ಇಂದು ದೆಹಲಿಯಿಂದ ಆಗಮಿಸಿದ ಎರಡನೇ ವಿಶೇಷ ರೈಲು; ಎಲ್ಲಾ ಪ್ರಯಾಣಿಕರ ಕ್ವಾರಂಟೈನ್‌ಗೆ ಸಿದ್ಧತೆ

ಯಾವುದೇ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ ಎಂದು ದೆಹಲಿಯ ಕರ್ನಾಟಕ ಭವನ ನಿನ್ನೆ ಪ್ರಕಟಣೆ ಹೊರಡಿಸಿ ಸ್ಪಷ್ಟಪಡಿಸಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಮೇ 16); ಗುರುವಾರ ಸಂಜೆ ದೆಹಲಿಯಿಂದ ಹೊರಟಿದ್ದ ಎರಡನೇ ವಿಶೇಷ ರೈಲು ಇಂದು ಬೆಳಗ್ಗೆ 6.40ಕ್ಕೆ ಬೆಂಗಳೂರು ಕೆಎಸ್ಆರ್ ರೈಲ್ವೆ ನಿಲ್ದಾಣ ತಲುಪಿದ್ದು, ಎಲ್ಲಾ ಪ್ರಯಾಣಿಕರನ್ನೂ ಕ್ವಾರಂಟೈನ್ ಮಾಡಲು ಸಿದ್ದತೆ ನಡೆಸಲಾಗಿದೆ.

  ದೆಹಲಿಯಿಂದ ಕಳೆದ ಮಂಗಳವಾರ ಮೊದಲ ರೈಲು ಬೆಂಗಳೂರಿಗೆ ತಲುಪಿತ್ತು. ಆದರೆ,  ಪ್ರಯಾಣಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಂಚಾರಕ್ಕೆ ಮುಂಚಿತವಾಗಿ ತಿಳಿಸಿರಲಾಗಿಲ್ಲ. ಇದು ಅಧಿಕಾರಿಗಳ ಮತ್ತು ಪ್ರಯಾಣಿಕರ ನಡುವೆ ದೊಡ್ಡ ಮಟ್ಟದ ವಾಗ್ವಾದಕ್ಕೆ ಕಾರಣವಾಗಿತ್ತು.

  ಈ ಹಿನ್ನೆಲೆಯಲ್ಲಿ ಯಾವುದೇ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ ಎಂದು ದೆಹಲಿಯ ಕರ್ನಾಟಕ ಭವನ ನಿನ್ನೆ ಪ್ರಕಟಣೆ ಹೊರಡಿಸಿ ಸ್ಪಷ್ಟಪಡಿಸಿತ್ತು.

  ಹೀಗಾಗಿ ಇಂದು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಎಲ್ಲಾ ಪ್ರಯಾಣಿಕರನ್ನೂ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ಪ್ರಯಾಣಿಕರು ಇಚ್ಚಿಸುವ ಬೆಂಗಳೂರಿನ ವಿವಿಧ ಸ್ಟಾರ್ ಹೊಟೇಲ್, ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ.

   

  ಇದನ್ನೂ ಓದಿ : ವಿಶೇಷ ರೈಲಿನಲ್ಲಿ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ; ಪ್ರಕಟಣೆ ಹೊರಡಿಸಿದ ಸರ್ಕಾರ
  First published: