Bengaluru: ಇನ್ಮುಂದೆ ಮಾಸ್ಕ್ ಹಾಕದಿದ್ರೂ ದಂಡ ವಿಧಿಸಲ್ವಾ? ಕೋವಿಡ್ 19 ನಿಯಮಗಳಿಗೆ ಬೀಳುತ್ತಾ ಬ್ರೇಕ್!?

ಪ್ರತಿನಿತ್ಯ ಮಾಸ್ಕ್ ದಂಡ ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು. ಇದೀಗ ದಂಡ ವಿಧಿಸೋದನ್ನು ಕಡಿಮೆ ಮಾಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ (Covid 19) ಪ್ರಕರಣಗಳ ಸಂಖ್ಯೆ  ಸಂಪೂರ್ಣವಾಗಿ ಕಡಿಮೆಯಾಗಿರುವ ಹಿನ್ನಲೆ, ಮಾಸ್ಕ್ (Mask)  ಧರಿಸುವ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ . ಹೀಗಾಗಿ ನಗರದಲ್ಲಿ ಮಾಸ್ಕ್ ಧರಿಸದವರಿಗೆ, ದೈಹಿಕ ಅಂತರ (Physical Distance) ಕಾಪಾಡದವರಿಗೆ ದಂಡ ವಿಧಿಸುತ್ತಿಲ್ಲ. ಬದಲಾಗಿ, ಮಾಸ್ಕ್ ಧರಿಸುವಂತೆ ಜಾಗೃತಿ (Awareness) ಮೂಡಿಸುವ ಕೆಲಸ ಮಾತ್ರ ನಡೆಸಲು ಮೌಖಿಕ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಮಾಸ್ಕ್ ದಂಡ (Fine) ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು. ಆದ್ರೆ ಭಾನುವಾರ ಮಾಸ್ಕ್ ಧರಿಸದ 20 ಜನರಿಂದ 5 ಸಾವಿರ ರೂ. ಮಾತ್ರ ದಂಡ ಸಂಗ್ರಹಿಸಲಾಗಿದೆ.

‘ದಂಡ ಹಾಕುವುದನ್ನು ಮಾತ್ರ ಕಡಿಮೆ ಮಾಡಲಾಗಿದೆ’

ಮೂರನೇ ಅಲೆ ಹೆಚ್ಚಾಗಿದ್ದ ದಿನಗಳಲ್ಲಿ, 500, 600 ಪ್ರಕರಣಗಳಿಗೆ ದಂಡ ಹಾಕಲಾಗ್ತಿತ್ತು. ಸದ್ಯ 20, 30 ಜನರಿಗೆ ಮಾತ್ರ ದಂಡ ವಿಧಿಸಲಾಗ್ತಿದೆ. ಇನ್ನು ದೈಹಿಕ ಅಂತರ ಪ್ರಕರಣಕ್ಕೆ  ದಂಡ ಹಾಕುವುದನ್ನು ಮಾರ್ಚ್ 7 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಮಾಸ್ಕ್ ನಿಯಮ ತೆರವು ಇಲ್ಲ

ಕೇಂದ್ರ ಸರ್ಕಾರದ ಸೂಚನೆಯಂತೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯೂ ಇನ್ನು ಅನ್ವಯವಾಗುವುದಿಲ್ಲ. ಯಾವುದೇ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ಇದರಡಿ ದಾಖಲಾಗುವುದಿಲ್ಲ. ಆದರೆ ಕೇಂದ್ರ ಆರೋಗ್ಯ ಇಲಾಖೆ ಆಗಸ್ಟ್​ ವರೆಗೂ ಕೋವಿಡ್ ನಿಯಮಾವಳಿ ಮುಂದುವರಿಸುವ ಚಿಂತನೆಯಲ್ಲಿದೆ.

ಇದನ್ನೂ ಓದಿ: Covid19 Restrictions: ಮಾರ್ಚ್ 31 ರಿಂದ ಕೋವಿಡ್ 19 ನಿರ್ಬಂಧ ನಿಯಮಗಳು ಇರೋದಿಲ್ಲ, ಮಾಸ್ಕ್ ಹಾಕೋದು ಮಾತ್ರ ಕಡ್ಡಾಯ

ವಿದೇಶಗಳಲ್ಲಿ ನಾಲ್ಕನೇ ಅಲೆ ತೀವ್ರವಾಗಿದೆ

ದೇಶದಲ್ಲಿ ಕೋವಿಡ್​  ಇಳಿಕೆಯಾಗಿದ್ದರೂ, ವಿಶ್ವದ ಬೇರೆ ಕಡೆಗಳಲ್ಲಿ ನಾಲ್ಕನೇ ಅಲೆ ತೀವ್ರವಾಗಿದೆ. ಹೀಗಾಗಿ ಎಲ್ಲಾ ಕಡೆ ಪ್ಯಾಂಡಮಿಕ್ - ಎಂಡಮಿಕ್ ಆಗುವವರೆಗೂ ಮಾಸ್ಕ್ ನಿಯಮದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಮನೆಯಿಂದ ಹೊರಬಂದರೆ ಮಾಸ್ಕ್, ಹಾಗೂ ಕೋವಿಡ್ ಕಂಟೈನ್ ಮೆಂಟ್ ನಿಯಮಗಳನ್ನು ರದ್ದುಮಾಡದೆ, ಮುಂದುವರೆಸಲು ತಿಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ.

ಭಾರದಲ್ಲಿ ಕೊರೊನಾ ಕೇಸ್​ ಇಳಿಕೆ

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಜನರು ಕೂಡ ಕೊರೊನಾ ಮಹಾಮಾರಿ ಭಯದಿಂದ ಹೊರಬಂದಿದ್ದಾರೆ. ಜತೆಗೆ ಕೊವಿಡ್​ 19 ಲಸಿಕೆ ಅಭಿಯಾನವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್​ ಸೋಂಕಿನ ಪ್ರಸರಣ ತಗ್ಗಿದೆ. ಹಾಗಿದ್ದಾಗ್ಯೂ ಚೀನಾ, ದಕ್ಷಿಣ ಕೊರಿಯಾ, ಯುಕೆ, ಸಿಂಗಾಪುರ, ಫ್ರಾನ್ಸ್​, ಜರ್ಮನಿಗಳಲ್ಲಿ ಮತ್ತೆ ಹೊಸದಾಗಿ ಕೊವಿಡ್ 19 ಪ್ರಸರಣ ಉತ್ತುಂಗಕ್ಕೇರಿದ್ದು, ಲಾಕ್​ಡೌನ್​​ನಂಥ ನಿರ್ಬಂಧಗಳನ್ನು ಹೇರಲಾಗುತ್ತಿದೆ.  ಆದರೂ ಕೂಡ ಕೇಂದ್ರ ಸರ್ಕಾರ ಎಲ್ಲ ರೀತಿಯ ಕೊವಿಡ್ 19 ನಿರ್ಬಂಧ ಮಾರ್ಗಸೂಚಿಗಳನ್ನು ಮಾರ್ಚ್​ 31ರಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ಕೊವಿಡ್ 19 ನಿರ್ಬಂಧಕ್ಕೆ ಬಿತ್ತು ಬ್ರೇಕ್​

ನಿರ್ಬಂಧ ತೆಗೆದುಹಾಕುವ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಇರುವ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಅನ್ವಯಿಸುವ ಅಗತ್ಯವಿಲ್ಲ ಎಂದು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಆದರೆ ಮಾಸ್ಕ್​ವೊಂದನ್ನು ಕಡ್ಡಾಯವಾಗಿ ಧರಿಸಬೇಕು.

ಇನ್ನು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಲಾಗಿದೆ.  ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಈ  ಪ್ರಕಟಣೆಯನ್ನು ಪರಿಗಣಿಸಬೇಕು. ಈ ಹಿಂದೆ ಕೊವಿಡ್​ 19 ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ವಿಧಿಸಲಾಗಿದ್ದ ಮಾರ್ಗಸೂಚಿಗಳನ್ನು ರದ್ದು ಮಾಡಬಹುದು ಎಂದೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Coronavirus: ಇಸ್ರೇಲ್‌ನಲ್ಲಿ ಪತ್ತೆಯಾಗಿದೆಯಂತೆ ಕೋವಿಡ್‌ನ ಹೊಸ ರೂಪಾಂತರಿ! ಲಕ್ಷಣಗಳು ಹೇಗಿವೆ ಗೊತ್ತಾ?

ಆಗಸ್ಟ್​ನಲ್ಲಿ ಕೊರೊನಾ 4ನೇ ಅಲೆ ಫಿಕ್ಸ್  ಸುಧಾಕರ್​ ಹೇಳಿಕೆ

ಬೆಂಗಳೂರು : ಕೊರೊನಾ (Corona) ಮಹಾಮಾರಿ ಹೋಗೇಬಿಡ್ತು ಅನ್ನೋ ಹಾಗೇ ಜನರೆಲ್ಲಾ ನಿರಾಳರಾಗಿದ್ದಾರೆ. ಎಷ್ಟೋ ಜನ ಮಾಸ್ಕ್ (Mask)​ ಹಾಕಿಕೊಳ್ಳದೆ ಓಡಾಡುತ್ತಾರೆ. ಆಗಸ್ಟ್​ ಕೋವಿಡ್ ನಾಲ್ಕನೇ ಅಲೆ ಆಗಸ್ಟ್  ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ (Forecast) ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ (Dr. Sudhakar) ತಿಳಿಸಿದ್ದಾರೆ.
Published by:Pavana HS
First published: