ಶಿವಮೊಗ್ಗ(ಮಾ.30): ತುತ್ತಿನ ಚೀಲ ತುಂಬಿಸುವ ಫಸಲು ಈಗ ಕೊರೋನಾ ಭೀತಿಯಿಂದಾಗಿ ಕೊಳೆಯುವ ಭೀತಿ ಆವರಿಸಿದೆ. ವಾಣಿಜ್ಯ ಬೆಳೆಯಾದ ಅನಾನಸ್ ಬೆಳೆ ಕಟಾವಿಗೆ ಬಂದಿದ್ದು, ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡು ಹೊಲದಲ್ಲೇ ಕೊಳೆಯುವ ಸನ್ನಿವೇಶ ಎದುರಾಗಿ ಸಾವಿರಾರು ರೈತರು ತಮ್ಮ ಫಸಲನ್ನು ಮಾರಾಟ ಮಾಡಲಾಗದೇ ಕಂಗಾಲಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಅನಾನಸ್ ಬೆಳೆಯನ್ನು ಬೆಳೆಯುತ್ತಾರೆ. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲೇ ಅನಾನಸ್, ಬಾಳೆ ಹಾಗೂ ಶುಂಠಿಗೆ ಉತ್ತಮ ದರವಿರುತ್ತದೆ. ಇದೇ ಸಮಯಕ್ಕೆ ಕೊಯ್ಲಿಗೆ ಕಟಾವ ಮಾಡಬೇಕಾಗಿದೆ. ಆದರೆ ಕೊರೋನಾ ಭೀತಿಯಿಂದಾಗಿ ಅನಾನಸ್ ಖರೀದಿಸುವವರಿಲ್ಲದೇ ಹೊಲದಲ್ಲೇ ಕೊಳೆಯುವ ಸ್ಥಿತಿ ಉದ್ಭವವಾಗಿದೆ.
ಸೊರಬ ತಾಲೂಕಿನ ಮಾವಲಿ ಗ್ರಾಮದ ರೈತ ದೇವರಾಜ್ ಎಕರೆಗೆ ಎರಡೂವರೆ ಲಕ್ಷದ ಹಾಗೆ ಒಟ್ಟು 80 ಲಕ್ಷ ರೂಪಾಯಿ ವೆಚ್ಚ ಮಾಡಿ 30 ಎಕರೆಯಲ್ಲಿ 1200 ಟನ್ ಅನಾನಸ್ ಹಣ್ಣು ಕೊಯ್ಲಿಗೆ ಬಂದಿದೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತ ಕಂಗಾಲಾಗಿದ್ದಾನೆ.
ಇದೇ ರೀತಿ ಸೊರಬ ಮತ್ತು ಸಾಗರದಲ್ಲಿ ನೂರಾರು ರೈತರು ಅನಾನಸ್ ಬೆಳೆದಿದ್ದಾರೆ. ಎಲ್ಲ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದೇ ರೀತಿ ಮುಂದುವರಿದರೇ ಅನಾನಸ್ ಬೆಳೆದ ಎಲ್ಲ ರೈತರು ಬೀದಿಗೆ ಬರುತ್ತಾರೆ
ಮಾರುಕಟ್ಟೆಯಲ್ಲಿ ಅನಾನಸ್ ಕೆ.ಜಿ. 20 ರಿಂದ 25 ರೂಪಾಯಿ ಇದ್ದ ಅನಾನಸ್ 7- 8 ರೂಗೆ ತಲುಪಪಿದೆ. ಇವುಗಳನ್ನು ದೆಹಲಿ, ಜಮ್ಮು ಕಾಶ್ಮಿರ, ಪಂಜಾಬ್ ಗೆ ರಪ್ತು ಮಾಡಲಾಗುತ್ತಿತ್ತು. ಕೊರೋನಾ ಭೀತಿಯಿಂದಾಗಿ ಲಾರಿಗಳು ಸಂಚಾರ ಸ್ಥಗಿತವಾಗಿವೆ. ಈ ಹಿನ್ನೆಲೆಯಲ್ಲಿ ಅನಾನಸ್ ಬೆಳೆಯನ್ನು ಕಟಾವು ಮಾಡಲಾಗದೇ ಹೊಲದಲ್ಲೇ ಕೊಳೆಯುತ್ತಿವೆ.
ಇದನ್ನೂ ಓದಿ : ರಾಜ್ಯಕ್ಕೆ ಮಾದರಿಯಾಯ್ತು ರಾಮನಗರದ ಈ ಗ್ರಾ.ಪಂ: ಕೂಲಿಕಾರ್ಮಿಕರು, ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆ
ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ರೈತಾಪಿ ಸಮುದಾಯಕ್ಕೆ ದಿಕ್ಕು ತೊಚದಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ವೆಂಕಟೇಶ್ ಮೆಳವರಗಿ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ