Covid Vaccine: ಒತ್ತಾಯಪೂರ್ವಕವಾಗಿ ಲಸಿಕೆ ನೀಡುವಂತಿಲ್ಲ! ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಸುಪ್ರೀಂ ಮಹತ್ವದ ತೀರ್ಪು

"ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ" ಅಂತ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. "ರಾಜ್ಯ ಅಥವಾ ಕೇಂದ್ರ ಸರ್ಕಾರ, ವಿವಿಧ ಸಂಸ್ಥೆಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ" ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್‌

ಸುಪ್ರೀಂಕೋರ್ಟ್‌

  • Share this:
ನವದೆಹಲಿ: ಭಾರತದಲ್ಲಿ (India) ಕೊರೋನಾ ಕೇಸ್‌ (Corona Case) ಹೆಚ್ಚಾಗುತ್ತಿದೆ. ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ (State) ದಿನ ದಿನಕ್ಕೂ ಕೋವಿಡ್ (Covid) ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೆ ಇದೆ. ಕೋವಿಡ್ ವಿರುದ್ಧ ಹೋರಾಡುವ ಲಸಿಕೆಯನ್ನು (Vaccine) ಹಾಕಿಸಿಕೊಳ್ಳಿ ಅಂತ ಸರ್ಕಾರ (Government) ಮನವಿ ಮಾಡುತ್ತಿದೆ. ಕೆಲವೆಡೆ 2 ಡೋಸ್ (2 dose) ಪಡೆದ ಬಳಿಕವೂ ಬೂಸ್ಟರ್ ಡೋಸ್‌ಗೂ (Booster Dose) ಸರ್ಕಾರ ಮಹತ್ವ ನೀಡಿದೆ. ಈ ನಡುವೆಯೇ ಕೋವಿಡ್ ಲಸಿಕೆ ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪೊಂದನ್ನು (Judgment) ನೀಡಿದೆ. “ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಯಾರಿಗೂ ಒತ್ತಾಯಪೂರ್ವಕವಾಗಿ (Forcefully) ಕೊಡುವಂತಿಲ್ಲ” ಅಂತ ಸುಪ್ರೀಂ ಕೋರ್ಟ್ ನ್ಯಾಯಪೀಠ ಮಹತ್ವದ ಆದೇಶ (Order) ನೀಡಿದೆ.

 “ಒತ್ತಾಯಪೂರ್ವಕವಾಗಿ ಲಸಿಕೆ ಹಾಕುವಂತಿಲ್ಲ”

ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ ಅಂತ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಸರ್ಕಾರದ ಕೋವಿಡ್​-19 ಲಸಿಕೆ ನೀತಿ ಅನಿಯಂತ್ರಿತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೋವಿಡ್ ಲಸಿಕೆ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಇಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವೈ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ತುಷಾರ್ ಮೆಹ್ತಾ ವಾದ

ಕೋವಿಡ್ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ಮತ್ತು ಪ್ರತಿಕೂಲ ಪರಿಣಾಮಗಳ ಡೇಟಾವನ್ನು ಕೋರಿ ಮತ್ತು ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿದ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರಶ್ನಿಸಿ ನ್ಯಾಷನಲ್​ ಟೆಕ್ನಿಕಲ್​ ಅಡ್ವೈಸರಿ ಗ್ರೂಪ್​ ಆನ್​ ಇಮ್ಯುನೈಸೇಶನ್​ನ ಮಾಜಿ ಸದಸ್ಯ ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿತು. ಪುಲಿಯೆಲ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸಿದರು.

 ಇದನ್ನೂ ಓದಿ: Covid Vaccine: ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ, ಆದ್ರೆ ಪಕ್ಕದವನಿಗೆ ಇನ್ನೂ ವ್ಯಾಕ್ಸಿನೇಷನ್ ಆಗಿಲ್ಲ; ಹಾಗಿದ್ರೆ ನಿಮಗೇ ಅಪಾಯ!

“ಲಸಿಕೆ ಹಾಕಿಸಿಕೊಳ್ಳದವರ ಮೇಲೆ ನಿರ್ಬಂಧ ಬೇಡ”

ರಾಜ್ಯ ಅಥವಾ ಕೇಂದ್ರ ಸರ್ಕಾರ, ವಿವಿಧ ಸಂಸ್ಥೆಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. ಕೋವಿಡ್​ ಪಾಸಿಟಿವ್​ ಸಂಖ್ಯೆ ಕಡಿಮೆ ಇರುವವರೆಗೆ ರಾಜ್ಯ ಸರ್ಕಾರಗಳು ಅಂತಹ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿತು. ದೈಹಿಕ ಸ್ವಾತಂತ್ರ್ಯ  ಸಾಂವಿಧಾನಿಕ ಹಕ್ಕು. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತಪಡಿಸಲು ಸಾಧ್ಯವಿಲ್ಲ ಅಂತ ಕೋರ್ಟ್ ಹೇಳಿದೆ. ಕೋವಿಡ್ ವ್ಯಾಕ್ಸಿನೇಷನ್‌ನ ಪ್ರತಿಕೂಲ ಘಟನೆಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆಯೂ ಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿದೆ.

ದಾಖಲೆಗಳನ್ನು ನೀಡದ ಸರ್ಕಾರ

ಲಸಿಕೆ ಹಾಕಿಸಿಕೊಂಡ ಜನರಿಗಿಂತ ಲಸಿಕೆ ಹಾಕಿಸಿಕೊಳ್ಳದ ಜನರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದಿರುವ ಕೋರ್ಟ್, ಲಸಿಕೆ ಹಾಕಿಸಿಕೊಳ್ಳದ ಜನರನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಬಾರದು ಎಂದೂ ಹೇಳಿದೆ.

ಇದನ್ನೂ ಓದಿ: Booster Dose: ಕೋವಿಡ್ 4ನೇ ಅಲೆ ಆತಂಕದ ಮಧ್ಯೆ ಮತ್ತೊಂದು ಶಾಕ್, ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಬೂಸ್ಟರ್ ಡೋಸ್!

ಕೋರ್ಟ್‌ಗೆ ಅಂಕಿಅಂಶಗಳನ್ನು ನೀಡಿದ ಸರ್ಕಾರ

ವಿಚಾರಣೆಯ ಸಂದರ್ಭದಲ್ಲಿ, ಮಾರ್ಚ್ 13ರ ವೇಳೆಗೆ 180 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಪ್ರತಿಕೂಲ ಘಟನೆಗಳು ಮಾರ್ಚ್ 12ರ ವೇಳೆಗೆ 77,314 ಆಗಿದ್ದು, ಒಟ್ಟು ಲಸಿಕೆ ಪಡೆದವರ ಸಂಖ್ಯೆಯ ಶೇ 0.004 ಆಗಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
Published by:Annappa Achari
First published: