covid vaccine near me; ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ ಎಂದು ತಿಳಿಯಬೇಕೇ? ಹೀಗೆ ಸರ್ಚ್ ಮಾಡಿ!

ಇನ್ನು ಮುಂದೆ ಕೋವಿಡ್ ಲಸಿಕೆ ಪಡೆಯಲು ಸರತಿ ಸಾಲಿನ ದಿನಗಟ್ಟಲೇ ನಿಲ್ಲಬೇಕಾದ ಅವಶ್ಯಕತೆ ಇಲ್ಲ. ತಾವು ಇದ್ದ ಸ್ಥಳದಿಂದಲೇ ಮೊಬೈಲ್​ನಲ್ಲಿ ಕೋವಿಡ್ ವ್ಯಾಕ್ಸಿನ್ ನಿಯರ್ ಮಿ ಎಂದು ಗೂಗಲ್ ಸರ್ಚ್ ಮಾಡಿದರೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ನೀವು ಯಾವ ಸಮಯದಲ್ಲಿ ಹೋಗಿ ಲಸಿಕೆ ತೆಗೆದುಕೊಳ್ಳಬಹುದು ಎಂದು ಸುಲಭವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ನವದೆಹಲಿ: (New Delhi) ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ (COVID Vaccine Campaign) ಭರದಿಂದ ಸಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಸರ್ಕಾರ ಸಹ ಸಕಲ ವ್ಯವಸ್ಥೆ ಮಾಡುತ್ತಿದೆ. ಇದೀಗ ಲಸಿಕೆ ಹಂಚಿಕೆ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಸಾರ್ವಜನಿಕರಿಗೆ ಸುಲಭವಾಗಿ ಲಸಿಕೆ ಸಿಗುವಂತೆ ಮಾಡಲು ನೂತನ ಕ್ರಮ ಒಂದನ್ನು ಜಾರಿಗೆ ತಂದಿದೆ.

    ಕೋವಿಡ್ ಲಸಿಕೆ ಹಂಚಿಕೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಕೆಲವು ನಿಗದಿತ ಸ್ಥಳಗಳಲ್ಲಿ ಮಾತ್ರ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಲಸಿಕೆ ಪಡೆಯಲು ಹೆಚ್ಚು ಜನರು ಸೇರಿ ನೂಕುನುಗ್ಗಲು ಉಂಟಾಗುತ್ತಿದೆ. ಇದರಿಂದ ಕೆಲವು ಜನರು ಲಸಿಕೆ ಪಡೆಯುವುದರಿಂದ ದೂರವೇ ಉಳಿದಿದ್ದಾರೆ. ಮತ್ತೆ ಹಲವರು ನಮ್ಮ ಸುತ್ತ ಎಲ್ಲಿ ಲಸಿಕೆ ನೀಡುತ್ತಿದ್ದಾರೆ. ನೋಂದಣಿ ಮಾಡುವುದು ಹೇಗೆ ಎಂಬ ಗೊಂದಲದಿಂದ ಇದ್ದಾರೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಆರೋಗ್ಯ ಸಚಿವಾಲಯ ಈಗ ಹೊಸ ಕ್ರಮವನ್ನು ತೆಗೆದುಕೊಂಡಿದೆ.

    ಕೋವಿಡ್ ಲಸಿಕೆ ಹಂಚಿಕೆ ವಿಷಯದಲ್ಲಿ ಆರೋಗ್ಯ ಸಚಿವಾಲಯ ಇದೀಗ ಮಹತ್ವದ ಕ್ರಮ ತೆಗೆದುಕೊಂಡಿದೆ. ನೀವು ಗೂಗಲ್​ನಲ್ಲಿ ಕೋವಿಡ್ ವ್ಯಾಕ್ಸಿನ್ ನಿಯರ್ ಮಿ ಎಂದು ಸರ್ಚ್ ಮಾಡಿದರೆ ನಿಮ್ಮ ಸಮೀಪದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವ ಕೇಂದ್ರ, ನೀವು ಯಾವ ಸಮಯದಲ್ಲಿ ಬರಬಹುದು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೂ ನೋಂದಣಿಯನ್ನು ಸಹ ಮಾಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಹಿತಿ ನೀಡಿದ್ದಾರೆ.

    "The Ministry of Health has taken yet another significant initiative to enhance access to #COVID19 vaccine: Search 'covid vaccine near me' on Google, Check availability of slots & more, Use 'Book Appointment' feature to book a slot," tweets Union Health Minister Mansukh Mandaviya pic.twitter.com/HFJHH8X0D2







    ಇನ್ನು ಮುಂದೆ ಕೋವಿಡ್ ಲಸಿಕೆ ಪಡೆಯಲು ಸರತಿ ಸಾಲಿನ ದಿನಗಟ್ಟಲೇ ನಿಲ್ಲಬೇಕಾದ ಅವಶ್ಯಕತೆ ಇಲ್ಲ. ತಾವು ಇದ್ದ ಸ್ಥಳದಿಂದಲೇ ಮೊಬೈಲ್​ನಲ್ಲಿ ಕೋವಿಡ್ ವ್ಯಾಕ್ಸಿನ್ ನಿಯರ್ ಮಿ ಎಂದು ಗೂಗಲ್ ಸರ್ಚ್ ಮಾಡಿದರೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ನೀವು ಯಾವ ಸಮಯದಲ್ಲಿ ಹೋಗಿ ಲಸಿಕೆ ತೆಗೆದುಕೊಳ್ಳಬಹುದು ಎಂದು ಸುಲಭವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

    ಇದನ್ನು ಓದಿ: Sachin Pilot: ದೇಶದ ಅಭಿವೃದ್ಧಿ 50 ವರ್ಷ ಹಿಂದಕ್ಕೆ ಹೋಗಿದೆ; ಕೇಂದ್ರ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ!

    ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಆಗಸ್ಟ್ 31ರವರೆಗೆ ಸುಮಾರು 50 ಕೋಟಿ ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಅಂದರೆ ದೇಶದ ಜನಸಂಖ್ಯೆಯಲ್ಲಿ ಒಟ್ಟು ಶೇ. 36ರಷ್ಟು ಜನರು ಲಸಿಕೆ ಡೋಸ್ ಪಡೆದುಕೊಂಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರ ಸಂಖ್ಯೆ ಸುಮಾರು 15 ಕೋಟಿ ಜನರು. ಅಂದರೆ ಶೇ.10  ರಷ್ಟು ಜನರು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: