ನವದೆಹಲಿ: ಆ ರೈಲು ಹೊರಟಿದ್ದು ಉತ್ತರಪ್ರದೇಶದ ಗೋರಖ್ ಪುರಕ್ಕೆ. ಆದರದು ತಲುಪಿದ್ದು ಮಾತ್ರ ಒರಿಸ್ಸಾದ ರೂರ್ಕೆಲಾಗೆ. ಇದು ವಿಶೇಷ ಶ್ರಮಿಕ್ ರೈಲಿನ ವಿಚಿತ್ರ ಕತೆ.
ಮೇ 21ರಂದು ಮುಂಬೈನ ವಾಸೈ ನಿಲ್ದಾಣದಿಂದ ಹೊರಟಿದ್ದ ವಿಶೇಷ ಶ್ರಮಿಕ್ ರೈಲು ಉತ್ತರಪ್ರದೇಶದ ಗೋರಖ್ ಪುರಕ್ಕೆ ಹೋಗಬೇಕಿತ್ತು. ರೈಲಿನ ತುಂಬಾ ಟೆಕೆಟ್ ಖಾತರಿಯಾಗಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿದ್ದರು. ಮಾರ್ಗಮಧ್ಯೆಯೇ ಪಥ ಬಲದಲಿಸಿದ ರೈಲು ಕಡೆಗೆ ಒರಿಸ್ಸಾದ ರೂರ್ಕೆಲಾ ತಲುಪಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು, 'ಇದರಲ್ಲಿ ರೈಲು ಚಾಲಕನ ತಪ್ಪಿಲ್ಲ. ರೈಲಿನ ಮಾರ್ಗ ಬದಲಾವಣೆ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಆ ನಿರ್ಧಾರದಂತೆ ಚಾಲಕನಿಗೆ ಪಥ ಬದಲಿಸಿ ಚಲಿಸಲು ಮಾರ್ಗದರ್ಶನ ನೀಡಲಾಗಿದೆ,' ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ ಯಾವೊಬ್ಬ ಪ್ರಯಾಣಿಕರಿಗೂ ಮಾರ್ಗ ಬದಲಾವಣೆಯ ಮಾಹಿತಿ ಕೊಟ್ಟಿರಲಿಲ್ಲ. ಆದುದರಿಂದ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಈಗ ಒರಿಸ್ಸಾದಲ್ಲಿ ಸಿಲುಕಿಕೊಂಡಿದ್ದಾರೆ. ಮತ್ತೆ ಇನ್ನೊಂದು ರೈಲು ವ್ಯವಸ್ಥೆ ಮಾಡುವವರೆಗೆ ಉತ್ತರ ಪ್ರದೇಶದ ವಲಸೆ ಕಾರ್ಮಿಕರ ವನವಾಸ ಪಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಎಸಗಿದ ಪ್ರಮಾದದಿಂದ ಮೊದಲೇ ನೊಂದಿದ್ದ ಬಡ ವಲಸೆ ಕಾರ್ಮಿಕರು ಮತ್ತೆ ನರಳುವಂತಾಗಿದೆ.
ಇದನ್ನು ಓದಿ: ಕೊರೋನಾ ಹೋರಾಟಕ್ಕೆ ಬ್ರಿಟನ್ ವಿಜ್ಞಾನಿಗಳಿಂದ 50:30 ಸೂತ್ರ – ಏನಿದು ಈ ಐವತ್ತು ಮೂವತ್ತು ಫಾರ್ಮುಲಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ