Coronavirus India : ಎರಡು ಲಕ್ಷದ ಸನಿಹಕ್ಕೆ ಬಂದ ದೇಶದ ಕೊರೋನಾ ಪೀಡಿತರ ಸಂಖ್ಯೆ

ನಿನ್ನೆ ಒಂದೇ ದಿನ‌ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬಂದಿದ್ದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2 ಲಕ್ಷದ ಗಡಿ ಸಮೀಪ ಬಂದಿದೆ.

news18-kannada
Updated:June 2, 2020, 10:27 AM IST
Coronavirus India : ಎರಡು ಲಕ್ಷದ ಸನಿಹಕ್ಕೆ ಬಂದ ದೇಶದ ಕೊರೋನಾ ಪೀಡಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ(ಜೂ.02): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್​ಡೌನ್​​ ಮಾಡಿ, ಸೋಂಕು ಹರಡುವಿಕೆ ತೀವ್ರವಾಗಿರುವಾಗ ಹೆಸರಿಗೆ ಮಾತ್ರ ಲಾಕ್​ಡೌನ್​​ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ನಿನ್ನೆ ಒಂದೇ ದಿನ‌ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬಂದಿದ್ದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2 ಲಕ್ಷದ ಗಡಿ ಸಮೀಪ ಬಂದಿದೆ.

ಕಳೆದ ವಾರ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಮೇ 30 ರಿಂದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸೋಮವಾರ ಒಂದೇ ದಿನ ದೇಶದಲ್ಲಿ 8,171 ಪ್ರಕರಣಗಳು ಕಂಡು ಬಂದಿವೆ. ಇದರಿಂದ ಭಾರತದ ಕೊರೋನಾ ವೈರಸ್ ಪೀಡಿತರ ಸಂಖ್ಯೆ ಸಂಖ್ಯೆ1,98,706ಕ್ಕೆ ಏರಿಕೆಯಾಗಿದೆ.

ಇದಲ್ಲದೆ ‌ನಿನ್ನೆ ಒಂದೇ ದಿನ ಕೊರೋನಾದಿಂದ 204 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 5,598ಕ್ಕೆ ಏರಿಕೆಯಾಗಿದೆ. ಕೊರೋನಾ ದಿಂದ ಈವರೆಗೆ 95,526 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಇದನ್ನೂ ಓದಿ : ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ ಕೊರೋನಾ ಓವನ್; ಇದರ ವಿಶೇಷವೇನು ಗೊತ್ತಾ?

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10 ರಂದು 4,213 ಜನರಿಗೆ, ಮೇ 11 ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14 ರಂದು 3,967 ಜನರಿಗೆ, ಮೇ 15 ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18 ರಂದು 4,970, ಮೇ 19 ರಂದು 5,611, ಮೇ 20ರಂದು 5,609, ಮೇ 21 ರಂದು 6,088, ಮೇ 22ರಂದು 6,654, ಮೇ 23 ರಂದು 6,767, ಮೇ 24 ರಂದು 6,977, ಮೇ 25 ರಂದು 6,535, ಮೇ 26 ರಂದು 6,387, ಮೇ 27 ರಂದು 6,566, ಮೇ 28 ರಂದು 7,466, ಮೇ 29 ರಂದು 7,964, ಮೇ 30 ರಂದು 8,380, ಮೇ 31 ರಂದು 8,392 ಹಾಗೂ ಜೂನ್ 1 ರಂದು 8,171 ಹೊಸ ಪ್ರಕರಣಗಳು ಪತ್ತೆಯಾಗಿವೆ.
First published: June 2, 2020, 10:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading