹೊರಿ ಕರುಗಳನ್ನ ಬಿಡುವುದು ಇಲ್ಲಿಯ ಸಂಪ್ರದಾಯ. ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಮ್ಯಾಸರ ಹಟ್ಟಿಯಲ್ಲಿ ಪುರಾತನ ಕಾಲದಿಂದಲೂ ಹರಕೆ ತೀರಿಸಲು ಸುತ್ತ ಮುತ್ತಲ ಹಳ್ಳಿಗಳ ಜನರು ಹಸುವಿನ ಕರುಗಳನ್ನ ಬಿಡುತ್ತಾ ಬಂದಿದ್ದಾರೆ. ಅವುಗಳನ್ನ ಸಾಕಿ ಸಲಹಲು ಅದರದೇ ಸಮುದಾಯದ ಜನರು ಕಿಲಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ವರ್ಷದಿಂದ ವರ್ಷಕ್ಕೆ ಎತ್ತುಗಳು ಸಂಖ್ಯೆ ಎಚ್ಚುತ್ತಿದ್ದು ಮೇವಿನ ಅಭಾವವೂ ಹೆಚ್ಚುತ್ತಿದೆ. ಅಲ್ಲದೆ ಅವುಗಳನ್ನ  ಗುಡ್ಡಗಾಡು,ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ಮೇವಿಲ್ಲದಂತಾಗಿದೆ. ಕಾರಣ ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ಮಳೆಯಿಲ್ಲದೇ  ಇರುವುದು. ಹೀಗೆ ಸಾಕಿ ಸಲಹಿರುವ ದೇವರ ಎತ್ತುಗಳು ಇಂದು ಮೇವು, ಸಮರ್ಪಕ ನೀರೂ ಇಲ್ಲದೆ ಪರದಾಡಿ ನರಳುತ್ತಿವೆ. ಅಲ್ಲದೆ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕೈದು ಎತ್ತುಗಳು ಸತ್ತಿವೆ ಎನ್ನಲಾಗಿದೆ. ಅಲ್ಲದೇ ಕಳೆದ ವಾದಲ್ಲಿ ಒಂದು ರಾಸು ಸಾವನ್ನಪ್ಪಿದೆ.

ಕಳೆದ ಎರಡು ತಿಂಗಳುಗಳಿಂದ ಲಾಕ್ ಡೌನ್ ಅಡ್ಡಿಯಿಂದ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಅಷ್ಟೇ ಅಲ್ಲದೇ ಈ ಕುರಿತು ಸಚಿವ ಶ್ರೀರಾಮುಲು ಅವರ ಗಮನಕ್ಕೂ ತರಲಾಗಿದೆ. ಆದರೆ, ಈ ವರೆಗೂ ದೇವರ ಎತ್ತುಗಳು ಬದುಕಿ ಉಳಿಯಲು ಜಿಲ್ಲಾಡಳಿತ ಹಾಗೂ ಸಚಿವರು ತಲೆ ಕೆಡಿಸಿಕೊಂಡಿಲ್ಲ. ಆದ್ದರಿಂದ ದೇವರ ಎತ್ತುಗಳಿಗೆ  ಸಮರ್ಪಕ ಹುಲ್ಲು ಸಿಗದೇ ಹಸಿವಿನಿಂದ ಪರದಾಡುತ್ತಿವೆ.

ಈ ಮೂಕ ಪ್ರಾಣಿಗಳ ರೋಧನೆಯನ್ನ ಪ್ರತೀ ದಿನ  ಕಣ್ಣಾರೆ ನೊಡುತ್ತಿರುವ ಸ್ಥಳಿಯರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ದೇವರ ಎತ್ತುಗಳ ಸಮಸ್ಯೆ ಬಗೆಹರಿಸಿ, ಜಾನುವಾರುಗಳಿ ಸಮರ್ಪಕ ಮೇವು ಕೊಡಿ ಅಂತ ಸಾಕಷ್ಟು ಭಾರಿ ಮನವಿ ಪತ್ರ ಸಲ್ಲಿಸಿ ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ಆದರೆ, ಕಣ್ಣು ಕಿವಿ ಇಲ್ಲದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇವರ ಮನವಿಗೆ ಸ್ಪಂದಿಸದೇ ಕ್ಯಾರೇ ಅಂತ ಕೂಡ ಎಂದಿಲ್ಲ.

ಇದನ್ನೂ ಓದಿ : ಪೊಲೀಸ್ ಮಹಾನಿರ್ದೇಶಕರ ಕಚೇರಿಗೂ ಎಂಟ್ರಿ ಕೊಟ್ಟ ಮಾಹಾಮಾರಿ ಕೊರೋನಾ

ನೂರಾರು ವರ್ಷಗಳ ಹಿತಿಹಾಸ ಇರುವ ಬುಡಕಟ್ಟು ಸಂಸ್ಕತಿಯ ದೇವರ ಎತ್ತುಗಳ ರಕ್ಷಣೆಗೆ ಬಾರದ  ಅಧಿಕಾರಿಗಳು, ಹಾಗೂ ಜಿಲ್ಲಾಡಳಿತದ ವಿರುದ್ದ ಸ್ಥಳಿಯರು ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಈ ಸ್ವಂತ ಕ್ಷೇತ್ರದ ಈ ಸಮಸ್ಯೆಯನ್ನ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಬಗೆಹರಿಸುತ್ತಾರಾ ಎಂಬುದನ್ನ  ಕಾದು ನೋಡಬೇಕಿದೆ.
First published: