HOME » NEWS » Coronavirus-latest-news » THE PASSPORT SERVICE WILL START FROM MAY 15 MAK

ಲಾಕ್ ಡೌನ್ ಸಡಿಲಿಕೆ ಹಿನ್ನಲೆ; ಮೇ 15ರಿಂದ ಆರಂಭವಾಗಲಿದೆ ಪಾಸ್‌ಪೋರ್ಟ್‌ ಸೇವೆ

ಬೆಂಗಳೂರಿನಲ್ಲಿ ಲಾಲ್ ಬಾಗ್ ರಸ್ತೆ‌ ಹಾಗೂ ಮಾರತ್ ಹಳ್ಳಿಯಲ್ಲಿ ಪಾಸ್ ಪೊರ್ಟ್ ಸೇವಾ ಕೇಂದ್ರಗಳಿವೆ. ಈ ಎರಡೂ ಕೇಂದ್ರಗಳಲ್ಲಿ ಸೇವೆ ಆರಂಭವಾಗಲಿದ್ದು, ಪಾಸ್‌ಪೋರ್ಟ್‌ ಆಗತ್ಯ ಇದ್ದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

news18-kannada
Updated:May 14, 2020, 11:43 AM IST
ಲಾಕ್ ಡೌನ್ ಸಡಿಲಿಕೆ ಹಿನ್ನಲೆ; ಮೇ 15ರಿಂದ ಆರಂಭವಾಗಲಿದೆ ಪಾಸ್‌ಪೋರ್ಟ್‌ ಸೇವೆ
ಬೆಂಗಳೂರು ಪಾಸ್‌ಪೋರ್ಟ್‌ ಕೇಂದ್ರ.
  • Share this:
ಬೆಂಗಳೂರು (ಮೇ 14); ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಮೇ 15 ರಿಂದ ಬೆಂಗಳೂರಿನಲ್ಲಿ ಪಾಸ್‌ಪೋರ್ಟ್‌ ಸೇವೆ ಆರಂಭವಾಗಲಿದೆ ಎಂದು ರಿಜಿನಲ್ ಪಾಸ್ ಪೊರ್ಟ್ ಅಧಿಕಾರಿ ಭಾರತ್ ಕುಮಾರ್ ಕುತಿಯಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಲಾಲ್ ಬಾಗ್ ರಸ್ತೆ‌ ಹಾಗೂ ಮಾರತ್ ಹಳ್ಳಿಯಲ್ಲಿ ಪಾಸ್ ಪೊರ್ಟ್ ಸೇವಾ ಕೇಂದ್ರಗಳಿವೆ. ಈ ಎರಡೂ ಕೇಂದ್ರಗಳಲ್ಲಿ ಸೇವೆ ಆರಂಭವಾಗಲಿದ್ದು, ಪಾಸ್‌ಪೋರ್ಟ್‌ ಆಗತ್ಯ ಇದ್ದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಧ್ಯಮ ಪ್ರಕಟಣೆ.

ಆದರೆ, ಪಾಸ್ ಪೊರ್ಟ್ ಅರ್ಜಿದಾರರಿಗೆ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯವಾಗಿ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿರಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ : Nirmala Sitharaman: 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ವಿವರಣೆ; ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಸುದ್ದಿಗೋಷ್ಠಿ ಸಾಧ್ಯತೆ?
First published: May 14, 2020, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories