• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ 2ನೇ ಅಲೆ ಇನ್ನೂ ಮುಗಿದಿಲ್ಲ, ಈಗಲೇ ಸಂಪೂರ್ಣ ಸಡಿಲಿಕೆ ಬೇಡ ಎಂದ ನೀತಿ ಆಯೋಗದ ಸದಸ್ಯ ವಿಕೆ ಪಾಲ್

ಕೊರೋನಾ 2ನೇ ಅಲೆ ಇನ್ನೂ ಮುಗಿದಿಲ್ಲ, ಈಗಲೇ ಸಂಪೂರ್ಣ ಸಡಿಲಿಕೆ ಬೇಡ ಎಂದ ನೀತಿ ಆಯೋಗದ ಸದಸ್ಯ ವಿಕೆ ಪಾಲ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಎರಡು ತಿಂಗಳ ಹಿಂದೆ ಹಲವು ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಇತ್ತು. ಕೊರೋನಾ ನಿಯಂತ್ರಣಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ಲಾಕ್​ಡೌನ್​ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದ್ದವು.

  • Share this:

ನವದೆಹಲಿ: ಕೊರೋನಾ ಎರಡನೇ ಅಲೆ ಇನ್ನು ಮುಗಿದಿಲ್ಲ. ಇಡೀ ದೇಶ ಕೊರೋನಾಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ ಎಂದು ನೀತಿ ಆಯೋಗದ ಸದಸ್ಯರಾದ ಡಾ. ವಿಕೆ ಪಾಲ್ ಅವರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಸಚಿವಾಲಯದಲ್ಲಿ ಮಾತನಾಡಿದ ವಿಕೆ ಪಾಲ್ ಅವರು, ಕೋವಿಡ್ ನಿಯಂತ್ರಣ ಸಂಬಂಧ ಆಯಾ ರಾಜ್ಯಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸುವಂತೆ ಮನವಿ ಮಾಡಿದರು.


ಹಲವು ರಾಜ್ಯಗಳು ಕೊರೋನಾ ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೇರಲಾಗಿದ್ದ ಲಾಕ್​ಡೌನ್​ ಅನ್ನು ಸಡಿಲಗೊಳಿಸಿ ಅನ್​ಲಾಕ್ ಪ್ರಕ್ರಿಯೆ ಆರಂಭಿಸುತ್ತಿರುವ ಸಮಯದಲ್ಲಿ ವಿಕೆ ಪಾಲ್ ಅವರು ಈ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಮೊದಲನೇ ಅಲೆಯ ಸಂದರ್ಭದಲ್ಲಿ ಲಾಕ್​ಡೌನ್​ ಸಡಿಲಕೆ ಮಾಡಿದ ಬಳಿಕ ಎರಡನೆ ಅಲೆ ಮೊದಲನೆಯದಕ್ಕಿಂತ ಹೆಚ್ಚು ಮಾರಕವೆಂಬುದನ್ನು ಸಾಬೀತು ಮಾಡಿದೆ.


ಮೊದಲನೆ ಅಲೆಯ ಸಂದರ್ಭದಲ್ಲಿ ಭಾರತ ದೇಶವ್ಯಾಪಿ ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದ ಹೊರಬಂದಾಗ ಹಲವು ಪಾಠಗಳನ್ನು ಕಲಿತಿದ್ದು, ಇದು ಆತ್ಮವಿಶ್ವಾಸಕ್ಕೆ ಕಾರಣವಾಯಿತು ಮತ್ತು ಇದೀಗ ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಎರಡನೆ ಅಲೆ ಸಂಪೂರ್ಣ ಹತೋಟಿಗೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ನಿರ್ಬಂಧ ಹಾಗೂ ಸಡಿಲಿಕೆ ಕ್ರಮ ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.


ಇದನ್ನು ಓದಿ: ಕೊರೋನಾ ಮೂರನೇ ಅಲೆಗೂ ಮೊದಲೇ ಮಕ್ಕಳಿಗೆ MIS-C ಕಂಟಕ: ಹೊಸ ಕೊರೋನಾ ಲಕ್ಷಣದಿಂದ ಹೆಚ್ಚಿದ ಆತಂಕ!

ಉನ್ನತ ಮಟ್ಟದ ನಿರ್ಬಂಧಗಳನ್ನು ಅಗತ್ಯವಿರುವ ಜಿಲ್ಲೆಗಳನ್ನು ಗುರುತಿಸಲು ಮಾರ್ಗದರ್ಶಿ ಸೂತ್ರಗಳು’ ಎಂದು ಕರೆಯಲ್ಪಡುವ ಮಾರ್ಗಸೂಚಿಗಳು ಹೀಗಿದೆ.




  • ಕಳೆದ ವಾರ ಅತಿಹೆಚ್ಚು ಪಾಸಿಟಿವಿಟಿ ಪ್ರಕರಣ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸುವುದು (ಶೇ. 10ಕ್ಕಿಂತ ಹೆಚ್ಚು)

  • ಲಭ್ಯವಿರುವ ಹಾಸಿಗೆ (ಆಕ್ಸಿಜನ್ ಮತ್ತು ಐಸಿಯು ಬೆಡ್ಸ್​)ಗಳ ಸೌಕರ್ಯದ ಬಗ್ಗೆ ವಿಶ್ಲೇಷಣೆ ಮಾಡುವುದು.

  • ಆಯಾ ವಾರದಲ್ಲಿ ಹೆಚ್ಚಿನ ಕೇಸ್ ಪಾಸಿಟಿವಿಟಿ ಅಥವಾ ಹೆಚ್ಚಿನ ಬೆಡ್ ಆಕ್ಯುಪೆನ್ಸಿ (ಆಕ್ಸಿಜನ್ ಮತ್ತು ಐಸಿಯು ಹಾಸಿಗೆಗಳು) ಹೊಂದಿರುವ ಜಿಲ್ಲೆಗಳಲ್ಲಿ ತೀವ್ರ ಮೇಲ್ವಿಚಾರಣೆ.

  • ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೆ ಕನಿಷ್ಠ 14 ದಿನಗಳ ಕಾಲ ನಿರ್ಬಂಧಗಳನ್ನು ವಿಧಿಸುವುದು.

  • ಜಿಲ್ಲೆಯ ಪ್ರದೇಶವಾರು ಸಡಿಲಿಕೆ / ನಿರ್ಬಂಧದ ಬಗ್ಗೆ ಸ್ಪಷ್ಟವಾಗಿ ತಿಳಿಸುವುದು.


ಮಾನಿಟರಿಂಗ್ ಕಾರ್ಯವಿಧಾನ

  • ಈ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

  • ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

  • ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ಸಮೂಹಗಳ ಆಧಾರದ ಮೇಲೆ ಸೂಕ್ಷ್ಮ ವಿಶ್ಲೇಷಣೆ ಮಾಡಬೇಕು.

  • ಕೊನೆಯದಾಗಿ, ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ತಂತ್ರವನ್ನು ಕಾರ್ಯಗತಗೊಳಿಸಿ ಮತ್ತು ಕೋವಿಡ್ -19 ಸೂಕ್ತ ನಡವಳಿಕೆಯನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.


ಎರಡು ತಿಂಗಳ ಹಿಂದೆ ಹಲವು ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಇತ್ತು. ಕೊರೋನಾ ನಿಯಂತ್ರಣಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ಲಾಕ್​ಡೌನ್​ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದ್ದವು. ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಂತೆ ಲಾಕ್ಡೌನ್​ ಸಡಿಲಿಕೆಗೊಳಿಸಿದೆ. ಕರ್ನಾಟಕದಲ್ಲೂ ಸಹ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿದೆ.​

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: