HOME » NEWS » Coronavirus-latest-news » THE STATE GOVERNMENT THAT READY TO OPENED MUZARAI TEMPLES MAK

ಮುಜರಾಯಿ ದೇವಾಲಯಗಳನ್ನೂ ತೆರೆಯಲು ಮುಂದಾದ ಸರ್ಕಾರ; ನ್ಯೂಸ್‌18ಗೆ ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಸ್ಥಾನಗಳನ್ನು ತೆರೆಯಲಾಗುವುದು. ಆದರೆ, ದೇವಾಲಯದ ಒಳಗೆ ನೂಕು ನುಗ್ಗಲಿಗೆ ಅವಕಾಶ ಇಲ್ಲ. ಭಕ್ತರು ಸರಥಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

news18-kannada
Updated:May 5, 2020, 12:48 PM IST
ಮುಜರಾಯಿ ದೇವಾಲಯಗಳನ್ನೂ ತೆರೆಯಲು ಮುಂದಾದ ಸರ್ಕಾರ; ನ್ಯೂಸ್‌18ಗೆ ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ
ಸಚಿವ ಕೋಟಾ ಶ್ರೀನಿವಾಸ ಪೂಜಾರಿ.
  • Share this:
ಬೆಂಗಳೂರು (ಮೇ 05); ರಾಜ್ಯದಲ್ಲಿ ಶೀಘ್ರದಲ್ಲೇ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳು ತೆರೆಯಲಿವೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡೇ ದೇವರ ದರ್ಶನ ಪಡೆಯಬೇಕು ಎಂದು ಮುಜಾರಾಯಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ನ್ಯೂಸ್‌ 18 ಗೆ ಮಾಹಿತಿ ನೀಡಿದ್ದಾರೆ.   

ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಇದ್ದಾಗ್ಯೂ ರಾಜ್ಯದಲ್ಲಿ ಕೆಲವು ವಲಯಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಮುಕ್ತ ಓಡಾಟ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ನಿನ್ನೆಯಿಂದ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ.

ಅದರಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಸ್ಥಾನಗಳನ್ನು ತೆರೆಯಲಾಗುವುದು. ಆದರೆ, ದೇವಾಲಯದ ಒಳಗೆ ನೂಕು ನುಗ್ಗಲಿಗೆ ಅವಕಾಶ ಇಲ್ಲ. ಭಕ್ತರು ಸರಥಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು. ಆರಂಭದಲ್ಲಿ ಮುಜುರಾಯಿ ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳನ್ನು ತೆರೆಯಲಾಗುವುದು ನಂತರ ಇತರೆ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ವಿಚಾರದಲ್ಲೂ ಕಾಂಗ್ರೆಸ್‌ನವರಿಗೆ ರಾಜಕೀಯವೇ ಮುಖ್ಯವಾಗಿದೆ; ಸಚಿವ ಸುಧಾಕರ್‌ ಕಿಡಿ
First published: May 5, 2020, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories