HOME » NEWS » Coronavirus-latest-news » THE MODERN BHAGIRATH AGILE YOGESH WHICH SUPPLIES 50 THOUSAND LITERS OF WATER DAILY TO HASSAN HK

ಹಾಸನ ನಗರಕ್ಕೆ ಪ್ರತಿದಿನ 50 ಸಾವಿರ ಲೀಟರ್ ನೀರು ಪೂರೈಸುತ್ತಿರುವ ಆಧುನಿಕ ಭಗೀರಥ ಅಗಿಲೆ ಯೋಗೇಶ್

ನಗರದ ಕೆಲವೆಡೆ ಎರಡು ಸಾವಿರ ಮತ್ತು ಮೂರು ಸಾವಿರ ಲೀಟರ್ ವುಳ್ಳ ನೀರಿನ ಬೃಹತ್ ಟ್ಯಾಂಕರ್ ಗಳನ್ನ ಅಳವಡಿಸಲಾಗಿದೆ.

news18-kannada
Updated:May 17, 2020, 7:45 AM IST
ಹಾಸನ ನಗರಕ್ಕೆ ಪ್ರತಿದಿನ 50 ಸಾವಿರ ಲೀಟರ್ ನೀರು ಪೂರೈಸುತ್ತಿರುವ ಆಧುನಿಕ ಭಗೀರಥ ಅಗಿಲೆ ಯೋಗೇಶ್
ಕುಡಿಯುವ ನೀರು
  • Share this:
ಹಾಸನ(ಮೇ.17): ಸಹರಾ ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಅಗಿಲೆ ಯೋಗಿಶ್ ರವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತಿನಿತ್ಯ ಹಾಸನ ನಗರಕ್ಕೆ 50 ಸಾವಿರ ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಹಾಸನ ನಗರದ 13 ಕಡೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ.

ಹಾಸನ ನಗರದಲ್ಲಿ ನಗರಸಭೆ ಮಾಡದ ಕಾರ್ಯವನ್ ಅಗಿಲೆ ಯೋಗೇಶ್ ರವರು ಮಾಡುತ್ತಿದ್ದು, ಸಹರಾ ಜನಸೇವಾ ಟ್ರಸ್ಟ್ ನ ಮೂಲಕ ವಿದ್ಯಾನಗರ, ಗೌರಿಕೊಪ್ಪಲು, ದಾಸರಕೊಪ್ಪಲು, ಪೆನ್ಷನ್ ಮೊಹಲ್ಲಾ ಸೇರಿ ಹಾಸನದ ನಗರದ ಹಲವೆಡೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿ ನೀರು ಪೂರೈಸುತ್ತಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕದಿಂದ ಹಾಸನ ನಗರದ ಜನರಿಗೆ ತುಂಬಾ ಅನುಕೂಲವಾಗಿದೆ.

ಕೇವಲ 5 ರೂಪಾಯಿಗೆ 20 ಲೀಟರ್ ನೀರು ನೀಡುತ್ತಿದ್ದು, ಉಚಿತವಾಗಿ ನೀರು ಪೂರೈಸಿದ್ರೆ ದುರುಪಯೋಗ ಆಗುತ್ತೆ ಎಂದು 5 ರೂಪಾಯಿ ದರ ನಿಗದಿ ಮಾಡಿದ್ದಾರೆ. 5 ರೂಪಾಯಿ ಕಾಯಿನ್ ನ್ನು ಮಿಷನ್ ಗೆ ಹಾಕಿದ್ರೆ 20 ಲೀಟರ್ ನೀರು ಬರುತ್ತದೆ. ಅಂತಹ ಮಿಷನರಿಗಳನ್ನ ಅಳವಡಿಸಿ ಇಡೀ ನಗರದ ಜನತೆಗೆ ಶುದ್ದ ಕುಡಿಯುವ ನೀರು ಪೂರೈಸುತ್ತಿರುವ ಅಗಿಲೆ ಯೋಗೇಶ್ ರವರ ಈ ಕಾರ್ಯಕ್ಕೆ ಹಾಸನ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ ಕೆಲವೆಡೆ ಎರಡು ಸಾವಿರ ಮತ್ತು ಮೂರು ಸಾವಿರ ಲೀಟರ್ ವುಳ್ಳ ನೀರಿನ ಬೃಹತ್ ಟ್ಯಾಂಕರ್ ಗಳನ್ನ ಅಳವಡಿಸಲಾಗಿದೆ. ಹಾಸನ ತಾಲೂಕಿನ ಮಾವಿನಹಳ್ಳಿಯಲ್ಲಿ ಇದರ ಪ್ರಮುಖ ನೀರಿನ ಘಟಕವನ್ನ ಸ್ಥಾಪಿಸಲಾಗಿದೆ. ಆಯಾ ಘಟಕಗಳಲ್ಲಿ ನೀರು ಖಾಲಿಯಾದ ತಕ್ಷಣ ಈ ಪ್ರಮುಖ ಘಟಕದಿಂದ ಟ್ಯಾಂಕರ್ ಗಳಲ್ಲಿ ನೀರು ಪೂರೈಸಲಾಗುತ್ತದೆ.

ಹಾಸನ ನಗರ ಮತ್ತು ಸುತ್ತ ಮುತ್ತ ಇಲ್ಲಿವರೆಗೂ 13 ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆದಿರುವುದರಿಂದ 20 ಲೀಟರ್ ಗೆ 5 ರೂಪಾಯಿ ಹಣ ನಿರ್ವಹಣೆ ವೆಚ್ಚಕ್ಕೂ ಸಾಲುತ್ತಿಲ್ಲಾ ಎಂದು ಅಗಿಲೆ ಯೋಗೇಶ್ ಹೇಳುತ್ತಿದ್ದಾರೆ.

ಪ್ರತಿ ತಿಂಗಳಿಗೆ ಎಲ್ಲಾ ಘಟಕಗಳಿಂದ ಸುಮಾರು 50 ಸಾವಿರ ಹಣ ವೆಚ್ಚವಾಗುತ್ತಿದೆ. ಆದರೆ, ಈ ಹಣವನ್ನ ಅಗಿಲೆ ಯೋಗೇಶ್ ರವರೇ ಖರ್ಚು ಮಾಡುತ್ತಿದ್ದು , ಈ ಎಲ್ಲಾ ನಿರಿನ ಘಟಕಗಳನ್ನೂ ಸ್ವಂತ ಖರ್ಚಿನಲ್ಲಿ ತೆರೆಯಲಾಗಿದೆ. ಎಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇದೆ ಅಲ್ಲಿಗೆ ಬಡ ಜನರಿಗೆ ಅನುಕೂಲವಾಗಲೆಂದು ನೀರಿನ ಘಟಕ ನಿರ್ಮಿಸಿದ್ದೇನೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ : ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮೇಲ್ಗಾಲುವೆ ತುಮಕೂರಿನಲ್ಲಿ ನಿರ್ಮಾಣ; ವಿದೇಶೀ ಎಂಜಿನಿಯರ್​ಗಳು ಚಕಿತಅಗಿಲೆ ಯೋಗೇಶ್ ರವರ ಈ ಸಮಾಜ ಸೇವೆಗೆ ಹಾಸನ ನಗರದ ಜನರು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಈ ಕಾರ್ಯದಿಂದಾಗಿ ಬೇರೆ ಬೇರೆ ನಗರ ಮತ್ತು ಗ್ರಾಮಾಂತರ ಭಾಗದ ಜನರು ತಮ್ಮ ವಾರ್ಡ್ ಮತ್ತು ಗ್ರಾಮಗಳಲ್ಲಿ ಈ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸುವಂತೆ ಅಗಿಲೆ ಯೋಗೇಶ್  ಅವರ ಬಳಿ ಬಾರೀ ಒತ್ತಾಯಿಸುತ್ತಿದ್ದಾರೆ.  ಒಟ್ಟಾರೆ ಅಗಿಲೆ ಯೋಗೇಶ್ ರ ಈ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ.
Youtube Video
First published: May 17, 2020, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories