HOME » NEWS » Coronavirus-latest-news » THE PARAMEDIC STAFF WAS NOT TO GO TO PADARAYANAPURA AT NIGHT SAYS CHAMARAJAPETE MLA ZAMEER AHMED MAK

Padarayanapura Riot: ಪಾದರಾಯನಪುರಕ್ಕೆ ವೈದ್ಯ ಸಿಬ್ಬಂದಿಗಳು ರಾತ್ರಿ ವೇಳೆ ಹೋಗಬಾರದಿತ್ತು; ಜಮೀರ್ ಅಹಮದ್ ಅಸಮಾಧಾನ

Padarayanapura Violence: ವೈದ್ಯಕೀಯ ಸಿಬ್ಬಂದಿಗಳು ಪಾದರಾಯನಪುರಕ್ಕೆ ರಾತ್ರಿ ವೇಳೆ ಹೋಗ್ಬೇಡಿ ಅಂತ ಹೇಳಿದ್ದೆ. ಆದರೆ, ಅವರು ನಮ್ಮ ಮಾತು ಕೇಳದೆ ಹೋಗಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:April 20, 2020, 12:43 PM IST
Padarayanapura Riot: ಪಾದರಾಯನಪುರಕ್ಕೆ ವೈದ್ಯ ಸಿಬ್ಬಂದಿಗಳು ರಾತ್ರಿ ವೇಳೆ ಹೋಗಬಾರದಿತ್ತು; ಜಮೀರ್ ಅಹಮದ್ ಅಸಮಾಧಾನ
ಮಾಜಿ ಸಚಿವ ಜಮೀರ್‌ ಅಹಮದ್
  • Share this:
ಬೆಂಗಳೂರು (ಏಪ್ರಿಲ್ 20); ಪಾದರಾಯನಪುರಕ್ಕೆ ವೈದ್ಯ ಸಿಬ್ಬಂದಿಗಳನ್ನು ರಾತ್ರಿ ವೇಳೆ ಹೋಗುವುದು ಬೇಡ ಎಂದು ನಾನು ಮೊದಲೇ ತಿಳಿಸಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ ಎಂದು ಚಾಮಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾದರಾಯನಪುರವನ್ನು ಈಗಾಗಲೇ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು, ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ನಲ್ಲಿ ಇಡಲು ನಿನ್ನೆ ರಾತ್ರಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ಆರೋಗ್ಯ ಸಿಬ್ಬಂದಿಗಳು ಮತ್ತು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ಕುರಿತು ನ್ಯೂಸ್‌18 ಜೊತೆಗೆ ಮಾತನಾಡಿರುವ ಶಾಸಕ ಜಮೀರ್ ಅಹಮದ್, "ವೈದ್ಯಕೀಯ ಸಿಬ್ಬಂದಿಗಳು ಪಾದರಾಯನಪುರಕ್ಕೆ ರಾತ್ರಿ ವೇಳೆ ಹೋಗ್ಬೇಡಿ ಅಂತ ಹೇಳಿದ್ದೆ. ಆದರೆ, ಅವರು ನಮ್ಮ ಮಾತು ಕೇಳದೆ ಹೋಗಿದ್ದಾರೆ. ರಾತ್ರಿ ಹೋಗಬಾರದಿತ್ತು. ಅಷ್ಟೊಂದು ಜನರ ಬಳಿ ಹೋಗೋವಾಗ ಬೆಳಗಿನ ವೇಳೆ ಹೋಗಬೇಕಿತ್ತು. ಆದರೆ, ಇಂತಹ ಘಟನೆ ಆಗಬಾರದಿತ್ತು. ಘಟನೆಯಲ್ಲಿ ಯಾರೆಲ್ಲಾ ಇದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Padarayanapura Riot: ರಾಜ್ಯವನ್ನೇ ನಡುಗಿಸಿದ ಪಾದರಾಯನಪುರ ಗಲಾಟೆ, ಕಂಬಿ ಹಿಂದೆ ಆರೋಪಿಗಳು; ಇಲ್ಲಿದೆ ಘಟನೆಯ ಕಂಪ್ಲೀಟ್ ಡೀಟೈಲ್ಸ್‌!
Youtube Video
First published: April 20, 2020, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories